Simple home remedy for psoriasis :-ಸೋರಿಯಾಸಿಸ್:— ಒಂದು ಭಯಾನಕ ಚರ್ಮದ ಕಾಯಿಲೆ ಬಗ್ಗೆ ಈ ದಿನ ಸರಳ , ತುಂಬಾ ಸರಳ ಮನೆಮದ್ದುಗಳನ್ನು ಹೇಳುತ್ತಿದ್ದೇನೆ.ಈ ಪ್ರಕಾರದಲ್ಲಿ ಏನಾದರೂ ಕೆಲವೇ ಕೆಲವು ಕಾಲ ಮುಂಜಾಗ್ರತೆ ವಹಿಸಿದಿರೋ? ಸೋರಿಯಾಸಿಸ್ ವ್ಯಾಧಿ ನಿಮ್ಮನ್ನು ಬಿಟ್ಟು ಓಡಿಹೋಗುವುದು ಖಂಡಿತಾ. ಆದರೆ, ನಾಲ್ಕು ದಿನ ಹಾಗೇ,ನಾಲ್ಕು ದಿನ ಹೀಗೆ ಮಾಡೋದು. ಸಿಕ್ಕ ಸಿಕ್ಕ ಎಲ್ಲಾ ತರಹದ ಮೆಡಿಸಿನ್ ಮಾಡೋದು ಸೋತ ಮುಖ ಮಾಡಿಕೊಳ್ಳೋದು,ಮತ್ತೆ ಹೆಚ್ಚಿದಾಗ ಮರಳಿ ಔಷಧಿ ಹುಡುಕುವ ಕೆಲಸ ನೀವೆಲ್ಲಾ ಏನಾದರೂ ಮಾಡುತ್ತಿದ್ದೀರಿ ಆದರೇ? ಫಲಿತಾಂಶ ಶೂನ್ಯ.. ಒಂದು ವರ್ಷದ ಓದಿನ ಫಲವನ್ನು ಕೊನೆಯ ಪರಿಕ್ಷೆ ಯಲ್ಲಿ ಉತ್ತಮ ಫಲಿತಾಂಶ ಬರಬೇಕಾದರೇ? ನಾವು ನಮ್ಮ ಓದಿನ ಬಗ್ಗೆ ಎಷ್ಟು ಗಮನ ನೀಡಿದ್ದೇವೆ ಎಂಬುದು ನೋಡಬೇಕು ಹೌದಲ್ಲವೇ? ಅದೇ ತರಹ ಸೋರಿಯಾಸಿಸ್ ಅನ್ನು ಓಡಿಸಲು ನೀವು ಹೀಗೆ ಪರಿಶ್ರಮ ನಿತ್ಯ ಇಷ್ಟು ಎಂದು ಅದರ ಆರೈಕೆಗೆ ನೀಡಬೇಕು.
ಸರಿ, ಸೋರಿಯಾಸಿಸ್ ಹೇಗೆ ಬರುತ್ತದೆ? ನಮ್ಮ ದೇಹದಲ್ಲೇ ಉಂಟಾಗುವ ಅಸಮತೋಲನ ಒಂದು ಕಾರಣ ಇದು ಇತರರಿಗೆ ಹರಡದೇ ನಮಗೆ ಮಾತ್ರ ತೊಂದರೆ ಕೊಡುತ್ತದೆ…ಇತ್ತಿಚಿನ ದಿನಗಳಲ್ಲಿ ನಾನು ಗಮನಿಸಿದಂತೆ ಅತಿಯಾಗಿ ಬೇರೆ ಬೇರೆ ವಿಧಾನ ದಲ್ಲಿ ಚರ್ಮದ ಕಾಯಿಲೆಗಳನ್ನು ಜನರು ಸೋರಿಯಾಸಿಸ್ ಎಂದೆ ನೋಡುತ್ತಿದ್ದಾರೆ,ಇವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಚರ್ಮ ರೋಗಗಳು. ಈ ರೋಗಕ್ಕೂ ಈ ಮೇಲಿನ ಮನೆ ಮದ್ದು ಬಹಳ ಉತ್ತಮ ಫಲಿತಾಂಶ ನೀಡುತ್ತದೆ. ಸೋರಿಯಾಸಿಸ್ ನಷ್ಟೇ ಗಂಭೀರ ವಾಗಿ ಕಾಡುವ ಚರ್ಮ ಕಾಯಿಲೆಗಳಿದೆ ಅವು ಬೇರೆಯವರಿಂದ ಹರಡಿರುತ್ತದೆ.
ಅದನ್ನು ಕೂಡಾ ಇಲ್ಲಿ ತಿಳಿದುಕೊಳ್ಳಿ. ನಿಮ್ಮ ಮನೆಯ ನಾಯಿ,ಬೆಕ್ಕು, ಹಸುಗಳಿಗೆ ಚರ್ಮದ ಕೂದಲು ಉದುರುವ,ಕಜ್ಜಿಗಳಂತೆ ಚರ್ಮ ಸುಲಿದು ಹೋಗುವ ಕಾಯಿಲೆ ಇದ್ದರೇ,ಅಥವಾ ಯಾರದೋ ಮನೆಯಲ್ಲಿ ಇದ್ದರೂ ಆ ಪ್ರಾಣಿಗಳು ಅವರ ಚರ್ಮ ಕೆರೆದುಕೊಂಡಾಗ,ಮಲಗಿದಲ್ಲಿ ಕೀವು,ರಕ್ತ ಜಿನುಗಿದನ್ನು ನೀವು ಮೆಟ್ಟಿದರೂ, ಸೋರಿಯಾಸಿಸ್ ತರಹವೇ ನಿಮಗೆ ಚರ್ಮ ಕಾಯಿಲೆ ಬರಬಹುದು.
ಅಷ್ಟೇ ಅಲ್ಲ ಈ ವಿಷ ಪ್ರಾಣಿಗಳ ಎಂಜಲುಗಳು ,ಕೊಳೆತ ದೇಹದ ಭಾಗ ತಾಕಿ ನಿಮ್ಮ ದೇಹ ಸೇರಿದರೂ ಸೋರಿಯಾಸಿಸ್ ರೂಪದಲ್ಲೇ ನಿಮಗೆ ಚರ್ಮ ಕಾಯಿಲೆ ಬರುವ ಸಾಧ್ಯತೆ ಇದೆ. ಎಲ್ಲಾ ತರಹದ ಭೀಕರ ಚರ್ಮ ಕಾಯಿಲೆ ಇರಲಿ ಈ ಮೇಲೆ ತಿಳಿಸಿದ ಮಾಹಿತಿ ತಿಳಿದುಕೊಳ್ಳಿ.. ಉತ್ತಮ ವೈದ್ಯಕೀಯ ಸಲಹೆ, ಔಷಧೋಪಚಾರದ ಜೊತೆಗೆ ಈ ಮನೆಯ ಮದ್ದುಗಳನ್ನು ಕೂಡಾ ಫಾಲಿಸಿ. ಹತ್ತಾರು ವರ್ಷಗಳಿಂದ,ಗಳವರೆಗೆ ಕಾಡುವ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ನಿಮ್ಮದಾಗುವುದು ನೂರು ಶೇಕಡಾ ನಿಜಾ..