ಈಗಿನ ಜೀವನ ಶೈಲಿಯಲ್ಲಿ ನಿದ್ರಾಹೀನತೆ ಎನ್ನುವುದು ಕಾಮನ್ ಆಗಿದೆ. ಹಾಗಾಗಿ ಬೆಡ್ ರೂಮ್ ನಲ್ಲಿ ಈ ಎಲ್ಲಾ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನಿದ್ರಾ ಹೀನತೆ ಶುರು ಆಗುವುದೇ ಮಲಗುವ ಕೋಣೆಯಲ್ಲಿ. ಹಾಗಾಗಿ ಇದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮೊದಲು ಬೆಡ್ ರೂಮ್ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾವುದೇ ರೀತಿಯ ದೂಳು ಕೂಡ ಇರಬಾರದು.ನಮ್ಮ ಮನಸ್ಸಿಗೆ ಖುಷಿ ಕೊಡುವ ರೀತಿ ಬೆಡ್ ರೂಮ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು.
ಇನ್ನು ಜಾಗ ಕಡಿಮೆ ಇದೆ ಎಂದು ಪ್ರತಿಯೊಂದು ವಸ್ತುಗಳನ್ನು ಕೂಡ ಮಂಚದ ಕೆಳಗೆ ಇಡುತ್ತಾರೆ.ಇದರಿಂದ ದೂಳು ಕೂಡ ಆಗುತ್ತದೆ ಮತ್ತು ಮನಸ್ಸಿಗೂ ಕೂಡ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಈ ರೀತಿ ಇದ್ದಾಗ ನೆಗೆಟಿವ್ ಎನರ್ಜಿ ಹೆಚ್ಚಾಗಿ ನಿದ್ರೆಗೆ ಕೂಡ ತೊಂದರೆ ಆಗುತ್ತಿರುತ್ತದೇ. ನಿದ್ರೇಗೂ ತೊಂದರೆ ಆದಾಗ ಕುಟುಂಬದಲ್ಲಿ ಒಂದು ಸಮಸ್ಸೆಗಳು ಉಂಟಾಗುತ್ತದೆ. ಹಾಗಾಗಿ ಮಂಚದ ಕೆಳಗೆ ಇರುವ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ.
ಇನ್ನು ಕೆಲವರು ಬೆಡ್ ರೂಮ್ ನಲ್ಲಿ ಫ್ರಿಡ್ಜ್ ಅನ್ನು ಇಡುತ್ತಾರೆ ಹಾಗು ಗ್ಯಾಸ್ ಸಿಲೆಂಡರ್ ಅನ್ನು ಕೂಡ ಇಡುತ್ತಾರೆ. ಇದರಿಂದ ಹೆಚ್ಚಾಗಿ ಮಾನಸಿಕ ಒತ್ತಡ ಕೂಡ ಕಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮಂಚ ವುಡ್ ಇಂದ ಮಾಡಿರಬೇಕು. ಯಾವುದೇ ಕಾರಣಕ್ಕೂ ಕಬ್ಬಿಣದ ಮಂಚದ ಕೆಳಗೆ ಮಲಗುವುದಕ್ಕೆ ಹೋಗಬೇಡಿ.
ಇನ್ನು ಕೆಲವರು ಪ್ಲಾಂಟ್ಸ್ ಅನ್ನು ಇಟ್ಟುಕೊಂಡಿರುತ್ತಾರೆ. ಇನ್ನು ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು ಹಾಗು ಮನಿ ಪ್ಲಾಂಟ್ ಅನ್ನು ಇಟ್ಟುಕೊಳ್ಳಿ. ಆದಷ್ಟು ಮುಳ್ಳಿನ ಪ್ಲಾಂಟ್ ಅನ್ನು ಇಡಬೇಡಿ.
ಇನ್ನು ಕೆಲವರಿಗೆ ಚಪ್ಪಲಿ ಹಾಕಿಕೊಂಡು ಓಡಾಡುವ ಪದ್ಧತಿ ಇರುತ್ತೆ. ಇನ್ನು ಮಂಚದ ಕೆಳಗೆ ಚಪ್ಪಲಿ ಬಿಡುವುದನ್ನು ಅವಾಯ್ಡ್ ಮಾಡಿ. ಈ ರೀತಿ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಯಲ್ಲಿ ಕೆಟ್ಟ ಕನಸುಗಳು ಕೂಡ ಹೆಚ್ಚಾಗುತ್ತದೆ.
ಇನ್ನು ಮಲಗುವ ಮುನ್ನ ದೇವರಿಗೆ ನಮಸ್ಕಾರ ಮಾಡಿಕೊಂಡು ದೇವರ ಹತ್ತಿರ ಇವತ್ತು ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡು ಆದಷ್ಟು ಆಂಜನೇಯ ಸ್ವಾಮಿಯ ಸೂತ್ರವನ್ನು ಹೇಳಿ ಮಲಗಿಕೊಳ್ಳಿ.ಈ ರೀತಿ ಮಾಡಿದರೆ ಯಾವುದೇ ರೀತಿಯ ಕೆಟ್ಟ ಕನಸುಗಳು ಸಹ ಬೀಳುವುದಿಲ್ಲ.
ಒಂದು ಮನೆಯಲ್ಲಿ ವಸ್ತುಗಳು ಬಿರುಕು ಬಿಟ್ಟಿದ್ದರೆ ಕೆಟ್ಟು ಹೋಗಿದ್ದಾರೆ ಮೊದಲು ಅದನ್ನು ಸರಿ ಮಾಡಿಕೊಳ್ಳಿ. ಮನುಷ್ಯರಿಗೆ 7:00 ರಿಂದ 8:00 ಗಂಟೆಗಳ ಕಾಲ ನಿದ್ದೆ ಮಾಡಬೇಕು.ನಿದ್ದೆ ಸರಿಯಾಗಿ ಆಗದೆ ಇದ್ದರೆ ಕಿರಿ ಕಿರಿ ಉಂಟಾಗುತ್ತದೆ. ಆದಷ್ಟು ಶಾಂತವಾಗಿ ನಿದ್ದೆ ಮಾಡಿ. ಮೊಬೈಲ್, ಲ್ಯಾಪ್ ಟಾಪ್ ಅನ್ನು ಅವಾಯ್ಡ್ ಮಾಡಿ. ಇನ್ನು ಮಲಗುವ ಮುನ್ನ 2 ಗಂಟೆ ಮುಂಚೆ ಊಟ ಮಾಡಿ ಹಾಗು ಮಲಗುವ ಮುನ್ನ ಹಾಲು ಕುಡಿದು ಮಲಗಿಕೊಳ್ಳಿ. ಹಾಲು ಕುಡಿದರೆ ಬೇಗ ನಿದ್ದೆ ಬರುತ್ತದೆ ಮತ್ತು ಚೆನ್ನಾಗಿ ನಿದ್ದೆ ಬರುತ್ತದೆ.
ಇನ್ನು ಮಲಗುವ ದಿಕ್ಕು ಕೂಡ ತುಂಬಾ ಇಂಪಾರ್ಟೆಂಟ್ ಅಗಿದದ್ದು. ಇನ್ನು ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಈ ರೀತಿಯಾಗಿ ಮಲಗಿದರೆ ಕೆಟ್ಟ ಕನಸುಗಳು ಹೆಚ್ಚಾಗಿ ಬೀಳುತ್ತವೆ. ಹಾಗಾಗಿ ದಕ್ಷಿಣ ಮತ್ತು ಪೂರ್ವ ದಿಕ್ಕಿನ ಕಡೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು.