ಮನೆ ಅಂದೆ ಮೇಲೆ ಪ್ರತಿದಿನ ದಿನಕ್ಕೆ ಒಂದು ಸಲ ಆದ್ರೂ ದೇವರ ಮನೆಯಲ್ಲಿ ದೀಪ ಹಚ್ಚಿ ದೇವರಿಗೆ ಕೈಮುಗುದ್ರೇನೇ ಆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಸಂತೋಷ ಯಾವಾಗ್ಲೂ ನೆಲೆಸಿರುತ್ತದೆ.
ಕೆಲವರಿಗೆ ಬೆಳಗ್ಗೆ ಪೂಜೆ ಮಾಡಕ್ಕಾಗಲ್ಲ ಅನ್ನೋರು ಸಂಜೆ ಮಾಡ್ಬಹುದು ಅಥವಾ ಸಂಜೆ ಸಮಯ ಇರಲ್ಲ ಅನ್ನೋವ್ರು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಮಾಡಿದ್ರೆ ತುಂಬಾನೇ ಒಳ್ಳೇದು.
ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡದಕ್ಕಾಗಲ್ಲ ಅನ್ನೋರು ನೀವು ಶುದ್ಧವಾಗಿದ್ದರೆ ಕೈ ಕಾಲ್ ಮುಖ ತೊಳೆದು ಅಡುಗೆ ಮನೆಯಲ್ಲಿ ಒಂದು ದೀಪ . ಬಾಗಿಲ ಹತ್ತಿರ ಅಂದ್ರೆ . ಮೇನ್ ಡೋರ್ ಹತ್ರ ಹೊಸ್ತಿಲಿನ ಬಳಿ ಒಂದು ದೀಪ ಮತ್ತು ತುಳಸಿ ಗಿಡದ ಹತ್ತಿರ ಒಂದು ದೀಪ ಅಚ್ಚಿದ್ರೆ ಸಾಕು .ಮಧ್ಯಾಹ್ನದ ಮೇಲೆ ಅಥವಾ ಸಂಜೆ ನಿಮಗೆ ಸಮಯ ಇರುತ್ತೆ ಅಂದಾಗ ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬಹುದು .
ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಪೂಜೆ ಮಾಡೋದು ತುಂಬಾ ವಿಶೇಷ ಆದ್ದರಿಂದ ದೇವರ ಮನೆಯಲ್ಲಿ ದೀಪ ಹಚ್ಚುವುದರಿಂದ . ಆ ಸಮಯಕ್ಕೆ ಬೆಳಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಿ ಮನೆಯಲ್ಲ ಸ್ವಚ್ಛ ಮಾಡಿ. ದೀಪ ಹಚ್ಚಿ ಪೂಜೆ ಮಾಡೋದಿಕ್ಕಾಗಲ್ಲ. ಬೇರೆ ಕೆಲಸ ಇರುತ್ತೆ ಅಥವಾ ಬೇರೆ ಒತ್ತಡ ಇರುತ್ತೆ ಅನ್ನೋರು ಈ ರೀತಿ ಅಡುಗೆ ಮನೆಯಲ್ಲಿ ಹೊಸ್ದಲಿನ ಬಳಿ ಮತ್ತು ತುಳಸಿ ಗಿಡದ ಹತ್ರ ದೀಪ ಹಚ್ಚಿ ಸಂಜೆ ನೀವು ತಲೆ ಸ್ನಾನ ಮಾಡಿ ದಾರಳವಾಗಿ ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬಹುದು.
ಪ್ರತಿದಿನ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ದೇವರ ಮನೆಯಲ್ಲಿ ದೀಪ ಅಚ್ಚದಿದ್ದರೂ ಪರವಾಗಿಲ್ಲ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ತಾಯಿಯನ್ನ ನೆನೆದು ಮತ್ತು ಮೇನ್ ಡೋರ್ ಮುಖ್ಯದ್ವಾರದ ಹೊಸ್ತಿಲಿನ ಬಳಿ ನಿಮ್ಮ ಮನೆ ದೇವರನ್ನು ಮತ್ತು ಇಷ್ಟ ದೇವರನ್ನು ನೆನೆದು ಅಲ್ಲಿ ಒಂದು ದೀಪ ತುಳಸಿ ಗಿಡದ ಬಳಿ ಯತ್ರ ಒಂದು ದೀಪ ಮಹಾಲಕ್ಷ್ಮಿ ಮತ್ತು ಮಹ ವಿಷ್ಣುನೆನೆದು ನೆನೆದು ಒಂದು ದೀಪವನ್ನು ಹಚ್ಚಿ ತುಂಬಾ ಒಳ್ಳೆಯ ಬದಲಾವಣೆಗಳು ನಿಮ್ಮ ಮನೆಯಲ್ಲಿ ನಡೆಯುತ್ತದೆ.. ಮನೆಗೂ ಸುಖ ಶಾಂತಿ ನೆಮ್ಮದಿ ಸಂತೋಷ ಯಾವಾಗಲೂ ನೆಲೆಸಿರುತ್ತದೆ..