ಈ ಪೊಟ್ಟಣ ತಯಾರಿಸಿ ಸಾಕು ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರಲ್ಲ!

ಬರೀ 2 ವಸ್ತು ಇದ್ದರೆ ಸಾಕು ಈ ಪೊಟ್ಟಣವನ್ನು ತಯಾರಿ ಮಾಡಬಹುದು ಮತ್ತು ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ. ಮನೆಗೆ ಕರೆಯದೆ ಬರುವ ಅತಿಥಿ ಎಂದರೆ ಅದು ಜಿರಳೆ. ಏಕೆಂದರೆ ಇವುಗಳು ಬಾರದೆ ಇರುವ ಹಾಗೆ ಎಷ್ಟೇ ಜಾಗ್ರತೆ ಮಾಡಿದರು ಜಿರಳೆಗಳು ಮನೆ ಒಳಗೆ ಬಂದು ಸೇರುತ್ತವೆ. ಕೆಲವೊಮ್ಮೆ ಜಿರಳೆಗಳನ್ನು ಓಡಿಸಲು ಅಂಗಡಿಯಿಂದ ಲಕ್ಷ್ಮಣ ರೇಖೆ ಜಿರಳೆ ಸ್ಪ್ರೇ ಗಳನ್ನು ತಂದು ಮನೆಯಲ್ಲಿ ಎಲ್ಲಾ ಕಡೆ ಹಚ್ಚುತ್ತೇವೆ ಹಾಗು ಸ್ಪ್ರೇ ಮಾಡುತ್ತೇವೆ. ಅದರೆ ಮಕ್ಕಳು ಇರುವ ಮನೆಯಲ್ಲಿ ಹೀಗೆ ಮಾಡುವುದು ಸರಿಯಲ್ಲ. ಏಕೆಂದರೆ ಇದರಲ್ಲಿ ಇರುವ ರಾಸಾಯನಿಕಗಳು ತೊಂದರೆ ಉಂಟು ಮಾಡುತ್ತದೆ.

ಜಿರಳೆ ಓಡಿಸುವುದಕ್ಕೆ ಈ ಒಂದು ಟಿಪ್ಸ್ ಬಳಸಿದರೆ ಸಾಕು. ಮೊದಲು ಒಂದು ಬೌಲ್ ತೆಗೆದುಕೊಂಡು ಬನ್ನಿ. ಇದಕ್ಕೆ 2 ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳಿ. ಜಿರಳೆಗೆ ಅಡುಗೆ ಸೋಡ ಎಂದರೆ ಆಗುವುದಿಲ್ಲ. ಇದರ ಸ್ಮೆಲ್ ಗೆನೇ ಜಿರಳೆ ಸತ್ತು ಹೋಗುತ್ತದೆ. ನಂತರ ಇದಕ್ಕೆ ಮುಖಕ್ಕೆ ಹಚ್ಚುವ ಪೌಡರ್ ಅನ್ನು 2 ಚಮಚ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ಒಂದು ಪೇಪರ್ ನಲ್ಲಿ ಹಾಕಿ ಮಡಿಸಿ ರಬ್ಬರ್ ಹಾಕಿ ಪೊಟ್ಟಣ ದ ರೀತಿ ಮಾಡಿ ಜಿರಳೆ ಇರುವ ಜಾಗದಲ್ಲಿ ಇಡಬೇಕು. ನಂತರ ಪಿನ್ ಸಹಯದಿಂದ ಸಣ್ಣ ಸಣ್ಣ ಹೋಲ್ ಅನ್ನು ಮಾಡಿ. ಈ ರೀತಿ ಮಾಡಿದರೆ ಅದರ ಸ್ಮೆಲ್ ಗೆ ಜಿರಳೆ ಗಳು ಓಡಿ ಹೋಗುತ್ತದೆ ಅಥವಾ ಸತ್ತು ಹೋಗುತ್ತದೆ. ಇದಕ್ಕೆ ಜಿರಳೆಗಳಿಗೆ ಆಗುವುದಿಲ್ಲ. ಹಾಗಾಗಿ ಜಿರಳೆ ಜಾಸ್ತಿ ಇರುವ ಜಾಗದಲ್ಲಿ ಈ ಪೊಟ್ಟಣವನ್ನು ಮಾಡಿ ಇಟ್ಟರೆ ಸಾಕು.

Leave a Comment