ಗೆಜ್ಜೆವಸ್ತ್ರ ಏಕೆ ಎಷ್ಟು ಯಾವಾಗ & ಏರಿಸುವ ಸರಿಯಾದ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ!
ಗೌರಿ- ಗಣೇಶನ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿತರಾವರಿ ಗೆಜ್ಜೆ ವಸ್ತ್ರಗಳು ಬಂದಿವೆ. ಗೆಜ್ಜೆವಸ್ತ್ರದ ಗಣಪತಿ, ಗೆಜ್ಜೆವಸ್ತ್ರ ಮಂಟಪ, ಗೆಜ್ಜೆವಸ್ತ್ರ ಮಂದಾಸನಗಳು ಮಾರುಕಟ್ಟೆಗೆ ಬಂದಿರುವುದು ಹಬ್ಬದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಹಾಗೂ ಗಣಪನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳು ಇದುವರೆಗೆ ಕಳೆಕಟ್ಟುತ್ತಿದ್ದವು. ಆದರೆ ಈ ಬಾರಿ ಗೆಜ್ಜೆವಸ್ತ್ರವೇ ಅಲಂಕಾರದ ಕಾನ್ಸೆಪ್ಟ್ ಆಗಿ ರೂಪುಗೊಂಡಿರುವುದು ವಿಶೇಷ.
ಮಲ್ಲಿಗೆ, ಗುಲಾಬಿ, ಮಾವಿನ ಎಲೆ ಹೀಗೆ ಹಲವು ಬಗೆಯ ಗೆಜ್ಜೆವಸ್ತ್ರಗಳ ಹಾರ ಮಾರುಕಟ್ಟೆಯಲ್ಲಿಲಭ್ಯವಿದೆ. ಸಾಮಾನ್ಯ ಹದಿನಾರು ಮತ್ತು ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳ ಬೆಲೆ 40 ರಿಂದ 60 ರೂಗಳಷ್ಟಿದ್ದರೆ ವರ್ತರೇಖು ಹಾಗೂ ನೆಕ್ಕಿ ಮತ್ತಿತರ ವಸ್ತುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಅಲಂಕಾರಿಕ ಗೆಜ್ಜೆವಸ್ತ್ರಗಳ ಬೆಲೆ 200 ರೂ.ಗಳನ್ನು ಮೀರುತ್ತದೆ.
16 ಎಳೆಯ ದಾರದ 16 ಗೆಜ್ಜೆ ಇರುವ ಗೆಜ್ಜೆವಸ್ತ್ರವನ್ನು ಗೌರಿ ಪೂಜೆಗೆ ಬಳಸಿಕೊಳ್ಳಲಾಗುತ್ತದೆ. ಹಾಗೆಯೇ 21ಗೆಜ್ಜೆ ಇರುವ 21 ಎಳೆಯ ಗೆಜ್ಜೆ ವಸ್ತ್ರವನ್ನು ಗಣೇಶನ ಪೂಜೆಗೆ ಬಳಸುತ್ತಾರೆ. ವಿಷ್ಣುವಿನ ಪೂಜೆಗೆ 24 ಎಳೆಯನ್ನು ಬಳಸುತ್ತಾರೆ.
ದೇವಿಪೂಜೆಗೆ ಅರಿಶಿನ ಹಚ್ಚಿದ ಗೆಜ್ಜೆವಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ. ಗುಲಾಬಿ ಬಣ್ಣ ಅಥವಾ ಸಿಂಧೂರ (ಕೇಸರಿ) ಬಣ್ಣದವುಗಳೂ ಬಳಕೆಯಲ್ಲಿವೆ. ಮಿನುಗುವ ಕಾಗದಗಳನ್ನು ಬಳಸಿ ಗೆಜ್ಜೆ ವಸ್ತ್ರಗಳನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿರುತ್ತಾರೆ. ಅವುಗಳು ಅಲಂಕಾರಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಅವುಗಳನ್ನು ಕೂಡಾ ಬಳಸಿಕೊಳ್ಳಬಹುದು.
ಮಾಮೂಲಿ ಪೂಜೆಯಲ್ಲಿಸಾಮಾನ್ಯವಾಗಿ ಎರಡು ಎಳೆಯ ಗೆಜ್ಜೆ ವಸ್ತ್ರವನ್ನು ಬಳಸಿಕೊಳ್ಳುತ್ತೇವೆ. ಪುರುಷ ದೇವರಿಗೆ ಅರಿಶಿನ ಹಾಗೂ ದೇವಿಯರಿಗೆ ಕುಂಕುಮದ ಗೆಜ್ಜೆ ವಸ್ತ್ರವನ್ನು ಬಳಸಲಾಗುತ್ತದೆ.