ಮತ್ತೆ ಕೂದಲು ಬರಲು ಪ್ರಾರಂಭ ಇದನ್ನು ತಲೆಗೆ ಹಚ್ಚಿ ನೋಡಿ ಕೂದಲು ಉದುರುವಿಕೆ!

ನಮ್ಮ ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ, ನಮ್ಮ ಅಂದ ಕೂಡ ಹೆಚ್ಚಾಗುತ್ತದೆ. ನಾವು ಕೂಡ ನೋಡಲು ಸುಂದರ ವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಯುವ ಜನತೆ ಈ ಭಾಗ್ಯವನ್ನು ಪಡೆದಿಲ್ಲ ಬಿಡಿ. ಏಕೆಂದರೆ ತುಂಬಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುತ್ತಿದೆ.

ತಲೆ ಕೂದಲಿನ ಸೌಂದರ್ಯ ಮತ್ತು ದಟ್ಟಣೆ ಇಲ್ಲದೆ ಇರುವ ವ್ಯಕ್ತಿಯನ್ನು ನೋಡಿದರೆ ವಯಸ್ಸಾದಂತೆ ಕಾಣುತ್ತದೆ. ನೈಸರ್ಗಿಕ ವಾಗಿ ನಮ್ಮ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅದರಲ್ಲಿ ನಿಸರ್ಗದತ್ತವಾದ ಹೇರ್ ಆಯಿಲ್ ಗಳನ್ನು ಬಳಸುವುದು ಕೂಡ ಒಂದು. ಈ ಎಣ್ಣೆಗಳನ್ನು ಬಳಸುವುದರಿಂದ ನಮ್ಮ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಕೊಬ್ಬರಿ ಎಣ್ಣೆ:-ನಾವೆಲ್ಲರೂ ಬಹಳ ಹಿಂದಿನಿಂದಲೂ ಕೊಬ್ಬರಿ ಎಣ್ಣೆ ತಲೆಗೆ ಹಚ್ಚುತ್ತಾ ಬಂದಿದ್ದೇವೆ ಮತ್ತು ಇದರ ಪರಿಣಾ ಮವನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ.
ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು ಇದು ರಾಮ ಬಾಣದಂತೆ ನಿಯಂತ್ರಣ ಮಾಡುತ್ತದೆ ಮತ್ತು ತಲೆ ಕೂದಲಿನ ಭಾಗಕ್ಕೆ ಹೆಚ್ಚುವರಿ ಪ್ರಮಾಣದ ತೇವಾಂಶವನ್ನು ಒದಗಿಸಿ ತಲೆಕೂದಲು ಹಾನಿಯಾ ಗದಂತೆ ತಡೆಯುತ್ತದೆ.

ಇದರಿಂದ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ಸದೃಢವಾಗುತ್ತದೆ. ವಿವಿಧ ಬಗೆಯ ಸೋಂಕು ಗಳು ನೆತ್ತಿಗೆ ತಾಗದಂತೆ ಇದರಲ್ಲಿರುವ ಲಾರಿಕ್ ಆಮ್ಲ ವೈರಸ್ ಹಾಗೂ ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳ ವಿರುದ್ಧ ಹೋರಾಡುತ್ತದೆ.

ಪ್ರತಿದಿನ ನಿಮ್ಮ ನೆತ್ತಿಯ ಭಾಗಕ್ಕೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿವಾರಕ್ಕೆ ಒಂದು ಬಾರಿ ನಿಮ್ಮ ತಲೆಗೆ ಎಲ್ಲಾ ಭಾಗದ ಕೂದಲಿಗೂ ಸ್ವಲ್ಪ ಹೆಚ್ಚು ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ ಹಚ್ಚಿ

ಒಂದು ಅಥವಾ ಎರಡು ಗಂಟೆಗಳ ಕಾಲ ಇದನ್ನು ಹಾಗೆ ಬಿಟ್ಟು ಶಾಂಪೂ ಹಾಕಿ ತಲೆ ತೊಳೆದುಕೊಳ್ಳಿ. ಸಂಪೂರ್ಣ ಎಣ್ಣೆಯ ಅಂಶ ಹೋಗುವವರೆಗೂ ತೊಳೆಯಬೇಡಿ.
ಏಕೆಂದರೆ ಸ್ವಲ್ಪ ಪ್ರಮಾಣದ ಎಣ್ಣೆ ಕೂದಲಿನ ಬೇರುಗಳಿಗೆ ಅಗತ್ಯವಿರುತ್ತದೆ.​ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಇದೊಂದು ಅತ್ಯಂತ ಪರಿಣಾಮಕಾರಿಯಾದ ಮತ್ತು ಅಷ್ಟೇ ಕೂದಲಿಗೆ ಉತ್ತಮದಾಯಕ ಎನಿಸಿದ ಎಣ್ಣೆ ಯಾಗಿದ್ದು, ಇದರಲ್ಲಿ ವಿಟಮಿನ್ ಡಿ ಮತ್ತು ಇ ಜೊತೆಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಎಂಬ ಖನಿಜಾಂಶಗಳು ಅಪಾರ ಪ್ರಮಾಣದಲ್ಲಿದೆ.
ಇದೊಂದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ತಲೆ ಕೂದಲಿಗೆ ಕೆಲಸ ಮಾಡುತ್ತದೆ ಮತ್ತು ತಲೆಕೂದಲು ಒಣಗಿ ಉದುರಿ ಹೋಗುವುದನ್ನು ತಡೆಯುತ್ತದೆ.

ಹೆಚ್ಚಿನ ಪೌಷ್ಟಿಕಾಂಶಗಳು ಸಹ ತಲೆ ಕೂದಲಿಗೆ ಬಾದಾಮಿ ಎಣ್ಣೆಯಿಂದ ಸಿಗಲಿದ್ದು, ತಲೆ ಕೂದಲು ಆರೋಗ್ಯಕರವಾಗಿ ಸದೃಢವಾಗಿ ಮತ್ತು ವೇಗವಾಗಿ ಬೆಳೆಯಲು ಅನುಕೂಲ ವಾಗುತ್ತದೆ. ಬಾದಾಮಿ ಎಣ್ಣೆಗೆ ಅಲರ್ಜಿ ಇರುವವರು ಇದರ ಬಳಕೆ ಮಾಡು ವುದು ಬೇಡ.
ಬಾದಾಮಿ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ
ಇದನ್ನು ನೆತ್ತಿಯ ಭಾಗಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ

ಕೆಲವು ಗಂಟೆಗಳವರೆಗೆ ಅಥವಾ ಇಡೀ ರಾತ್ರಿ ಹಾಗೆ ಬಿಟ್ಟು ಶಾಂಪು ಹಾಕಿ ತೊಳೆದುಕೊಳ್ಳಿ
ಆಲಿವ್ ಆಯಿಲ್ ತಲೆ ಕೂದಲಿಗೆ ಪೌಷ್ಟಿಕಾಂಶ ಗಳನ್ನು ಒದಗಿಸುತ್ತದೆ ಮತ್ತು ತಲೆ ಕೂದಲಿನ ಭಾಗಕ್ಕೆ ಪರಿಣಾಮ ಕಾರಿಯಾಗಿ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ನಿಮ್ಮ ತಲೆ ಕೂದಲಿನ ಬೆಳವಣಿಗೆಯನ್ನು ವೃದ್ಧಿಸುತ್ತದೆ.

ಉಗುರು ಬೆಚ್ಚಗಿನ ಆಲಿವ್ ಆಯಿಲ್ ತೆಗೆದುಕೊಂಡು ನಿಮ್ಮ ತಲೆ ಕೂದಲಿಗೆ ಮಸಾಜ್ ಮಾಡಿನಿಮ್ಮ ನೆತ್ತಿಯ ಭಾಗಕ್ಕೆ ಮತ್ತು ನಿಮ್ಮ ಎಲ್ಲಾ ಕೂದಲಿಗೆ ಎಣ್ಣೆ ಹಚ್ಚಿ 30 ರಿಂದ 45 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ಶಾಂಪೂ ಹಾಕಿ ತಲೆ ಸ್ನಾನ ಮಾಡಿ.

ತಲೆಗೆ ತಂಪು ಕೂದಲಿಗೆ ಇಂಪು ಎನ್ನುವ ಅಪ್ಪಟ ಹರಳೆಣ್ಣೆ ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿ ಸುತ್ತದೆ ಮತ್ತು ತನ್ನ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿ ಯಲ್ ಮತ್ತು ಆಂಟಿ ಇನ್ಫಾಮೇಟರಿ ಗುಣಲಕ್ಷಣ ಗಳಿಂದ ತಲೆ ಕೂದಲಿನ ಆರೋಗ್ಯವನ್ನು ಕಾಪಾ ಡುತ್ತದೆ.

ಹರಳೆಣ್ಣೆಯನ್ನು ನಿಮ್ಮ ನೆತ್ತಿಯ ಭಾಗಕ್ಕೆ ಮತ್ತು ತಲೆ ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.ಒಂದು ಅಥವಾ ಎರಡು ಗಂಟೆಗಳ ಕಾಲ ಇದನ್ನು ಹಾಗೆ ಬಿಟ್ಟು ಸೀಗೆಕಾಯಿ ಪೌಡರ್ ಹಾಕಿ ಚೆನ್ನಾಗಿ ಮಸಾಜ್ ಮಾಡಿ.ಹರಳೆಣ್ಣೆ ಒಂದು ವೇಳೆ ತುಂಬಾ ಗಟ್ಟಿ ಎನಿಸಿದರೆ ಅದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್ ಹಾಕಿ ಮಿಕ್ಸ್ ಮಾಡಿ ಮಸಾಜ್ ಮಾಡಿ. ​

ತಲೆಯಲ್ಲಿ ಬೀಳುವ ಹೇನುಗಳಿಗೆ ಅತ್ಯಂತ ಪರಿಣಾ ಮಕಾರಿ ಯಾದ ಹೇರ್ ಆಯಿಲ್ ಎಂದರೆ ಅದು ಲೆವೆಂಡರ್ ಆಯಿಲ್. ಇದು ನೆತ್ತಿಯ ಭಾಗದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ ಮತ್ತು ತನ್ನ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ತಲೆಯ ಭಾಗದ ಸೋಂಕುಗಳನ್ನು ನಿವಾರಣೆ ಮಾಡಿ ತಲೆ ಕೂದಲಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ.

ಸ್ವಲ್ಪ ಲೆವೆಂಡರ್ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್ ಜೊತೆಗೆ ಮಿಕ್ಸ್ ಮಾಡಿ ಅದನ್ನು ನಿಮ್ಮ ನೆತ್ತಿಯ ಭಾಗಕ್ಕೆ ಪ್ರತಿ ದಿನ ಅನ್ವಯಿಸಿ.ಒಂದು ವೇಳೆ ಸಂಜೆಯ ಸಮಯದಲ್ಲಿ ಹಚ್ಚಿದರೆ ಇಡೀ ರಾತ್ರಿ ಹಾಗೆ ಬಿಡಿಬೆಳಗ್ಗೆ ಒಂದು ಗಿಡಮೂಲಿಕೆಯ ಶಾಂಪೂ ಜೊತೆಗೆ ತಲೆ ಸ್ನಾನ ಮಾಡಿ

ಈ ಮೇಲಿನ ಎಲ್ಲಾ ಹೇರ್ ಆಯಿಲ್‌ಗಳಲ್ಲಿ ನಿಮಗೆ ಯಾವುದು ಅನುಕೂಲಕರ ಅದನ್ನು ಬಳಸಿ. ಜೊತೆಗೆ ಆರೋಗ್ಯಕರವಾದ ಮತ್ತು ಸಮತೋಲನವಾದ ಆಹಾರ ಪದ್ಧತಿ ನಿಮ್ಮದಾಗ ಬೇಕು.ಖನಿಜಾಂಶಗಳು ಹಾಗೂ ವಿಟಮಿನ್ ಅಂಶಗಳು ಹೆಚ್ಚಾಗಿ ರುವ ಆಹಾರ ಪದಾರ್ಥಗಳನ್ನು ಸೇವಿಸಿ ಮಾನಸಿಕ ಒತ್ತಡ ದಿಂದ ದೂರವಾದರೆ ನಿಮ್ಮ ತಲೆ ಕೂದಲಿನ ಬೆಳವಣಿಗೆ ಹಾಗೂ ಗುಣಮಟ್ಟ ಹೆಚ್ಚಾಗುತ್ತದೆ..

Leave a Comment