ವರಮಹಾಲಕ್ಷ್ಮಿ ದೇವಿಯನ್ನು ಯಾವ ದಿಕ್ಕಿನಲ್ಲಿ ಕೂರಿಸಿ ಪೂಜೆ ಮಾಡಬೇಕು? ಎಷ್ಟು ದೀಪಗಳನ್ನು ಹಚ್ಚಬೇಕು!

ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಹಾಗು ಶ್ರೇಷ್ಠವಾದಂತಹ ಸಮಯ ಯಾವುದು ಎಂದು ತಿಳಿದುಕೊಳ್ಳೋಣ. ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಸಮಯ ಎಂದರೆ ಅದು ಬ್ರಾಹ್ಮೀ ಮುಹೂರ್ತ. ಬೆಳಗಿನ ಜಾವ 3:30 ರಿಂದ 5:45 ವರೆಗೂ ಕೂಡ ಒಳ್ಳೆಯ ಒಂದು ಸಮಯ ಇರುತ್ತದೆ.ಈ ಬ್ರಾಹ್ಮೀ ಮುಹೂರ್ತದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿದರೆ ಪೂರ್ಣ ಫಲವನ್ನು ಪಡೆಯಬಹುದು. ಹೆಚ್ಚಿನ ಫಲ ಪಡೆಯಬೇಕು ಎಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದು ಸೂಕ್ತ.

ಹಿಂದಿನ ಸೀರೆ ಹುಡಿಸಿ ತಯಾರು ಮಾಡಿಕೊಂಡರೆ ಬೆಳಗ್ಗೆ ಎದ್ದ ತಕ್ಷಣ ಕಳಸವನ್ನು ಪ್ರತಿಷ್ಟಾಪನೆ ಮಾಡಿ ಒಂದು 5:30 ಒಳಗೆ ದೀಪವನ್ನು ಹಚ್ಚಿ ಪೂಜೆ ಶುರು ಮಾಡಿದರೆ ಸಾಕಾಗುತ್ತದೆ. ನಂತರ ನೀವು ವ್ರತವನ್ನು ಮುಂದುವರೆಸಬಹುದು. ಈ ಸಮಯದಲ್ಲಿ ಮಾಡುವುದಕ್ಕೆ ಆಗದೆ ಇರುವವರು ಸಂಜೆ 5:30 ಇಂದ 7:00 ಗಂಟೆ ಸಮಯದಲ್ಲಿ ಕೂಡ ಪೂಜೆಯನ್ನು ಮಾಡಬಹುದು. ಅದರೆ ನಿಮಗೆ ಪೂರ್ತಿಯದ ಫಲವನ್ನು ಪಡೆಯಬೇಕು ಎನ್ನುವ ಆಸೆ ಇದ್ದರೆ ಖಂಡಿತವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದಕ್ಕೆ ಪ್ರಯತ್ನ ಪಡಿ.

ದೇವಿಯನ್ನು ಯಾವ ದಿಕ್ಕಿನಲ್ಲಿ ಕೂರಿಸಬೇಕು.ಸೂಕ್ತವಾದ ದಿಕ್ಕು ಎಂದರೆ ಒಂದು ಪೂರ್ವಬಿಮುಖವಾಗಿ ಮತ್ತು ಉತ್ತರಭೀಮುಖವಾಗಿ ಕೂರಿಸುವುದು ಒಳ್ಳೆಯದು. ಇನ್ನು ಕೆಲವರಿಗೆ ಪಶ್ಚಿಮ ಕಡೆ ಮುಖ ಮಾಡಿ ದೇವರನ್ನೂ ಕೂರಿಸಬಹುದು. ಅದರೆ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಟಾಪನೆ ಮಾಡಬಾರದು. ಅದರಲ್ಲೂ ಪೂರ್ವಕ್ಕೆ ದೇವಿಯನ್ನು ಕೂರಿಸುವುದು ತುಂಬಾ ಒಳ್ಳೆಯದು. ಅಂದರೆ ಪಶ್ಚಿಮಕ್ಕೆ ದೇವಿಯನ್ನು ಕೂರಿಸಿ ದೇವರ ಮುಖ ಪೂರ್ವಕ್ಕೆ ನೋಡಬೇಕು.

ಇನ್ನು ಯಾವುದೇ ಹಬ್ಬ ಇದ್ದರು ಬೆಸ ಸಂಖ್ಯೆ ಹಚ್ಚುವುದು ತುಂಬಾ ಶ್ರೇಷ್ಠ. ಎರಡು ಕಂಬದ ದೀಪ ಮತ್ತು ಒಂದು ಕಾಮಾಕ್ಷಿ ದೀಪ ಇಟ್ಟರೆ ತುಂಬಾ ಒಳ್ಳೆಯದು. ಅದರಲ್ಲೂ ನಾಲ್ಕು ಕಂಬದ ದೀಪವನ್ನು ಹಚ್ಚುವುದು ತುಂಬಾ ಶ್ರೇಷ್ಠ. ಇನ್ನು ದೇವರ ಹೊಸ್ತಿಲು ಹಾಗು ತುಳಸಿ ಹತ್ತಿರ ಬೇರೆ ದೀಪವನ್ನು ಹಚ್ಚಬಹುದು.

Leave a Comment