1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದ್ರೆ ಈ ಸಮಸ್ಸೆಗಳಿಗೆ ಪರಿಣಾಮಕರಿ ಮನೆಮದ್ದು!

ಹಾಲು ಒಂದು ನೈಸರ್ಗಿಕ ಡೈರಿ ಪದಾರ್ಥ. ಹುಲ್ಲು ತಿನ್ನುವ ಹಸು ಹಾಲನ್ನು ಉತ್ಪತ್ತಿ ಮಾಡುತ್ತದೆ. ಅದೇ ರೀತಿ ಜೇನುತುಪ್ಪ ಕೂಡ ನೈಸರ್ಗಿಕವಾಗಿ ನಮಗೆ ಸಿಗುವ ಒಂದು ವರದಾನ ಎಂದೇ ಹೇಳಬಹುದು. ಹಲವಾರು ಜಾತಿಯ ಹೂವುಗಳ ಮಕರಂದದ ಸಮ್ಮಿಶ್ರಣ ಜೇನುತುಪ್ಪ.

ರುಚಿಯಲ್ಲಿ ಇವುಗಳನ್ನು ಮೀರಿಸಲು ಸಾಧ್ಯವಿಲ್ಲ. ಅದೇ ರೀತಿ ಆರೋಗ್ಯದ ಪ್ರಯೋಜನಗಳು ಎಂದು ಬಂದಾಗ ನಮ್ಮ ದೇಹದ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುವ ಗುಣಸ್ವಭಾವಗಳು ಹಾಲು ಮತ್ತು ಜೇನು ತುಪ್ಪದಲ್ಲಿ ಕಂಡುಬರುತ್ತದೆ. ನಮ್ಮ ಸೌಂದರ್ಯ ವೃದ್ಧಿಯಿಂದ ಹಿಡಿದು, ನಮ್ಮ ದೇಹವನ್ನು ಶಕ್ತಿಯುತವಾಗಿ ಆರೋಗ್ಯಕರವಾಗಿ ಮಾಡಿಕೊಳ್ಳಲು ಇವುಗಳಿಂದ ಅನುಕೂಲವಿದೆ.

ಪ್ರತಿ ದಿನ ನಾವು ಸೇವನೆ ಮಾಡುವ ಹಾಲು ನಮ್ಮ ದೇಹದ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿದರೆ, ಜೇನುತುಪ್ಪ ನಮ್ಮ ನಾಲಿಗೆ ರುಚಿಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿದು ಬಂದಿದೆ.

ನಮ್ಮ ದೇಹದ ಪ್ರತಿಯೊಂದು ಜೀವ ಕೋಶಗಳು ಆರೋಗ್ಯಕರವಾಗಿ ಯಾವುದೇ ಸಮಸ್ಯೆ ಇಲ್ಲದಂತೆ ಕಾರ್ಯ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ.

ಜೇನು ತುಪ್ಪದ ಬಳಕೆ ಇಂದು ನೆನ್ನೆಯದಲ್ಲ. ಶತಶತಮಾನಗಳಿಂದಲೂ ಜನರು ವೈಜ್ಞಾನಿಕವಾಗಿ ಅದರ ಬಗ್ಗೆ ತಿಳಿಯದೆ ಇದ್ದರೂ ಕೂಡ ತಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಹಾಗೂ ದೈಹಿಕ ಪ್ರಯೋಜನಗಳಿಗೆ ಜೇನು ತುಪ್ಪವನ್ನು ಬಳಕೆ ಮಾಡುತ್ತಾ ಬಂದಿದ್ದಾರೆ.

ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು, ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫಾಮೇಟರಿ ಮತ್ತು ಇನ್ನಿತರ ಗುಣ ಲಕ್ಷಣಗಳು ಇರುವ ಕಾರಣ ಮತ್ತು ಹಾಲಿನಲ್ಲಿ ನಮ್ಮ ದೇಹಕ್ಕೆ ಪ್ರತಿ ದಿನ ಅಗತ್ಯವಾಗಿ ಬೇಕಾದ ವಿವಿಧ ಪೌಷ್ಟಿಕ ಸತ್ವಗಳು, ಕ್ಯಾಲ್ಸಿಯಂ ಅಂಶ, ಪ್ರೋಟೀನ್ ಅಂಶ, ವಿಟಮಿನ್ ಅಂಶ, ಖನಿಜಾಂಶ ಮತ್ತು ಲ್ಯಾಕ್ಟಿಕ್ ಆಮ್ಲ ಕಂಡುಬರುವುದರಿಂದ, ಹಾಲು ಮತ್ತು ಜೇನುತುಪ್ಪದ ಮಿಶ್ರಣದ ದುಪ್ಪಟ್ಟು ಆರೋಗ್ಯ ಪ್ರಯೋಜನಗಳು ದೇಹಕ್ಕೆ ಸಾಕಷ್ಟು ಒಳಿತು ಮಾಡಲಿವೆ.

ನೈಸರ್ಗಿಕವಾಗಿ ಹಾಲು ಮತ್ತು ಜೇನು ತುಪ್ಪವನ್ನು ಒಟ್ಟಾಗಿಸಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪ್ರಮಾಣದ ಪೌಷ್ಟಿಕ ಸತ್ವಗಳು, ಪ್ರೊಟೀನ್ ಅಂಶಗಳು ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಸಿಗುತ್ತದೆ.

ಇದರ ಕಾರಣದಿಂದ ನಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಮತ್ತು ಯಾವುದೇ ಕೆಲಸ ಮಾಡಲು ಹೊಸ ಹುರುಪು ಕಂಡುಬರುತ್ತದೆ ಎಂದು ಹೇಳಬಹುದು.

ಇಡೀ ದೇಹದ ತುಂಬಾ ಅದ್ಭುತವಾದ ಶಕ್ತಿ ಸಂಚಾರ ಉಂಟಾಗಿ ಆರೋಗ್ಯಕರವಾದ ಚುರುಕುತನದಿಂದ ಕೂಡಿದ ಬುದ್ಧಿವಂತಿಕೆಯನ್ನು ಹೊಂದಲು ಅನುಕೂಲವಾಗುತ್ತದೆ. ವಿಶೇಷವಾಗಿ ಬೆಳೆಯುವ ಮಕ್ಕಳಿಗೆ, ವಯಸ್ಸಾದ ವೃದ್ಧರಿಗೆ ಹಾಲು ಮತ್ತು ಜೇನುತುಪ್ಪದ ಮಿಶ್ರಣದಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡ ಜೇನುತುಪ್ಪ ಮತ್ತು ಹಾಲಿನ ಮಿಶ್ರಣ ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ ಇಡೀ ನಮ್ಮ ದೇಹವನ್ನು ಸೋಂಕುಗಳಿಂದ ರಕ್ಷಣೆ ಮಾಡಲು ಮುಂದಾಗುತ್ತದೆ. ಆಂತರಿಕ ದೇಹದ ರೋಗನಿರೋಧಕ ಶಕ್ತಿ ಕ್ರಮೇಣವಾಗಿ ಬಲಗೊಳ್ಳುತ್ತಾ ಹೋಗುತ್ತದೆ.

ಹಾಲು ಮತ್ತು ಜೇನುತುಪ್ಪ ಕ್ಯಾಲ್ಸಿಯಂ ಅಂಶಗಳನ್ನು ಒಳಗೊಂಡಿದೆ. ಇದರ ಕಾರಣದಿಂದ ಮೂಳೆಗಳು ಹಾಗೂ ಹಲ್ಲುಗಳ ಆರೋಗ್ಯ ಅತ್ಯುತ್ತಮವಾಗಿ ಉಳಿಯಲು ಸಹಾಯವಾಗುತ್ತದೆ.

ಪ್ರತಿದಿನ ಹಾಲಿನ ಜೊತೆ ಜೇನುತುಪ್ಪವನ್ನು ಮಿಶ್ರಣಮಾಡಿ ಸೇವನೆ ಮಾಡುವುದರಿಂದ ಮೂಳೆಗಳಿಗೆ ಸಂಬಂಧಪಟ್ಟಂತೆ ಇರುವ ಯಾವುದೇ ಸಮಸ್ಯೆಗಳಿಂದ ಪಾರಾಗಲು ಅನುಕೂಲವಾಗುತ್ತದೆ. ಉದಾಹರಣೆಗೆ ಆಸ್ಟಿಯೋಪೋರೋಸಿಸ್, ಕೀಲುನೋವು ಇತ್ಯಾದಿ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ.

ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ರಕ್ಷಣೆ ಮಾಡುವಲ್ಲಿ ಜೇನು ತುಪ್ಪ ತನ್ನ ಪ್ರೋ ಬಯೋಟಿಕ್ ಗುಣ ಲಕ್ಷಣಗಳಿಂದ ಅತ್ಯುತ್ತಮವಾದ ಬ್ಯಾಕ್ಟೀರಿಯಗಳನ್ನು ನಮ್ಮ ಕರುಳಿನ ಭಾಗಕ್ಕೆ ಒದಗಿಸುತ್ತದೆ.

ಇದು ನಮ್ಮ ಹೊಟ್ಟೆಯ ಭಾಗ, ಅನ್ನನಾಳ ಮತ್ತು ಕರುಳಿನ ಭಾಗವನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೊಟ್ಟೆಯ ಭಾಗದ ಕಿರಿಕಿರಿ, ಹೊಟ್ಟೆ ಉಬ್ಬರ, ಮೈ ಕೈ ಸೆಳೆತ ಮತ್ತು ಮಲಬದ್ಧತೆ ಸಮಸ್ಯೆ ಸುಲಭವಾಗಿ ದೂರವಾಗುತ್ತದೆ.

ಯಾರಿಗೆ ಈಗಾಗಲೇ ಶೀತ, ಕೆಮ್ಮು, ನೆಗಡಿ ಮತ್ತು ಇತ್ಯಾದಿ ಉಸಿರಾಟಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆಗಳು ಉಂಟಾಗಿರುತ್ತವೆ, ಅಂತಹವರು ಹಾಲು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿದ ಪದಾರ್ಥಗಳನ್ನು ಸೇವನೆ

ಮಾಡುವುದರಿಂದ ಅಥವಾ ಹಾಲಿಗೆ ಜೇನು ತುಪ್ಪವನ್ನು ಸೇರಿಸಿ ಸೇವನೆ ಮಾಡುವುದರಿಂದ ಜೇನುತುಪ್ಪದಲ್ಲಿ ಕಂಡುಬರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣ ಮತ್ತು ಹಾಲಿನಲ್ಲಿ ಸಿಗುವಂತಹ anti-inflammatory ಗುಣಸ್ವಭಾವ ಉಸಿರಾಟ ವ್ಯವಸ್ಥೆಗೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ದೂರಮಾಡುತ್ತದೆ.

Leave a Comment