ಈ ಕಾಯಿಲೆ ಇದ್ದವರು ರಾಗಿ ಮುದ್ದೆ ಯಾವುದೇ ಕಾರಣಕ್ಕೂ ತಿನ್ನಬೇಡಿ!

ಮಧುಮೇಹಿಗಳು ಆಹಾರ ಕ್ರಮದಲ್ಲಿ ರಾಗಿಯನ್ನು ಸೇರ್ಪಡೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು.ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವ ರಾಗಿಯು ಆರೋಗ್ಯ ರಕ್ಷಣೆ ಮಾಡುವಲ್ಲಿ ತುಂಬಾ ಲಾಭಕಾರಿ ಹಾಗೂ ಅನಾರೋಗ್ಯಗಳನ್ನು ದೂರವಿಡುವುದು. ಅದರಲ್ಲೂ ಮಧುಮೇಹದ ಸಮಸ್ಯೆಯು ಇರುವಂತಹ ಜನರು ಇದನ್ನು ಸೇವನೆ ಮಾಡಿದರೆ ಅದರಿಂದ ತುಂಬಾ ಲಾಭವಾಗಲಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮಧುಮೇಹಿಗಳಿಗೆ ತುಂಬಾ ಸಮಸ್ಯೆ. ಇಂತಹವರು ರಾಗಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದರಿಂದ ದೇಹದ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುವುದು.

ಗ್ಲುಟೇನ್ ಮುಕ್ತವಾಗಿರುವಂತಹ ರಾಗಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದು ತುಂಬಾ ಪರಿಣಾಮಕಾರಿ. ನಮ್ಮ ರಾಜ್ಯದಲ್ಲಿ ರಾಗಿಯನ್ನು ವಿವಿಧ ರೀತಿಯಿಂದ ಆಹಾರ ಕ್ರಮದಲ್ಲಿ ಬಳಕೆ ಮಾಡುವರು.

ರಾಗಿ ಮುದ್ದೆ,ರಾಗಿ ದೋಸೆ ಮತ್ತು ರಾಗಿ ರೋಟಿ ತಯಾರಿಸಿಕೊಂಡು ಬಳಸಲಾಗುತ್ತದೆ. ಇದು ಮಧುಮೇಹಿಗಳಿಗೆ ತುಂಬಾ ಆರೋಗ್ಯಕಾರಿ ಎಂದು ತಜ್ಞರು ಕೂಡ ಹೇಳುವರು.

ರಾಗಿಯಲ್ಲಿ ಪೋಷಕಾಂಶವು ಸಮೃದ್ಧವಾಗಿದೆ ಮತ್ತು ಇದರಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಗಳು ಕೂಡ ಇವೆ. ರಾಗಿಯಲ್ಲಿ ಉತ್ತಮ ಪ್ರಮಾಣದ ಪಾಲಿಫೆನಾಲ್, ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಅಮಿನೋ ಆಮ್ಲಗಳಿದ್ದು, ಇದು ಮಧುಮೇಹಿಗಳಿಗೆ ಲಾಭಕಾರಿ.

ರಾಗಿಯನ್ನು ಹೇಗೆ ಬಳಕೆ ಮಾಡಿಕೊಂಡರೂ ಅದರಲ್ಲಿ ಇರುವಂತಹ ನಾರಿನಾಂಶವು ದೇಹಕ್ಕೆ ಒಳ್ಳೆಯದು. ಮಧುಮೇಹಿಗಳಿಗೆ ಏನೇ ತಿಂದರೆ ಪದೇ ಪದೇ ಹಸಿವಾಗುತ್ತಲಿರುವುದು. ರಾಗಿ ಸೇವನೆ ಮಾಡಿದರೆ ಅದರಿಂದ ಬಯಕೆಯನ್ನು ದೂರವಿಡಬಹುದು ಮತ್ತು ಇದು ಜೀರ್ಣಕ್ರಿಯೆಗೂ ಸಹಕಾರಿ.

ಇದು ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರವಾಗಿದ್ದು,ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ತಡೆಯುವುದು ಮತ್ತು  ಮತ್ತು ಟೈಪ್-2 ಮಧುಮೇಹ ಬೆಳವಣಿಗೆ ಆಗುವುದನ್ನು ತಡೆಯುವುದು. ಟೈಪ್ 2 ಮಧುಮೇಹಿಗಳ ದೇಹದಲ್ಲಿ ನಮ್ಮ ದೇಹವು ಸಕ್ಕರೆಯನ್ನು ಶಕ್ತಿಯಾಗಿ ಬಳಸುವಂತಹ ಕ್ರಿಯೆಗೆ ತೊಂದರೆ ಆಗುವುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಾಮಾನ್ಯವಾಗುವುದು.

ಇದರಿಂದಾಗಿ ಮಧುಮೇಹಿಗಳ ಮೂಳೆಗಳು ಕೂಡ ದುರ್ಬಲವಾಗುವುದು. ಕ್ಯಾಲ್ಸಿಯಂ ಅಧಿಕವಾಗಿ ಇರುವಂತಹ ರಾಗಿಯು ಮೂಳೆಯ ಆರೋಗ್ಯವನ್ನು ಕಾಪಾಡಿಕೊಂಡು ಅದನ್ನು ಬಲಪಡಿಸಲು ಸಹಕಾರಿ.

ಕಿಡ್ನಿಯಲ್ಲಿ ಕಲ್ಲುಗಳು ಅಥವಾ ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದರೆ ರಾಗಿಯಿಂದ ಮಾಡಿದ ಆಹಾರ ಪದಾರ್ಥಗನ್ನು ತಿನ್ನಬೇಡಿ. ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆ, ರೊಟ್ಟಿ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳಬಹುದು. ರಾಗಿಯು ಕಬ್ಬಿಣ ಮತ್ತು ನಾರಿನಂಥ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ

Leave A Reply

Your email address will not be published.