ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ?? ಶಾಸ್ತ್ರದ ಹಿನ್ನೆಲೆ ಏನು ಹೇಳುತ್ತದೆ

ಹಿಂದೂ ಧರ್ಮದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಹಿಡಿದು ಕೂದಲು ತೊಳೆಯುವವರೆಗೂ ಶಾಸ್ತ್ರಗಳ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಯಾವ ದಿನ ಯಾವ ಕೆಲಸ ಮಾಡಿದರೆ ಶುಭ..? ಯಾವ ಕೆಲಸ ಮಾಡಿದರೆ ಅಶುಭ ಎಂಬುದರ ಬಗ್ಗೆ ಹೇಳಲಾಗಿದೆ. ದಿನಗಳಿಗೆ ತಕ್ಕಂತೆ ಹೇಗೆ ನಿಯಮಗಳನ್ನು ಹೇಳಲಾಗಿದೆಯೋ ಹಾಗೇ, ವಿವಾಹಿತ ಮಹಿಳೆಯರು ಪಾಲಿಸಬೇಕಾದ ಕೆಲವೊಂದು ನಿಯಮಗಳನ್ನು ಕೂಡ ಹೇಳಲಾಗಿದೆ. ಮಹಿಳೆಯರು ಕೂದಲು ತೊಳೆಯುವ ವಿಚಾರವನ್ನು ತೆಗೆದುಕೊಂಡರೆ ಶಾಸ್ತ್ರದಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಸಂಬಂಧಿಸಿದಂತೆ ನಿಯಮಗಳು ಭಿನ್ನವಾಗಿವೆ.

ಕೆಲವೊಂದು ದಿನಗಳಲ್ಲಿ ಕೂದಲು ತೊಳೆದ ಮಹಿಳೆಯರಿಗೆ ಸೌಂದರ್ಯದ ಜೊತೆಗೆ ವ್ಯಕ್ತಿತ್ವವೂ ಹೆಚ್ಚುತ್ತದೆ ಹಾಗೂ ಮನೆಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ನೀವು ತಪ್ಪಾದ ದಿನದಲ್ಲಿ ನಿಮ್ಮ ಕೂದಲನ್ನು ತೊಳೆದರೆ, ನಂತರ ಜೀವನದಲ್ಲಿ ನಕಾರಾತ್ಮಕತೆ ಕೂಡ ಹೆಚ್ಚಾಗಬಹುದು. ಹಾಗಾದರೆ ಇಂದು ನಾವು ಮಹಿಳೆಯರು ಯಾವ ದಿನ ತಲೆ ಕೂದಲನ್ನು ತೊಳೆದರೆ ಶುಭ..? ಯಾವ ದಿನ ಅಶುಭ ಎಂಬುದನ್ನು ನೋಡೋಣ.

ಸೋಮವಾರ–ಹಿಂದೂ ಧರ್ಮದಲ್ಲಿ ವಾರದ ಮೊದಲ ದಿನವಾದ ಸೋಮವಾರವನ್ನು ಭಗವಾನ್‌ ಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ತಲೆ ಕೂದಲನ್ನು ತೊಳೆಯಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಂದು ವೇಳೆ ವಿವಾಹಿತ ಮಹಿಳೆಯರು ಸೋಮವಾರದಂದು ತಮ್ಮ ತಲೆ ಕೂದಲನ್ನು ತೊಳೆದರೆ ಅದು ಅವರ ಕುಟುಂಬದ ಪ್ರಗತಿಗೆ ಮಾರಕವಾಗಿರುತ್ತದೆ. ಆದ್ದರಿಂದ ಈ ದಿನ ವಿವಾಹಿತ ಮಹಿಳೆಯರು ಈ ದಿನ ತಮ್ಮ ತಲೆ ಕೂದಲನ್ನು ತೊಳೆಯಬಾರದು.

ಮಂಗಳವಾರ-ವಿವಾಹಿತ ಮಹಿಳೆಯರು ಕೇವಲ ಸೋಮವಾರ ಮಾತ್ರವಲ್ಲ, ಮಂಗಳವಾರ ಕೂಡ ತಮ್ಮ ತಲೆಯನ್ನು ತೊಳೆಯಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಿವಾಹಿತ ಮಹಿಳೆಯರು ಮಂಗಳವಾರದಂದು ತಮ್ಮ ತಲೆ ಕೂದಲನ್ನು ತೊಳೆಯುವುದರಿಂದ ಮನೆಯಲ್ಲಿ ನಕರಾತ್ಮಕತೆಯು ಹೆಚ್ಚಾಗುವಂತೆ ಮಾಡುತ್ತದೆ. ವಿವಾಹಿತ ಮಹಿಳೆಯರು ಮಾತ್ರವಲ್ಲ, ಅವಿವಾಹಿತ ಹುಡುಗಿಯರೂ ಸಹ ಈ ದಿನ ತಮ್ಮ ತಲೆ ಕೂದಲನ್ನು ತೊಳೆಯಬಾರದು.

ಬುಧವಾರ–ವಾರದ ಮೂರನೇ ದಿನವಾದ ಬುಧವಾರದಂದು ಅದು ಅವಿವಾಹಿತ ಹುಡುಗಿಯರಾದರೂ ಸರಿ, ವಿವಾಹಿತ ಮಹಿಳೆಯರಾದರೂ ಸರಿ ಅವರು ತಮ್ಮ ತಲೆ ಕೂದಲನ್ನು ಈ ದಿನ ತೊಳೆಯಬಹುದು. ಈ ದಿನದಂದು ಕೂದಲನ್ನು ತೊಳೆಯುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ವ್ಯವಹಾರದಲ್ಲಿ ಲಾಭವೂ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.

ಗುರುವಾರ–ಗುರುವಾರದ ದಿನದಂದು ಮನೆಯ ಮಹಿಳೆಯರು ಅಥವಾ ಹೆಣ್ಣು ಮಕ್ಕಳು ತಮ್ಮ ತಲೆ ಕೂದಲನ್ನು ತೊಳೆಯಬಾರದು ಎನ್ನುವ ನಂಬಿಕೆಯಿದೆ. ಗುರುವಾರದಂದು ಮಹಿಳೆಯರು ತಲೆಯನ್ನು ತೊಳೆಯುವುದರಿಂದ ಆಯಸ್ಸು ಕಡಿಮೆಯಾಗುವುದರೊಂದಿಗೆ ಆರ್ಥಿಕ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇದರಿಂದ ನೀವು ಹಣದ ನಷ್ಟವನ್ನು ಎದುರಿಸುವ ಸಾಧ್ಯತೆಯೂ ಇದೆ.

ಶುಕ್ರವಾರ–ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದಂದು ಕೂದಲು ತೊಳೆಯುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ಲಕ್ಷ್ಮಿ ದೇವಿಯ ಮತ್ತು ಶುಕ್ರ ದೇವನ ಆಶೀರ್ವಾದವು ಮನೆಯಲ್ಲಿ ಉಳಿಯುತ್ತದೆ. ಆರ್ಥಿಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇಂದು ನೀವು ದೈಹಿಕ ಸ್ವಚ್ಛತೆಯನ್ನು ಮಾಡಿಕೊಳ್ಳುವುದರೊಂದಿಗೆ ಮನೆಯನ್ನು ಮತ್ತು ಪೂಜೆ ಕೋಣೆಯನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಶನಿವಾರ–ಶನಿವಾರದಂದು ಮನೆಯ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಕೂದಲು ತೊಳೆಯುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾರೂ ಕೂಡ ಕೂದಲು ತೊಳೆಯಬಾರದು. ಶನಿವಾರದಂದು ಕೂದಲು ತೊಳೆಯುವುದರಿಂದ ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ಈ ದಿನ ತಲೆ ಕೂದಲನ್ನು ತೊಳೆಯದೇ ಇರುವುದು ಉತ್ತಮ.

ಭಾನುವಾರ–ಭಾನುವಾರ ಕೂದಲು ತೊಳೆಯುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ವಿವಾಹಿತ ಮಹಿಳೆಯರು ಈ ದಿನ ತಮ್ಮ ಕೂದಲನ್ನು ತೊಳೆಯಬಾರದು. ಈ ದಿನ ಕನ್ಯೆಯರು ಅಂದರೆ, ಅವಿವಾಹಿತ ಹುಡುಗಿಯರು ಮತ್ತು ಪುರುಷರು ತಮ್ಮ ಕೂದಲನ್ನು ಈ ದಿನ ತೊಳೆಯಬಹುದು. ಈ ದಿನ ತಲೆ ಕೂದಲನ್ನು ತೊಳೆಯುವುದರಿಂದ ನಾವು ಯಾವುದೇ ರೀತಿಯ ಋಣಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವುದಿಲ್ಲ.

Leave a Comment