ಬಾಯಿ ರುಚಿ ಇಲ್ವಾ ವಾಸನೆ ಕೂಡ ಗೊತ್ತಾಗ್ತಿಲ್ವಾ ಅಂದ್ರೆ ಹೀಗೆ ಮಾಡಿ ನೋಡಿ

ಚಳಿಗಾಲದಲ್ಲಿ ನಮಗೆ ಯಾವ ಸಮಯದಲ್ಲಿ ಶೀತ ಸಂಬಂಧಿ ಸಮಸ್ಯೆಗಳು ಬಂದು ನಮ್ಮ ದೇಹವನ್ನು ಆವರಿಸಿಕೊಂಡು ನಮಗೆ ಅನಾರೋಗ್ಯವನ್ನು ಉಂಟು ಮಾಡುತ್ತದೆ ಎಂಬುದನ್ನು ಊಹಿಸುವುದು ತುಂಬಾ ಕಷ್ಟ. ನಾವು ನಮ್ಮ ಎಚ್ಚರಿಕೆಯಲ್ಲಿ ಎಷ್ಟೇ ಜಾಗರೂಕತೆಯಿಂದ ಕಾಲ ಕಳೆದರೂ ಸಹ ನಮ್ಮನ್ನು ಶೀತ ಬಾಧೆ ಆಯಾಸಗೊಳಿಸದೆ ಬಿಡುವುದಿಲ್ಲ.

ಇಂತಹ ಸಂದರ್ಭದಲ್ಲಿ ಈಗ ಎಲ್ಲಾ ಕಡೆ ಕೊರೊನಾಭೀತಿ ಬೇರೆ ಇರುವುದರಿಂದ ಅಪ್ಪಿತಪ್ಪಿ ಜ್ವರ ಬಂದಂತಹ ಸಂದರ್ಭದಲ್ಲಿ ಏನಾದರೂ ಬಾಯಿಯ ರುಚಿ ಗೊತ್ತಾಗದೆ ಇದ್ದರೆ ಅದನ್ನು ಕೊರೊನಾಎಂದು ನಮಗೆ ನಾವೇ ಬಿಂಬಿಸಿಕೊಳ್ಳುವಂತೆ ಭಯವಾಗುತ್ತದೆ.

ನಮಗೆ ದೈವದತ್ತವಾಗಿ ಬಂದಿರುವ ಒಂದು ಗುಣಲಕ್ಷಣ ಎಂದರೆ ನಾವು ಸೇವಿಸುವ ಯಾವುದೇ ಆಹಾರದ ರುಚಿ ಮತ್ತು ವಾಸನೆಯನ್ನು ಒಮ್ಮೆಲೇ ಕಂಡು ಹಿಡಿದುಕೊಳ್ಳುವಂತೆ ನಮ್ಮ ದೇಹ ರೂಪುಗೊಂಡಿರುತ್ತದೆ.ವಾಸನೆಯನ್ನು ಕಂಡು ಹಿಡಿಯುವುದು ನಮಗೆ ಕಷ್ಟವಾದರೆ ಅದರ ಹಿಂದೆಯೇ ಆಹಾರದ ರುಚಿ ಸಹ ನಮಗೆ ಗೊತ್ತಾಗುವುದಿಲ್ಲ. ಒಂದೆರಡು ದಿನಗಳ ಕಾಲ ಇದು ಹೀಗೆ ಮುಂದುವರೆಯುತ್ತದೆ.ಕೇವಲ ಶೀತದ ಸಮಸ್ಯೆಗಳಿಗೆ ಮಾತ್ರವಲ್ಲದೆ, ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಎಂದರೆ ಉದಾಹರಣೆಗೆ ಮತ್ತು ಸಮಸ್ಯೆಗಳಿಂದ ನಮಗೆ ಆಹಾರದ ವಾಸನೆ ಗೊತ್ತಾಗುವುದಿಲ್ಲ. ಅದೇ ರೀತಿ ಸಮಸ್ಯೆಗಳಿಂದ ನಮಗೆ ಆಹಾರದ ರುಚಿ ಗೊತ್ತಾಗುವುದಿಲ್ಲ.

ಇದರ ಜೊತೆಗೆ ಶೀತ ಸಂಬಂಧಿತ ಸಮಸ್ಯೆಗಳು ನಮ್ಮ ಉಸಿರಾಟದ ವ್ಯವಸ್ಥೆಯನ್ನು ಹದಗೆಡಿಸಿ ನಮಗೆ ಆಹಾರದ ವಾಸನೆ ಗೊತ್ತಾಗದಂತೆ ಮಾಡುತ್ತದೆ. ಸುಮಾರು ಮೂರು ನಾಲ್ಕು ದಿನಗಳಲ್ಲಿ ಇದು ಸರಿ ಹೋಗದೆ ಇದ್ದರೆ ಆಗ ನೀವು ನಿಮ್ಮ ವಿಶೇಷ ತಂತ್ರಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಒಂದು ವೇಳೆ ನಿಮಗೂ ಸಹ ಇದೇ ರೀತಿ ಉಸಿರಾಟದ ತೊಂದರೆಯ ಮೂಲಕ ಅಥವಾ ಬೇರೆ ಯಾವುದೇ ಕಾರಣಗಳಿಂದ ನೀವು ಸೇವನೆ ಮಾಡುವ ಆಹಾರದ ರುಚಿ ಮತ್ತು ವಾಸನೆ ಗೊತ್ತಾಗದಿದ್ದರೆ ಈ ಕೆಳಗಿನ ಮನೆಮದ್ದುಗಳನ್ನು ಒಮ್ಮೆ ನೀವು ಟ್ರೈ ಮಾಡಬಹುದು.

ಹರಳೆಣ್ಣೆಯನ್ನು ಬಳಕೆ ಮಾಡುವುದರಿಂದ ಬಹಳ ಬೇಗನೆ ನಿಮ್ಮ ಆಹಾರದ ರುಚಿ ಮತ್ತು ವಾಸನೆ ನಿಮಗೆ ತಿಳಿದುಬರಲಿದೆ. ಇದರ ಜೊತೆಗೆ ಶೀತ ಕೆಮ್ಮು ನೆಗಡಿ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ.ಒಂದು ಟೀ ಚಮಚ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಆಗುವಂತೆ ಬಿಸಿ ಮಾಡಿ ಅದನ್ನು ನಿಮ್ಮ ಒಂದೊಂದು ಮೂಗಿನ ಒಳ್ಳೆಗೆ ಕೆಲವು ಹನಿಗಳಷ್ಟು ಹಾಕಿಕೊಳ್ಳಿ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ.

ನಿಮ್ಮ ಶೀತ ಮತ್ತು ಜ್ವರದ ಸಮಸ್ಯೆಗೆ ಬೆಳ್ಳುಳ್ಳಿ ಒಂದು ಅದ್ಭುತ ಪರಿಹಾರ ಎಂದು ಹೇಳಬಹುದು.
ಏಕೆಂದರೆ ಬೆಳ್ಳುಳ್ಳಿಯಲ್ಲಿ ಆಂಟಿ – ಇಂಪ್ಲಾಮೇಟರಿ ಮತ್ತು ಆಂಟಿ – ಮೈಕ್ರೋಬಿಯಲ್ ಗುಣಲಕ್ಷಣಗಳು ಇರುವ ಕಾರಣ ನಿಮ್ಮ ಶೀತ ಮತ್ತು ಇನ್ನಿತರ ಸಮಸ್ಯೆಗಳನ್ನು ಇದು ಸುಲಭವಾಗಿ ಹೋಗಲಾಡಿಸುತ್ತದೆ.
ಒಂದು ಗಡ್ಡೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಸಣ್ಣಗೆ ಹೆಚ್ಚಿ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಸ್ಟವ್ ಮೇಲೆ ಒಂದು ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಚೂರುಗಳನ್ನು ಹಾಕಿ ಚಹ ತಯಾರು ಮಾಡಿಕೊಳ್ಳಿ.

ಬೇರೊಂದು ಲೋಟಕ್ಕೆ ಇದನ್ನು ಸೋಸಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೇವಲ ನಿಮ್ಮ ಮೂಗು ಕಟ್ಟಿಕೊಂಡಿರುವ ಸಮಸ್ಯೆ ಬಗೆಹರಿಯುವ ಜೊತೆಗೆ ಎದೆ ಮತ್ತು ಗಂಟಲು ಕಟ್ಟಿಕೊಂಡಿರುವುದು ಸಹ ದೂರವಾಗುತ್ತದೆ.

ಚಳಿಗಾಲದಲ್ಲಿ ಎದುರಾಗುವ ಶೀತದ ಸಮಸ್ಯೆಗಳಿಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಶುಂಠಿ. ಪ್ರತಿಯೊಬ್ಬರ ಮನೆಯಲ್ಲಿ ಶುಂಠಿ ಲಭ್ಯವಿರುತ್ತದೆ.ಅಡುಗೆ ಮನೆಯಲ್ಲಿ ಬೇರಿನ ಆಕಾರದಲ್ಲಿ ಕಂಡುಬರುವ ಈ ಮನೆಮದ್ದು ನಿಮ್ಮ ಬಾಯಿ ರುಚಿ ಮತ್ತು ಮೂಗಿನ ವಾಸನೆಯನ್ನು ಸರಿಪಡಿಸುತ್ತದೆ.ಶುಂಠಿ ತನ್ನ ಅದ್ಭುತವಾದ ಗಾಡ ವಾಸನೆಯಿಂದ ಮನೆ ಮಾತಾಗಿದೆ. ತಾಂತ್ರಿಕವಾಗಿ ಇದು ನಿಮ್ಮ ದೇಹದಲ್ಲಿ ಕಾರ್ಯ ಚಟುವಟಿಕೆ ನಿಲ್ಲಿಸಿರುವ ನರನಾಡಿಗಳನ್ನು ಉತ್ತೇಜಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ

ನೀವು ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಹಸಿಶುಂಠಿಯನ್ನು ಜಿಗಿದು ತಿನ್ನಬಹುದು ಅಥವಾ ಶುಂಠಿ ಚಹಾ ತಯಾರು ಮಾಡಿ ಕುಡಿಯಬಹುದು.ಆದರೆ ಸೇವನೆ ಮಾಡುವಾಗ ಮಾತ್ರ ಮಿತಿ ಇರಲಿ. ಏಕೆಂದರೆ ಶುಂಠಿಯನ್ನು ಅತಿಯಾಗಿ ಸೇವನೆ ಮಾಡಿದರೆ ಎದೆಯುರಿ ಮತ್ತು ಗಂಟಲು ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ.ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಕಾರಣ ನಿಮ್ಮ ದೇಹದ ರೋಗ – ನಿರೋಧಕ ಶಕ್ತಿಯನ್ನು ಇದು ಹೆಚ್ಚು ಮಾಡಿ ತನ್ನ ಆಂಟಿ – ಮೈಕ್ರೋಬಿಯಲ್ ಗುಣ ಲಕ್ಷಣಗಳಿಂದ ನಿಮ್ಮ ದೇಹದಲ್ಲಿ ಅಡಗಿ ಕೂತಿರುವ ಶೀತ ಸಂಬಂಧಿ ಸೋಂಕುಕಾರಕಸೂಕ್ಷ್ಮಾಣು ಕ್ರಿಮಿಗಳನ್ನು ನಾಶಪಡಿಸಿ ನಿಮ್ಮ ಮೂಗು ಹಾಗೂ ಗಂಟಲಿನ ಭಾಗದಲ್ಲಿ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುತ್ತದೆ. ಆದಷ್ಟು ಬೇಗನೆ ನಿಮಗೆ ಆಹಾರದ ರುಚಿ ಮತ್ತು ವಾಸನೆಯನ್ನು ಗೊತ್ತಾಗುವಂತೆ ಮಾಡುತ್ತದೆ.

ಒಂದು ಲೋಟ ಬಿಸಿ ನೀರಿಗೆ ಒಂದು ಟೀ ಚಮಚ ಜೇನು ತುಪ್ಪ ಮತ್ತು 1 ಟೀ ಚಮಚ ತಾಜಾ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ. ನೀವು ಆಹಾರ ಸೇವನೆ ಮಾಡುವ ಮುಂಚೆ ಇದನ್ನು ಕುಡಿದರೆ ವಾಸಿ.ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ನಿಮ್ಮ ಜೀರ್ಣಾಂಗಕ್ಕೆ ಸಂಬಂಧಪಟ್ಟ ಅಸ್ವಸ್ಥತೆಗಳನ್ನು ಸರಿಪಡಿಸಿಕೊಳ್ಳಲು

ಆಪಲ್ ಸೈಡರ್ ವಿನೆಗರ್ ಬಳಕೆ ಮಾಡುವುದು ಉತ್ತಮ.ಆಪಲ್ ಸೈಡರ್ ವಿನೆಗರ್ ನಲ್ಲಿ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳು ಅಡಗಿರುವ ಕಾರಣ ಮೂಗಿನ ಭಾಗದಲ್ಲಿ ಕಂಡುಬರುವ ಸೂಕ್ಷ್ಮಾಣು ಕಣಗಳನ್ನು ಹೋಗಲಾಡಿಸಿ ಸರಾಗವಾಗಿ ಉಸಿರಾಡಲು ಮತ್ತು ಆಹಾರದ ರುಚಿಯನ್ನು ವಾಸನೆ ಮೂಲಕ ಅನುಭವಿಸಲು ಅನುವು ಮಾಡಿಕೊಡುತ್ತದೆ,ಒಂದು ಗ್ಲಾಸ್ ನೀರಿನಲ್ಲಿ 1 ಟೇಬಲ್ ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಮಿಶ್ರಣ ಮಾಡಿ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ಆಪಲ್ ಸೈಡರ್ ವಿನೆಗರ್ ಅನ್ನು ಅತಿಯಾಗಿ ಸೇವನೆ ಮಾಡಲು ಹೋಗಬೇಡಿ.

Leave A Reply

Your email address will not be published.