ಮನೆಯ ಮುಖ್ಯ ದ್ವಾರದಲ್ಲಿ ಇರಬೇಕಾದ ಮುಖ್ಯವಾದ ಮಂಗಳಕರವಾದ ವಸ್ತುಗಳು!

ಮನೆಗೆ ಮಂಗಳಕರವನ್ನ ತರುವ ಮತ್ತು ಆ ಮನೆಗೆ ಯಾವ ಕೆಟ್ಟ ದೃಷ್ಟಿ ಮತ್ತು ದುಷ್ಟ ಶಕ್ತಿ ಪರಿಣಾಮಗಳು ಬರದೇ ಇರೋದಕ್ಕೆ ಕೆಲವೊಂದು ಮುಖ್ಯ ವಸ್ತುಗಳ ಬಗ್ಗೆ ತಿಳಿಯೋಣ….

ಮುಖ್ಯದ್ವಾರ ಅಥವಾ ಮೇನ್ ಡೋರ್ ನಲ್ಲಿ ಹೊಸ್ತುಲಿಗೆ ಅರಿಶಿಣ ಬಳೆದು ಕುಂಕುಮ ಇಡೋದು ತುಂಬಾ ವಿಶೇಷ ಇದು ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿಯು ಒಳ್ಳೆಯದು..

ಹೊಸ್ತಿಲ ಬಳಿ ಆ ಕಡೆ ಈ ಕಡೆ ಅರಿಶಿನ ಕುಂಕುಮ ಹಚ್ಚಿದ ನಿಂಬೆ ಹಣ್ಣನ್ನ ಇಡೋದು ಇದು ಕನಿಷ್ಠ ವಾರಕ್ಕೆ ಒಂದು ಸಲ ಅಂದ್ರೆ ಶುಕ್ರವಾರ ಮಾಡಿದ್ರೆ ತುಂಬಾ ಒಳ್ಳೆಯದು.

ಮಾವಿನ ತೋರಣ ವಾರಕ್ಕೆ ಒಂದು ದಿನ ಅಥವಾ 15 ದಿನಗಳಿಗೊಮ್ಮೆ ಒಮ್ಮೆ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟೋದು ಮನೆಗೆ ತುಂಬಾ ಮಂಗಳಕರವನ್ನ ತರುತ್ತೆ. ಆ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತೆ.

ಮೇನ್ ಡೋರ್ ಹತ್ತಿರ ಓಂ ಅಥವಾ ಸ್ವಸ್ತಿಕ್ ಚಿತ್ರವನ್ನು ಹಾಕೋದು ಅಥವಾ ಬರಿಯೋದು ಹಾಗೆ ತ್ರಿಶೂಲ ಅಥವಾ ತೇಲಾ ಆಯುಧವನ್ನು ಮೇನ್ ಡೋರ್ ಹತ್ತಿರ ಹಾಕಬಹುದು.

ಕುದುರೆ ಲಾಳವನ್ನು . ಹೊಸದಾಗಿ ತಂದು ಹಾಕೋದ್ರಲ್ಲಿ ಏನು ಪ್ರಯೋಜನ ಇರೋದಿಲ್ಲ ಕುದುರೆಗಳಿಗೆ ಬಳಸಿ ತೆಗೆದಿರೋ ಅಂತ ಲಾಳವನ್ನು ಮೇನ್ ಡೋರ್ ಹತ್ತಿರ ಹಾಕೋದು ತುಂಬಾ ಒಳ್ಳೆಯ ಫಲವನ್ನು ಕೊಡುತ್ತೆ.

ಕಣ್ಣು ದೃಷ್ಟಿ ಗಣಪತಿಯ ಫೋಟೋ

ಆಕಾಶ ಗರುಡ ಗಡ್ಡೆಯನ್ನು ಮನೆಯ ಮುಂದುಗಡೆ ಮೇಲೆ ಕಟ್ಟೋದು ತುಂಬಾ ಒಳ್ಳೆಯದು.

ಮೇನ್ ಡೋರ್ ಹತ್ತಿರ ಆನೆಯ ಶಿಲೆಗಳನ್ನು ಇಡೋದು ಅಂದ್ರೆ ಮಣ್ಣಿನ ಶಿಲೆ ಅಥವಾ ಮರದಿಂದ ಮಾಡಿದಂತಹ ಆನೆಯ ಶಿಲೆಗಳು ಹಾಗೆ ಈ ಹಿಂದೆ ಪ್ರತ್ಯೇಕವಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಗಜ ನೇತ್ರದ ಫೋಟೋ ಅಂದ್ರೆ ಆನೆಯ ಒಂದು ಕಣ್ಣಿನ ಫೋಟೋವನ್ನು ಹಾಕೋದು.

ಮೇನ್ ಡೋರ್ ಹತ್ತಿರ ನವಿಲಿನ ಫೋಟೋಗಳನ್ನು ಹಾಕೋದು ಅಥವಾ ನವಿಲು ಚಿತ್ರ ಇರುವಂತ ಬಾಗಿಲನ್ನ ಇಡೋದು .. ಇದೆಲ್ಲಾ ಮನೆಗೆ ತುಂಬಾ ಒಳ್ಳೆಯ ಫಲಗಳನ್ನು ಕೊಡುತ್ತೆ

Leave a Comment