ಸಾಡೆ ಸಾಥ್ ಶನಿ ಶುರುವಾಗುವ ಮೊದಲು ಸಿಗುತ್ತೆ ಈ ಸೂಚನೆ!

ಶನಿ ವಕ್ರದೃಷ್ಟಿ ಬೀರಿದರೆ ಕಥೆ ಮುಗಿದಂತೆ. ಗೌರವ ಸನ್ಮಾನ ಹಣ ಪ್ರತಿಷ್ಠೆ ದೈಹಿಕ ಮಾನಸಿಕ ಆರೋಗ್ಯ ಸೇರಿದಂತೆ ಪ್ರತಿಯೊಂದರಲ್ಲೂ ಹಾನಿ ಅನುಭವಿಸಬೇಕಾಗುತ್ತದೆ. ಸಾಡೇ ಸಾಥ್ ಶನಿ ಶುರುವಾಗಿದೆ ಎಂಬುದರ ಸಂಕೇತ ಮೊದಲೇ ಸಿಗುತ್ತದೆ.

ಶನಿಯ ಕೋಪದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ ಆದರೆ ಪೂಜೆ ಆರಾಧನೆ ಮಾಡಿ ಕೋಪವನ್ನು ಕಡಿಮೆ ಮಾಡಬಹುದು. ಆಸ್ತಿ ವಿವಾದ ಇದ್ದಕ್ಕಿದ್ದಂತೆ ಶುರುವಾಗಿದ್ರೆ ಶನಿಯ ವಕ್ರ ದೃಷ್ಟಿ ಬೀರುತ್ತಿದ್ದಾನೆ ಎಂಬರ್ಥ ಅನೈತಿಕ ಸಂಬಂಧ ಶುರುವಾಗಿ ನೀವು ಅದರಲ್ಲಿ ಸಿಕ್ಕಿ ಬಿದ್ದರೆ ಇದು ಕೂಡ ಸಾಡೆ ಸಾಥ್ ಶನಿ ಶುರುವಾಗಲಿದೆ ಎಂಬುದರ ಸಂಕೇತವಾಗಿದೆ.

ಸಾಲ ಪಡೆಯುವ ಅನಿವಾರ್ಯತೆ ಎದುರಾಗಿ ಸಾಲ ಹೆಚ್ಚಾಗುತ್ತಾ ಹೋದರೆ . ನೌಕರಿಯಲ್ಲಿ ಕಿರಿಕಿರಿ ಶುರುವಾದಲ್ಲಿ . ಅಚಾನಕ್ ಬೇರೆ ಜಾಗಕ್ಕೆ ವರ್ಗಾವಣೆ ಆದ್ರೆ. ಶ್ರಮ ಪರಿಶ್ರಮದ ಮಧ್ಯೆಯು ಬಡ್ತಿ ಸಿಗದೆ ಹೋದಲ್ಲಿ . ಮದ್ಯಪಾನ. ಕೆಟ್ಟ ವ್ಯಸನ. ಸುಳ್ಳು ಹೇಳಲು ಶುರು ಮಾಡಿದ್ದಾರೆ ಇದು ಶನಿಯ ಕೋಪದ ಸಂಕೇತ.ವ್ಯಾಪಾರದಲ್ಲಿ ಇಳಿಕೆ ಕಂಡು ಬಂದರೆ . ಸಣ್ಣ ಸಣ್ಣ ದುರ್ಘಟನೆಗಳು ಪದೇ ಪದೇ ಆಗುತ್ತಿದ್ದರೆ ಇದು ಕೂಡ ಸಾಡೇಸಾಥ್ ಶನಿ ವಕ್ಕರಿಸಲಿದ್ದಾನೆ ಎಂಬುದರ ಸಂಕೇತವಾಗಿದೆ

Leave A Reply

Your email address will not be published.