ಊಟದ ನಂತರ ಒಂದು ಗ್ಲಾಸ್ ಬಿಸಿನೀರು ಸೇವನೆ ಮಾಡಿದ್ರೆ ಏನಾಗುತ್ತೆ?

ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ಮೆಟೋಬಾಲಿಸಂ ನಿಯಂತ್ರಣ ಇರುತ್ತದೆ ಇದರಿಂದ ನಮ್ಮ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು ಮೂಗಿನ ಹಾಗು ಗಂಟಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಬಿಸಿನೀರು ಮನೆ ಮದ್ದಾಗಿದೆ. ಇದನ್ನು ಕುಡಿಯುವುದರಿಂದ ಗಂಟಲಿನ ಕೆರೆತ ಕಡಿಮೆಯಾಗುತ್ತದೆ .

ಕಟ್ಟಿದಂತಹ ಮೂಗಿನಿಂದ ಬಲು ಬೇಗ ಉಪಶಮನ ಪಡುತ್ತದೆ ದೇಹದಲ್ಲಿರುವ ವಿಷ ಪದಾರ್ಥಗಳು ಹೊರಹಾಕುತ್ತದೆ. ದೇಹದಲ್ಲಿ ವಿಷ ಪದಾರ್ಥಗಳನ್ನು ಹೊರ ಹಾಕುವಲ್ಲಿ ಈ ಬಿಸಿನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ ಬಿಸಿಯಾದ ನೀರನ್ನು ಕುಡಿದಾಗ ನಮ್ಮ ದೇಹದ ಉಷ್ಣತೆ ಜಾಸ್ತಿಯಾಗಿ ಆ ಮೂಲಕ ನಮ್ಮ ದೇಹದಲ್ಲಿ ಇರುವಂತಹ ಪದಾರ್ಥಗಳು ಬೆವರಿನ ರೂಪದಲ್ಲಿ ಹೊರಹಾಕಲ್ಪಡುತ್ತವೆ.

ಬಿಸಿ ನೀರು ಸೇವನೆ ಅಕಾಲಿಕ ಮೊಪ್ಪನ್ನು ತಡೆಯುತ್ತದೆ. ದೇಹದಲ್ಲಿ ಇರುವಂತಹ ವಿಶ್ವಕಾರಕ ವಸ್ತುಗಳು ನಮ್ಮ ತ್ವಚೆಯು ಬೇಗ ಮುಪ್ಪಾಗದಂತೆ ಕಾಣುವ ಹಾಗೆ ಮಾಡುತ್ತವೆ. ಬಿಸಿ ನೀರನ್ನು ಕುಡಿಯುವುದರಿಂದ ಚರ್ಮದ ಜೀವಕೋಶ ಸ್ಥಿತಿ ತತ್ವ ಗುಣ ಜಾಸ್ತಿಯಾಗುತ್ತದೆ. ಇದು ನಮ್ಮ ಚರ್ಮ ನೈಸರ್ಗಿಕವಾಗಿ ಹೊಳಪುವಂತೆ ಮಾಡುತ್ತದೆ ಬಿಸಿ ನೀರು ನಮ್ಮ ದೇಹವನ್ನು ಶುದ್ಧೀಕರಿಸುವ ಮೂಲಕ

ಮೊಡವೆಗೆ ಕಾರಣವಾದ ವಿಷ ಪದಾರ್ಥಗಳನ್ನು ಹೊರಹಾಕುತ್ತದೆ ಇನ್ನು ಕೂದಲಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಕೂದಲಿನ ಬುಡಕ್ಕೆ ಒಳ್ಳೆಯ ರಕ್ತ ಸಂಚಲನೆಯಾಗಿ ನಮ್ಮ ಕೂದಲು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.ಬಿಸಿ ಅಥವಾ ಉಗುರು ಬಿಸಿ ನೀರನ್ನು ಊಟದ ನಂತರ, ಮೊದಲು ಅಥವಾ ಊಟದ ಜತೆಗೆ

ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಚೆನ್ನಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗದು ಎನ್ನಲಾಗುತ್ತದೆ. ತಂಪಾದ ನೀರನ್ನು ಊಟದ ಜತೆಗೆ ಸೇವಿಸುವುದು ಜೀರ್ಣ ಕ್ರಿಯೆಗೆ ಉತ್ತಮವಲ್ಲ ಎನ್ನಲಾಗುತ್ತದೆ. ಕೋಲ್ಡ್‌ ನೀರನ್ನೇ ಹೆಚ್ಚಾಗಿ ಇಷ್ಟಪಡುವವರು, ಊಟದ ಜತೆ ಅಥವಾ ಊಟದ ತಕ್ಷಣ ಸೇವಿಸುವುದರ ಬದಲಾಗಿ 20 ನಿಮಿಷದ ಅಂತರವಿದ್ದರೆ ಉತ್ತಮ ಎನ್ನಾಗುತ್ತದೆ.

ಬಿಸಿ ನೀರು ಜೀರ್ಣ ಕ್ರಿಯೆ ಉತ್ತಮ ಪಡಿಸುತ್ತದೆ. ಅಷ್ಟೇ ಅಲ್ಲದೆ ದೇಹದ ಒಟ್ಟಾರೆ ತಾಪವನ್ನೂ ಬಿಸಿನೀರು ಅಗತ್ಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಸರಾಗವಾಗುತ್ತದೆ. ಇದರಿಂದ ದೇಹದಲ್ಲಿ ಹೆಚ್ಚು ಕ್ಯಾಲೋರಿ ಬರ್ನ್‌ ಆಗುತ್ತದೆ. ಅಷ್ಟೇ ಅಲ್ಲದೆ ಪಿತ್ತಕೋಶ ಹಾಗೂ ಮೂತ್ರಜನಕಾಂಗದ ಕಾರ್ಯಗಳನ್ನೂ ಉತ್ತಮಪಡಿಸುತ್ತದೆ.

Leave a Comment