ಉರಿಮೂತ್ರಕ್ಕೆ ತಕ್ಷಣ ಪರಿಹಾರ 10 ಟಿಪ್ಸ್!

ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಕೂಡ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೂತ್ರ ವಿಸರ್ಜಿಸುವಾಗ ಉರಿ ಅನುಭವ ಉಂಟಾಗುವುದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಒಂದು ಕಾರಣ ದೇಹದಲ್ಲಿ ನೀರಿನ ಕೊರತೆ. ಇದರಿಂದ ಉರಿ ಮೂತ್ರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಮೂತ್ರನಾಳಗಳಲ್ಲಿ ಏನಾದರೂ ಸೋಂಕುಗಳಿದ್ದರೂ ಇದೇ ಅನುಭವ ಉಂಟಾಗುತ್ತದೆ.

ಈ ಸಮಸ್ಯೆ ಕಾಣಿಸಿಕೊಂಡರೆ ಉಂಟಾಗುವ ತೊಂದರೆ ಎಂದರೆ ಮೂತ್ರ ವಿಸರ್ಜಿಸಿದ ಬಳಿಕವೂ ಮೂತ್ರವು ಬರುತ್ತಿದೆ ಎಂದು ತೋರುವುದು. ಇದು ಒಂಥರಾ ಮಾನಸಿಕವಾಗಿ ತೊಂದರೆಗೀಡು ಮಾಡುತ್ತದೆ.

ಉರಿಮೂತ್ರದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ ನೀವು ಮೊದಲು ಮಾಡಬೇಕಿರುವುದು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಅಲ್ಲದೆ ಕೆಲ ಮನೆಮದ್ದುಗಳ ಮೂಲಕ ಕೂಡ ಪರಿಹಾರ ಕಾಣಬಹುದು. ಅಂತಹ ಕೆಲವೊಂದು ಸಲಹೆಗಳು ಇಲ್ಲಿವೆ.

ನಿರಂತರ ಉರಿಮೂತ್ರ ಸಮಸ್ಯೆ ಕಾಡುತ್ತಿದ್ರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್‌ ಕುಡಿಯಿರಿ. ಇದರಿಂದ ಈ ಸಮಸ್ಯೆ ದೂರವಾಗುವುದು.

ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಸಹ ಉರಿಮೂತ್ರ ಸಮಸ್ಯೆ ನಿವಾರಿಸಬಹುದು.

ಉರಿ ಮೂತ್ರದ ಸಮಸ್ಯೆ ಕಾಣಿಸಿಕೊಂಡರೆ ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಈ ತೊಂದರೆಯಿಂದ ಪಾರಾಗಬಹುದು.

ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಕೂಡ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.

ಉರಿ ಮೂತ್ರದ ಸಮಸ್ಯೆ ಕಾಣಿಸಿಕೊಂಡರೆ ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಈ ತೊಂದರೆಯಿಂದ ಪಾರಾಗಬಹುದು.

Leave a Comment