ಹಿಪ್ಪಲಿ ಸಸ್ಯದ ಅರೋಗ್ಯಕರಿ ಉಪಯೋಗಗಳು !

ಆಯುರ್ವೇದದಲ್ಲಿ ಹಿಪ್ಪಲಿ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅನೇಕ ರೀತಿಯ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದಿನ ರೀತಿಯಲ್ಲಿ ಇದು ನೇರವಾಗುತ್ತದೆ.ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರೇಲ್ ಮಟ್ಟ ಕಡಿಮೆ ಆಗುತ್ತದೆ. ಹೊಟ್ಟೆ ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗು ಕೆಟ್ಟ ಕೊಲೆಸ್ಟ್ರಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು.

ಹಿಪ್ಪಲಿ ಅನ್ನು ಬಿಸಿ ಮಾಡಿ ಪುಡಿ ಮಾಡಿ ವೀಳ್ಯದೆಲೆಯಲ್ಲಿ ಇಟ್ಟು ಜೇನುತುಪ್ಪ ಬೆರೆಸಿ ಎರಡು ಬಾರಿ ಸೇವಿಸಿ. ಮಕ್ಕಳಿಗೆ ಅರ್ಧ ಚಮಚ ನೀಡಿ. ಇದು ಆಸ್ತಾಮ ಸಮಸ್ಸೆ ಇರುವವರೆಗೂ ಕೂಡ ಅತ್ಯುತ್ತಮ ಆಗಿದೆ.

ಇನ್ನು ಮಲಬದ್ಧತೆ ಸಮಸ್ಸೆಗೆ ಹಿಪ್ಪಲಿ ಉತ್ತಮವಾಗಿದೆ. ಹಿಪ್ಪಲಿ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅರ್ಧ ಕಪ್ ಬಿಸಿ ನೀರಿಗೆ ಹಿಪ್ಪಲಿ ಚೂರಣ ಮತ್ತು 1 ಚಮಚ ತ್ರಿಫಲ ಚೂರಣ ಅನ್ನು ಬೆರೆಸಿ ಸೇವನೆ ಮಾಡಬೇಕು. ಇದರಿಂದ ಮಲಬದ್ಧತೆ ಸಮಸ್ಸೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೇ ಹಿಪ್ಪಲಿ ಸಂಧಿವಾತ ಮತ್ತು ಸೊಂಟ ನೋವನ್ನು ನೀವಾರಿಸುತ್ತದೆ.

Leave a Comment