ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ರಾಹುವಿನ ದುಷ್ಟಪರಿಣಾಮ ಹೆಚ್ಚಾಗುತ್ತದೆ!

ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕಾದರೆ ಅಡುಗೆ ಮನೆ ಉತ್ತಮವಾಗಿರಬೇಕು. ವಾಸ್ತುತಜ್ಞರುಗಳ ಪ್ರಕಾರ ಅಡುಗೆಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು. ಅಡುಗೆ ಮನೆಯ ದಿಕ್ಕು, ಅಡುಗೆ ಮನೆಯಲ್ಲಿ ಒಲೆ ಇಡುವ ದಿಕ್ಕು ಸೇರಿದಂತೆ ಹಲವು ವಿಷಯಗಳ ಕುರಿತು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಮನೆಯ ಅಡುಗೆ ಮನೆ ವಾಸ್ತು ಪ್ರಕಾರ ಇದೆಯೇ ಎಂದು ತಿಳಿದುಕೊಳ್ಳಿ.

ಸುಂದರವಾದ ಮಣ್ಣಿನ ವಸ್ತುಗಳನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟಿರುತ್ತಾರೆ. ಕಿಚನ್‌ನ ಪೂರ್ವ ಭಾಗದಲ್ಲಿ ದೊಡ್ಡ ಕಿಟಕಿಗಳು, ದಕ್ಷಿಣದಲ್ಲಿ ಸಣ್ಣ ವೆಂಟಿಲೇಟರ್‌ ಇಟ್ಟಿರುತ್ತಾರೆ. ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲಿಟ್ಟಿರುತ್ತಾರೆ. ಎಲ್ಲಾ ಆಹಾರ ಧಾನ್ಯಗಳು, ಪಾತ್ರೆಗಳು, ಓವರ್‌ ಹೆಡ್‌ ಅಲ್ಮೆರಾಗಳನ್ನು ದಕ್ಷಿಣ ಮತ್ತು ಪಶ್ಚಿಮ ಗೋಡೆಗಳ ಮೇಲೆ ಇಟ್ಟಿರುತ್ತಾರೆ. ಹೀಗೆ, ಪಕ್ಕಾ ವಾಸ್ತು ಪ್ರಕಾರ ಅಡುಗೆ ಮನೆ ಇರುತ್ತದೆ. ಆದರೆ, ಕೆಲವೊಂದು ಬಾರಿ ಅಡುಗೆಮನೆಯಲ್ಲಿ ಕೆಲವು ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹರಡಲು ಪ್ರಾರಂಭವಾಗುತ್ತದೆ. ವಾಸ್ತು ಪ್ರಕಾರ ಕೆಲವೊಂದು ವಸ್ತುಗಳನ್ನು ಅಡುಗೆಮನೆಯಲ್ಲಿ ಇಡಬಾರದು. ಯಾವೆಲ್ಲ ವಸ್ತುಗಳನ್ನು ಇಡಬಾರದು ಎಂದು ಮುಂದಿನ ಚಿತ್ರಗಳಲ್ಲಿ ಮಾಹಿತಿ ನೀಡಲಾಗಿದೆ.

ಅಡುಗೆಮನೆಯಲ್ಲಿ ಕನ್ನಡಿ ಬೇಡ- ಅಡುಗೆಮನೆಯ ಅಲಂಕಾರದ ಉದ್ದೇಶಕ್ಕಾಗಿ ಕನ್ನಡಿ ಅಳವಡಿಸಿಕೊಳ್ಳುವವರು ಇದ್ದಾರೆ. ಆದರೆ, ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಕನ್ನಡಿ ಇರುವುದು ಅಶುಭ. ಅಡುಗೆಮನೆಯಲ್ಲಿರುವ ಒಲೆಯ ಬೆಂಕಿ ದೇವರ ಸೂಚಕ. ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಾಣುವುದು ಅಶುಭ ಎನ್ನುವ ನಂಬಿಕೆಯಿದೆ. ಮನೆಯ ಆರ್ಥಿಕ ಪರಿಸ್ಥಿತಿ ಮೇಲೂ ಇದರಿಂದ ಕೆಟ್ಟ ಪರಿಣಾಮ ಬೀರಬಹುದು.

ಅಡುಗೆಮನೆಯಲ್ಲಿ ಕನ್ನಡಿ ಬೇಡ- ಅಡುಗೆಮನೆಯ ಅಲಂಕಾರದ ಉದ್ದೇಶಕ್ಕಾಗಿ ಕನ್ನಡಿ ಅಳವಡಿಸಿಕೊಳ್ಳುವವರು ಇದ್ದಾರೆ. ಆದರೆ, ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಕನ್ನಡಿ ಇರುವುದು ಅಶುಭ. ಅಡುಗೆಮನೆಯಲ್ಲಿರುವ ಒಲೆಯ ಬೆಂಕಿ ದೇವರ ಸೂಚಕ. ಕನ್ನಡಿಯಲ್ಲಿ ಬೆಂಕಿಯ ಪ್ರತಿಬಿಂಬ ಕಾಣುವುದು ಅಶುಭ ಎನ್ನುವ ನಂಬಿಕೆಯಿದೆ. ಮನೆಯ ಆರ್ಥಿಕ ಪರಿಸ್ಥಿತಿ ಮೇಲೂ ಇದರಿಂದ ಕೆಟ್ಟ ಪರಿಣಾಮ ಬೀರಬಹುದು.

ಒಡೆದ ಪಾತ್ರೆಗಳು: ಮನೆಯ ಅಡುಗೆ ಕೋಣೆಯಲ್ಲಿ ದಿನನಿತ್ಯ ಹಲವು ಬಗೆಯ ಪಾತ್ರೆಗಳನ್ನು ಬಳಸಲಾಗುತ್ತದೆ. ಪಾತ್ರೆಗಳು ಹಳತಾದಂತೆ ಒಡೆಯುವುದು ಸಾಮಾನ್ಯ. ಕೆಲವೊಮ್ಮೆ, ಕೊಂಚ ಒಡೆದ ಪಾತ್ರೆಯನ್ನು ಕೆಲವರು ಬಳಸುತ್ತಾರೆ. ಆದರೆ, ಒಡೆದ ಪಾತ್ರೆಯನ್ನು ಬಳಸಬೇಡಿ ಎನ್ನುತ್ತಾರೆ ವಾಸ್ತು ತಜ್ಞರು. ಒಡೆದ ಪಾತ್ರೆಗಳನ್ನು ಅಡುಗೆಮನೆಯಲ್ಲಿಟ್ಟರೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತವಂತೆ.

ಮೆಡಿಸಿನ್‌ ಇಡಬೇಡಿ: ಅಡುಗೆಮನೆಯಲ್ಲಿ ಯಾವುದಾದರೂ ಮುಲಾಮು, ಬ್ಯಾಂಡೇಜ್‌ಗಳು, ಮಾತ್ರೆಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದೆ. ಅಡುಗೆಮಾಡುವಾಗ ಕೈಗೆ ಗಾಯವಾದರೆ, ಕೈ ಸುಟ್ಟರೆ ತಕ್ಷಣ ಬಳಸಬಹುದೆಂಬ ಕಾರಣಕ್ಕೆ ಹಲವು ಬಗೆಯ ಔಷಧಗಳನ್ನು ಇಟ್ಟಿರುತ್ತಾರೆ. ಆದರೆ, ವಾಸ್ತು ಪ್ರಕಾರ ಯಾವುದೇ ಔಷಧಿಗಳನ್ನು ಅಡುಗೆಮನೆಯಲ್ಲಿ ಇಡಬಾರದು. ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅನಗತ್ಯ ಖರ್ಚುವೆಚ್ಚಕ್ಕೆ ದಾರಿಯಾಗುತ್ತದೆ.

ವಾಸ್ತು ಪ್ರಕಾರ ಮಾತ್ರವಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಹಲವು ವಸ್ತುಗಳನ್ನು ಅಡುಗೆಮನೆಯಲ್ಲಿ ಇಡದಿರುವುದು ಸೂಕ್ತ. ಅಂದರೆ, ಪೆಟ್ರೋಲ್‌, ದಿನಪತ್ರಿಕೆಗಳು, ಜಿರಳೆ ಸ್ಪ್ರೇ, ಪಫ್ರ್ಯೂಮ್‌ ಇತ್ಯಾದಿಗಳನ್ನು ಅಡುಗೆಮನೆಯಲ್ಲಿಡಬೇಡಿ. ಅಡುಗೆ ಮನೆ ಸುರಕ್ಷಿತವಾಗಿರಲಿ. ವಾಸ್ತು ಪ್ರಕಾರವಾಗಿರಲಿ.

https://youtu.be/cSxaoWGY5tw

Leave a Comment