ಎಲ್ಲಾರ ಮನೆಯಲ್ಲಿ ಮುಖಕ್ಕೆ ಹಚ್ಚುವ ಪೌಡರ್ ಇದ್ದೆ ಇರುತ್ತದೆ. ಈ ಪೌಡರ್ ಅನ್ನು ಫೇಸ್ ಸ್ವೇಟ್ ಆಗಬಾರದು ಬ್ಯಾಡ್ ಸ್ಮೆಲ್ ಬರಬಾರದು ಅಂತಾ ಉಸ್ ಮಾಡಿಕೊಳ್ಳುತ್ತಿವಿ. ಇದರ ಉಪಯೋಗ ಬರೀ ಇಷ್ಟೇ ಅಲ್ಲ. ಬೇರೆ ಬೇರೆ ವಿಧಾನದಲ್ಲಿ ಪೌಡರ್ ಅನ್ನು ಬಳಸಬಹುದು. ಇನ್ನು ಯಾವುದೇ ಒಂದು ವಸ್ತು ತೆಗೆದುಕೊಂಡರು ಅದಕ್ಕೆ ಎಕ್ಸ್ಪ್ರೆರ್ ಡೇಟ್ ಅಂತಾ ಇರುತ್ತದೆ. ಈ ರೀತಿ ಎಕ್ಸ್ಪ್ರೆರ್ ಆಗಿರುವ ಪೌಡರ್ ಇದ್ದರೆ ಯಾವುದೇ ಕಾರಣಕ್ಕೂ ಎಸೆಯಬೇಡಿ. ಇದು ನಿಮ್ಮ ಮನೆಯ ಅನೇಕ ಕೆಲಸಕ್ಕೆ ಬರುತ್ತದೆ.
ಇದನ್ನು ಪೌಡರ್ ಅನ್ನು ರೂಮ್ ಫ್ರೆಷ್ನರ್ ಹಾಗು ಪರ್ಫ್ಯೂಮ್ ಆಗಿ ಈ ಟ್ಯಾಲ್ ಕಲ್ ಪೌಡರ್ ಅನ್ನು ಬಳಸಬಹುದು. ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಹಾಗು ಒಂದು ಚಮಚ ಟ್ಯಾಲ್ ಕಲ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗೆ ಆದ ನಂತರ ಇದನ್ನು ಸ್ಪ್ರೇ ಬಾಟಲ್ ಗೆ ಹಾಕಿ ಇಟ್ಟುಕೊಳ್ಳಿ. ಇದನ್ನು ಮನೆಯ ಕಾರ್ಟನ್ ಗೆ ಹಾಕಬಹುದು. ಬಟ್ಟೆಗೆ ಸ್ಪ್ರೇ ಮಾಡುವುದರಿಂದ ಒಳ್ಳೆಯ ಸುಗಂಧ ಬರುತ್ತದೆ.
ಇನ್ನು ಬೆಳ್ಳಿಯ ಆಭರಣಗಳು ಹಾಗೆ ಇಟ್ಟರೆ ಕಪ್ಪಾಗುತ್ತದೆ. ಇದನ್ನು ತೆಗೆದು ಇಡುವ ಮುನ್ನ ಸ್ವಲ್ಪ ಟ್ಯಾಲ್ ಕಲ್ ಪೌಡರ್ ಹಾಕಿ ಡಬ್ಬದಲ್ಲಿ ಇಟ್ಟರೆ ಖಂಡಿತವಾಗಿ ಬೆಳ್ಳಿಯ ಆಭರಣಗಳು ಕಪ್ಪಾಗಾಗುವುದಿಲ್ಲ.
ಇನ್ನು ಅಡುಗೆ ಮನೆ ಎಷ್ಟೇ ಸ್ವಚ್ಛ ಮಾಡಿದರು ಇರುವೆಗಳು ಇದ್ದೆ ಇರುತ್ತವೆ. ಇವುಗಳನ್ನು ಹೋಗಲಾಡಿಸಲು ಈ ರೀತಿಯ ಟ್ಯಾಲ್ ಕಲ್ ಪೌಡರ್ ಅನ್ನು ಇರುವೆ ಇರುವ ಜಾಗಕ್ಕೆ ಹಾಕಿದರೆ ತಕ್ಷಣ ಇರುವೆ ಮಾಯ ಆಗುತ್ತವೆ.
ರೇಷ್ಮೆ ಬಟ್ಟೆಯನ್ನು ಒಂದು ಬಾರಿ ಧರಿಸಿ ಇಟ್ಟರೆ ಮತ್ತೆ ಧರಿಸುವುದಿಲ್ಲ. ಇದರಿಂದ ಬಟ್ಟೆ ಸ್ಮೆಲ್ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಒಂದು ಟೈಶ್ಯೂ ಪೇಪರ್ ನಲ್ಲಿ ಪೌಡರ್ ಹಾಕಿ ಮಡಿಸಿ ಸೀರೆ ಮಧ್ಯದಲ್ಲಿ ಇಡುವುದರಿಂದ ಬ್ಯಾಡ್ ಸ್ಮೆಲ್ ಬರುವುದಿಲ್ಲ. ಒಳ್ಳೆಯ ಸುವಾಸನೆ ಇರುತ್ತದೆ.
ಸಿಂಕ್ ಹೊಲ್ ನಲ್ಲಿ ಕೆಟ್ಟ ಸ್ಮೆಲ್ ಬರುತ್ತದೆ. ಈ ರೀತಿ ಆಗಬಾರದು ಎಂದರೆ ಹೋಲ್ ಸುತ್ತ ಟ್ಯಾಲ್ ಕಲ್ ಪೌಡರ್ ಅನ್ನು ಹಾಕಿ ಹಾಗೆ ಬಿಟ್ಟು ಬೆಳಗ್ಗೆ ತೊಳೆಯಿರಿ. ಈ ರೀತಿ ಮಾಡಿದರೆ ಕೆಟ್ಟ ಸ್ಮೆಲ್ ಬರುವುದಿಲ್ಲ ಹಾಗು ಜಿರಳೆ ಕಾಟ ಇರುವುದಿಲ್ಲ.