ಈ ಕನಸು ಬಿದ್ರೆ ಒಂದೇ ವಾರದಲ್ಲೆ ಸರ್ವನಾಶ! ಈ ಕನಸು ಬಿದ್ದರೆ ಹುಷಾರಾಗಿರಿ!

ನಾವೆಲ್ಲರೂ ನಮಗೆ ಬೀಳುವ ಕನಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಕೆಲವು ಕನಸುಗಳು ನಮಗೆ ಮರೆತು ಹೋಗುತ್ತವೆ. ನೆನಪಿದ್ದರೂ ಸಹ ಅವುಗಳು ಅಷ್ಟು ಮುಖ್ಯ ಅನಿಸುವುದಿಲ್ಲ. ಆದರೆ ಕನಸುಗಳು ಸಹ ಬಹಳ ಮುಖ್ಯವಾಗುತ್ತದೆ.

ಕನಸಿನ ವಿಜ್ಞಾನದ ಪ್ರಕಾರ, ಕನಸಿನ ಪ್ರಪಂಚವು ಕಾಲ್ಪನಿಕವಾಗಿದ್ದರೂ, ಕನಸುಗಳು ಜೀವನದಲ್ಲಿ ವಿವಿಧ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಮುನ್ಸೂಚನೆಯನ್ನು ನೀಡುತ್ತವೆ. ಸಂಶೋಧಕರ ಪ್ರಕಾರ, ಈ 4 ರೀತಿಯ ಕನಸುಗಳು ದುರದೃಷ್ಟವನ್ನು ಸೂಚಿಸುತ್ತವೆ, ಬಹಳ ಕೆಟ್ಟ ಸಮಯಗಳು ಬರುತ್ತಿವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ನೀವು ಕನಸಿನಲ್ಲಿ ಕತ್ತರಿ ಬಳಸುವುದನ್ನು ಅಥವಾ ಯಾರಿಗಾದರೂ ಕಪಾಳಮೋಕ್ಷ ಮಾಡುವುದನ್ನು ನೀವು ನೋಡಿದರೆ, ಅದು ತುಂಬಾ ಅಶುಭದ ಸಂಕೇತವಂತೆ. ಅಂತಹ ಕನಸು ಬಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆ ಬರಲಿದೆ ಎಂದರ್ಥವಂತೆ.

ಕನಸಿನ ಪುಸ್ತಕಗಳ ಪ್ರಕಾರ, ಕನಸಿನಲ್ಲಿ ಬೆಕ್ಕು, ಒಣ ಕಾಡು ಅಥವಾ ಒಣ ಮರಗಳು ಮತ್ತು ಮುಚ್ಚಿದ ಚರಂಡಿಗಳನ್ನು ನೋಡುವುದು ತುಂಬಾ ಅಶುಭ. ಅಂತಹ ಕನಸು ಕಂಡರೆ ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ನೀವು ತುಂಬಾ ಕೆಟ್ಟ ಸಮಯ ಆರಂಭವಾಗಲಿದೆ ಎಂದರ್ಥ. ಅಲ್ಲದೇ, ಭಾರೀ ಆರ್ಥಿಕ ತೊಂದರೆಗಳು ಎದುರಾಗಲಿವೆ.

ನಿಮಗೆ ಮರವನ್ನು ಕಡಿಯುವ ಕನಸು ಬಿದ್ದರೆ ಅದು ಆರ್ಥಿಕ ನಷ್ಟ ಮತ್ತು ಹಣದ ಕೊರತೆಯನ್ನು ಸೂಚಿಸುತ್ತದೆ. ಇದರ ಜೊತೆಗೆ ಕುಟುಂಬದ ಹಿರಿಯ ಸದಸ್ಯರಿಗೆ ಆರೋಗ್ಯ ಸಮಸ್ಯೆ ಬರುವ ಸೂಚನೆ ಕೂಡ ಹೌದು.

ಕನಸಿನ ಪುಸ್ತಕದ ಪ್ರಕಾರ, ನೀವು ಕನಸಿನಲ್ಲಿ ಎತ್ತರದಿಂದ ಬಿದ್ದ ರೀತಿ ಕಂಡರೆ ಅಥವಾ ಬೇರೆಯವರು ಬೀಳುತ್ತಿರುವುದನ್ನ ನೋಡಿದರೆ, ಅದು ನಿಮ್ಮ ಆರೋಗ್ಯ ಸಮಸ್ಯೆಯ ಸೂಚನೆಯಂತೆ. ಅಲ್ಲದೇ, ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಸಹ ಕಡಿಮೆ ಆಗುತ್ತದೆ ಎಂದರ್ಥ.

Leave A Reply

Your email address will not be published.