ಹೊಸ್ತಿಲು ಪೂಜೆ /ಹೊಸ್ತಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು!

ಹೊಸ್ತಿಲು ಯಾವಾಗಲು ಎತ್ತರದಲ್ಲಿ ಇರಬೇಕು.ಈ ರೀತಿ ಇದ್ದಾರೆ ಶುಭ ಆಗುತ್ತದೆ.ಯಾವುದೇ ಕಾರಣಕ್ಕೂ ಹೋಸ್ತಿಲ ಬಳಿ ಚಪ್ಪಲಿ ಅನ್ನು ಬಿಡಬಾರದು ಮತ್ತು ಹೋಸ್ತಿಲನ್ನು ತುಳಿಯಬಾರದು.ಇನ್ನು ಹೋಸ್ತಿಲ ಬಳಿ ನಿಂತುಕೊಂಡು ದುಡ್ಡನ್ನು ಬೇರೆ ಅವರಿಗೆ ಕೊಡಬಾರದು.ಇನ್ನು ಹೋಸ್ತಿಲ ಮೇಲೆ ನಿಂತುಕೊಂಡು ತಲೆಯನ್ನು ಬಚಾಬಾರದು.

ಮೊದಲಿಗೆ ಪೂಜೆಗೆ ಮಾಡಬೇಕಾದ ಸಿದ್ಧತೆಗಳು ನೀರನ್ನು ತೆಗೆದುಕೊಳ್ಳಬೇಕು, ರಂಗೋಲಿ, ಹೂಗಳು, ಅಗರಬತ್ತಿ, ಬಾಳೆಹಣ್ಣು, ಕಾಯಿ, ವಿಳೇದೆಲೆ, ಅರಿಶಿಣ ಕುಂಕುಮ, ಎರಡು ಅಕ್ಕಿ ಹಿಟ್ಟಿನ ದೀಪ ತಯಾರಿಸಿ ಇಟ್ಟುಕೊಂಡಿರಬೇಕು ಹಾಗೂ ದೀಪದ ಬತ್ತಿ, ಕರ್ಪೂರ, ಅಕ್ಷತೆ, ಅಡಿಕೆ, ದೂಪಾ, ಎಣ್ಣೆ.

ಹೋಸ್ತಿಲ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ.ಮೊದಲು ಅರಿಶಿಣ ಕುಂಕುಮ ಹಚ್ಚಿ ನಂತರ ರಂಗೋಲಿಯನ್ನು ಹಾಕಬೇಕು.ಈ ರೀತಿ ರಂಗೋಲಿ ಮತ್ತು ಅರಿಸಿಣ ಕುಂಕುಮ ಹಚ್ಚುವುದು ಶುಭ ಸಂಕೇತ ಆಗಿರುತ್ತದೆ.

ಇನ್ನು ಹೊಸ್ತಿಲ ಮೇಲೆ ರಂಗೋಲಿ ಹಾಕುವ ಮೊದಲು ಎಡ ಬಲ ಎಂದು ವಿಭಜನೆ ಮಾಡಿಕೊಳ್ಳಬೇಕು.ಮಧ್ಯದಲ್ಲಿ ಸ್ವಸ್ತಿಕ್ ಚಿತ್ರವನ್ನು ಹಾಕಬೇಕಾಗುತ್ತದೆ.ಏಕೆಂದರೆ ಯಾವುದೇ ತೊಂದರೆ ಆಗಬಾರದು ಎಂದು ಸ್ವಸ್ತಿಕ್ ಚಿತ್ರವನ್ನು ಹಾಕಬೇಕು. ಎಡ ಭಾಗದಲ್ಲಿ 12 ಎಳೆ ಮತ್ತು ಬಲ ಭಾಗದಲ್ಲಿ 12 ಎಳೆ ಬರುವ ಹಾಗೆ ರಂಗೋಲಿ ಹಾಕಬೇಕಾಗುತ್ತದೆ.ಇವು ನಾರಾಯಣ ಭಗವಾನ್ ನಾಮಗಳು.ಅಷ್ಟೇ ಅಲ್ಲದೆ ಹೋಸ್ತಿಲ ಮೇಲೆ ಅಷ್ಟ ದಳ ಪದ್ಮಾ ರಂಗೋಲಿ ಮತ್ತು ಶಂಖ, ಲಕ್ಷ್ಮಿ ಪಾದವನ್ನು ಸಹ ಹಾಕಬೇಕು.ಈ ರೀತಿ ರಂಗೋಲಿ ಹಾಕಿದರೆ ಯಾವುದೇ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ ಮತ್ತು ಮನೆಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಕೂಡ ಬೀಳುವುದಿಲ್ಲ.ನಂತರ ಹೋಸ್ತಿಲ ಪೂಜೆ ಮತ್ತು ತುಳಸಿ ಪೂಜೆಯನ್ನು ಹೆಣ್ಣು ಮಕ್ಕಳು ಮಾಡಬೇಕು. ಈ ರೀತಿ ಮಾಡಿದರೆ ಯಾವುದೇ ರೀತಿಯ ದಾರಿದ್ರತೆ ಮನೆಯಲ್ಲಿ ಇರುವುದಿಲ್ಲ.

Leave A Reply

Your email address will not be published.