ಹೊಟ್ಟೆಯ ಬೊಜ್ಜು ಇವತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹೊಟ್ಟೆಯ ಬೊಜ್ಜು ಜಾಸ್ತಿಯಾದರೆ ಹೃದಯಕ್ಕೆ ಸಮಸ್ಸೆ ಬರಬಹುದು, ಮಧುಮೇಹ ಸಮಸ್ಸೆ ಬರಬಹುದು, ಫ್ಯಾಟಿ ಲಿವರ್ ಇರಬಹುದು, ಬಿಪಿ ಬರುವ ಸಾಧ್ಯತೆ ಇರುತ್ತದೆ. ನಾವು ಸೇವನೆ ಮಾಡುವ ಆಹಾರದಲ್ಲಿ ಹೆಚ್ಚಾಗಿ ಕಾರ್ಬೋ ಹೈಡ್ರೆಟ್ ಹೆಚ್ಚಾಗಿ ಇರುತ್ತದೆ.ಇದರಿಂದ ಹೊಟ್ಟೆಯ ಬೊಜ್ಜು ಜಾಸ್ತಿಯಾಗುತ್ತದೆ. ಹಾಗಾಗಿ ಅನ್ನ ಚಪಾತಿ, ರಾಗಿ, ಜೋಳ ಸಿರಿ ದಾನ್ಯ ಮುಂತಾದ ಧಾನ್ಯಗಳನ್ನು ಕಡಿಮೆ ಮಾಡುವಂತಹದು ಹೊಟ್ಟೆಯ ಬೊಜ್ಜು ಕಡಿಮೆ ಮಾಡುವುದಕ್ಕೆ ಬಹಳ ಮುಖ್ಯವಾದ ಒಂದು ದಾರಿ ಎಂದು ಹೇಳಬಹುದು.
ಹೊಟ್ಟೆಯ ಬೊಜ್ಜನ್ನು ಕರಗಿಸುವುದಕ್ಕೆ ಪ್ರತಿದಿನ ಬೆಳಗ್ಗೆಯಿಂದ ರಾತ್ರಿ ವರೆಗೆ ಕಾರ್ಬೋ ಹೈಡ್ರೆಟ್ ಪ್ರಮಾಣವನ್ನು ಕಡಿಮೆ ಮಾಡಿ ಆ ಜಾಗದಲ್ಲಿ ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು.ಗೋಡಂಬಿ ಪಿಸ್ತಾ ವಳ್ನುಟ್ ಶೇಂಗಾ, ತೆಂಗಿನಕಾಯಿ,ಶುದ್ಧ ತುಪ್ಪ ಸೇವಿಸಬೇಕು.
ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಬೆಳಗ್ಗೆ ಮೊಳಕೆ ಕಾಳು ಅಥವಾ ಬೇಯಿಸಿದ ಕಾಳುಗಳ ಸೇವನೆ ಮಾಡಬೇಕು.ಹಸಿ ತರಕಾರಿ ಸಲಾಡ್ ಹಣ್ಣುಗಳ ಸೇವನೆಯನ್ನು ಮಾಡಬೇಕು. ನಾರ್ಮಲ್ ಬ್ರೇಕ್ಫಾಸ್ಟ್ ತುಂಬಾ ಕಡಿಮೆ ಮಾಡಬೇಕು.
ಇನ್ನು ಮದ್ಯಾಹ್ನ ಊಟದಲ್ಲೂ ಕೂಡ ಮೊದಲು ತರಕಾರಿಯಿಂದ ಶುರು ಮಾಡಬೇಕು. ನಂತರ ಒಂದು ರೊಟ್ಟಿ ಸ್ವಲ್ಪ ರೈಸ್ ಸೇವನೆ ಮಾಡಬೇಕು. ಇನ್ನು ಸಂಜೆ ಬೇಗನೆ ಊಟ ಮಾಡಬೇಕು. ರಾತ್ರಿ ಊಟ ಕ್ಯಾನ್ಸೆಲ್ ಮಾಡಬೇಕು. ಒಂದು ಗ್ಲಾಸ್ ಹಾಲು ಒಂದು ಸೇಬು, ಬಾಳೆಹಣ್ಣು, ಬಾದಾಮಿ ಹಾಕಿ ಮಿಲ್ಕ್ ಶೇಕ್ ಮಾಡಿ ಕುಡಿಯಬೇಕು.ಇದರಿಂದ ರಾತ್ರಿ ಊಟ ಕ್ಯಾನ್ಸೆಲ್ ಮಾಡಬಹುದು.ಈ ರೀತಿ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕರಗುವುದಕ್ಕೆ ಸಹಾಯವಾಗುತ್ತದೆ.
ನಂತರ ಹೊಟ್ಟೆಯ ಭಾಗಕ್ಕೆ ವ್ಯಾಯಾಮ ಸಿಗುತ್ತದೆ. ಇನ್ನು ಅಪ್ಪಲ್ ಸೈಡ್ ವಿನೆಗರ್ ಅನ್ನು ಬೆಳಗ್ಗೆ ಮಧ್ಯಾಹ್ನ ಸಂಜೆ ಊಟಕ್ಕಿಂತ 15ನಿಮಿಷ ಮುಂಚೆ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಹಾಕಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆ ಆಗುತ್ತದೆ.