ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ!

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ. ಇದು ಬಳ್ಳಿಯಂತೆ ಹಬ್ಬಿ ,ಬೇಲಿ ಸಾಲಿನ ಗಿಡದಂತೆ ಮಲೆನಾಡಿನಲ್ಲಿ ನಮಗೆ ಸಿಗುತ್ತದೆ..ಇದರ ಉಪಯೋಗ ಬಹಳ ವಿಶೇಷ ವಾಗಿ ಸಕ್ಕರೆ ಕಾಯಿಲೆಗೆ.. ಇದನ್ನು ಗುರುತಿಸಿ ಕೊಳ್ಳಲು ಸುಲಭ ವಿಧಾನ ನಿಮಗೆ ತಿಳಿಸಿದ್ದೇನೆ.ಇದರ ಎಲೆ ಬಾಯಿಯೊಳಗೆ ಇಡುತ್ತಿದ್ದಂತೆ?ತನಗೆ ತಾನೇ ಅದರ ಗುಣವನ್ನು ತೋರಿಸಿ ಕೊಡುತ್ತದೆ.

ಅಂದರೇ? ನೀವು ಇದರ ಎಲೆ ಒಂದು ಬಾಯಿಗೆ ಹಾಕಿ ಜಗಿದು ತುಪ್ಪಿ ಬಿಡಿ, ಆನಂತರ ಯಾವುದೇ ಸಕ್ಕರೆ,ಬೆಲ್ಲದಂತಹ ಸಿಹಿ ಸೇವಿಸಿ.ಆ ಸಿಹಿ ಎನ್ನುವುದು ನಾಶವಾಗಿ ನೀವು ತಿಂದ ಸಕ್ಕರೆ ಕಲ್ಲಿನಂತೆ ಆಗುತ್ತದೆ.. ಹಾಗೇ ನೀವು ತಿಂದ ಬೆಲ್ಲ? ಮಣ್ಣಿನ ಪುಡಿಯಂತೆ ನಾಲಿಗೆಗೆ ಅನುಭವ ನೀಡುತ್ತದೆ..ಇದೇ ಮಧುವನ್ನು ನಾಶಮಾಡುವ ಈ ಎಲೆಯ ವಿಶೇಷ ತೆ. ಇದನ್ನು ಸೇವಿಸಿದರೇ? ದೇಹದೊಳಗೆ ಎಂಥಹ ಚಮತ್ಕಾರ ಉಂಟು ಮಾಡಬಲ್ಲದು ಗಮನಿಸಿ…

ಇಂದಿನ ದಿನದಲ್ಲಿ ಸಕ್ಕರೆ ಕಾಯಿಲೆ,ಲಿವರ್ ಸಮಸ್ಯೆ ಸರ್ವೇ ಸಾಮಾನ್ಯ..ಈ ಒಂದು ಗಿಡದ ಪರಿಚಯ ಹಾಗೂ ಬಳಕೆಯ ವಿವರ ತಿಳಿದರೇ ಸಾಕು.ಅಗತ್ಯ ವಾದವರು ಬಳಸ ಬಹುದು. ಖಂಡಿತಾ ಇದು ಬಹಳ ಪ್ರಯೋಜನಕಾರಿ ಮನೆಮದ್ದು.. ಮೊದಲು ಬಳ್ಳಿ ಮತ್ತು ಎಲೆಯ ಪರಿಚಯ ಮಾಡಿಕೊಂಡು, ನಂತರ ಬಳಸಿಕೊಳ್ಳಿ.ಈ ಬಳ್ಳಿಯಂತೆ ಹಲವಾರು ಬಳ್ಳಿಗಳು ಇರುತ್ತವೆ..

ಎಲೆಗಳು ಕೂಡಾ ಕೆಲವು ಮಣ್ಣಲ್ಲಿ ,ಸಾರಕ್ಕೆ ಹೊಂದಿಕೊಂಡು ಚಿಕ್ಕ,ದೊಡ್ಡ,ದಪ್ಪದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು..ನಿಮಗಾಗಿ ಈ ಮಾಹಿತಿ, ನೋಡಿ ಮಾಡಿ ಬಳಸಿ..

Leave a Comment