Red Hibiscus :ಕೆಂಪು ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಲಾಭಗಳು ಪಡೆ!

0 56

Red Hibiscus :ಈ ಸ್ಪೆಷಲ್ ಹೆಲ್ತಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆರೋಗ್ಯಕ್ಕೆ ಲಾಭವೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಬೇಕಾಗಿರುವ ಸಾಮಗ್ರಿ

  • ದಾಸಾವಾಳದ ಹೂ 20-25
  • ನೀರು 1/4 ಲೀಟರ್
  • ನಿಂಬೆ ಹಣ್ಣು 5-6
  • ಸಕ್ಕರೆ 250ಗ್ರಾಂ

ಮಾಡುವ ವಿಧಾನ..–ಮೊದಲು 1/4 ಲೀಟರ್ ನೀರನ್ನು ಕುದಿಯಲು ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲೆ. ಆ ಬಳಿಕ ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಗ್ಯಾಸ್ ಆಫ್ ಮಾಡಿ, ಅದಕ್ಕೆ ದಾಸವಾಳದ ಹೂಗಳ ಎಸಳನ್ನು ಹಾಕಿ(ದಾಸಾವಾಳದ ಹೂ ಹಾಕಿದ ಮೇಲೆ ನೀರನ್ನು ಕುದಿಸಬೇಡಿ), ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದಕ್ಕೆ ನಿಂಬೆ ರಸ ಸೇರಿಸಿ ಕಲಿಸಿ. ಈ ಮಿಶ್ರಣ 2 ತಿಂಗಳವರೆಗೆ ಚೆನ್ನಾಗಿರುತ್ತದೆ. ಬೇಕಾದಾಗ ಅರ್ಧ ಲೋಟ ಜ್ಯೂಸ್‍ಗೆ ಅರ್ಧ ಲೋಟ ನೀರು ಬಳಸಿ ಮಿಕ್ಸ್ ಮಾಡಿ ಕುಡಿಯಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು–ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ದಾಸವಾಳ ಜ್ಯೂಸ್ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ. ಬೊಜ್ಜು ನಿವಾರಕ ಗುಣ ಕೂಡ ಹೊಂದಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

ಕೆಮ್ಮು -ಶೀತ ನಿವಾರಿಸುತ್ತೆ–ಅಲರ್ಜಿ ಸಮಸ್ಯೆ ಇರುವವರಿಗೆ ಬೇಸಿಗೆಯಲ್ಲಿ ಕೆಮ್ಮು-ಶೀತ ಆಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿವಾರಿಸುವ ಸಾಮಾಥ್ರ್ಯ ದಾಸವಾಳ ಜ್ಯೂಸ್‍ನಲ್ಲಿದೆ. ಈ ಜ್ಯೂಸ್‍ನಲ್ಲಿ ದಾಸವಾಳ ಹೂ ಹಾಗೂ ನಿಂಬೆರಸ ಇರುವುದರಿಂದ ದೇಹಕ್ಕೆ ವಿಟಮಿನ್ ಸಿ ಅಂಶ ಹೆಚ್ಚು ದೊರೆಯುತ್ತದೆ. ಹೀಗಾಗಿ ಇದನ್ನು ಕುಡಿದರೆ ಕೆಮ್ಮು-ಶೀತ ಕಡಿಮೆ ಆಗುತ್ತದೆ.

ಬಿಪಿ ಕಡಿಮೆ ಮಾಡುತ್ತದೆ—ಅಧಿಕ ರಕ್ತದೊತ್ತಡ ಇರುವವರು ದಾಸವಾಳ ಜ್ಯೂಸ್ ಕುಡಿದರೆ ಒಳ್ಳೆದು. ಇದು ಬಿಪಿ ಹಾಗೂ ಸಂಧಿವಾತ ನೋವು ಕಡಿಮೆಯಾಗುತ್ತದೆ. ದಾಸವಾಳ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಶೂನ್ಯವಾಗಿರುವುದರಿಂದ ಬೊಜ್ಜನ್ನು ಕರಗಿಸುತ್ತದೆ, ದೇಹದ ಆರೋಗ್ಯ ಕಾಪಾಡುತ್ತದೆ.

ದೇಹದ ಉಷ್ಣತೆ ಕಡಿಮೆ ಮಾಡುತ್ತದೆ–ಬೇಸಿಗೆಯಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ದಾಸವಾಳ ಜ್ಯೂಸ್ ಸಹಕಾರಿ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳ ಹೂ ಜ್ಯೂಸ್ ಕಣ್ಣುಗಳಿಗೆ ತಂಪು ನೀಡುತ್ತದೆ.

ಕೂದಲಿನ ಆರೋಗ್ಯಕ್ಕೆ ಉತ್ತಮ–ದಾಸವಾಳದ ಹೂ ಹಾಗೂ ಎಲೆ ಕೂದಲನ್ನು ಬಾಹ್ಯವಾಗಿ ಆರೈಕೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಅದರಲ್ಲೂ ದಾಸವಾಳ ಜ್ಯೂಸ್ ಕುಡಿದರೆ ಆಂತರಿಕವಾಗಿ ಕೂಡ ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲಿಗೆ ಅಗ್ಯತವಾದ ವಿಟಮಿನ್‍ಗಳನ್ನು ಈ ಜ್ಯೂಸ್ ಒದಗಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ.

ಮೂತ್ರ ನಾಳದ ಸೋಕು ನಿವಾರಣೆ–ಮೂತ್ರ ನಾಳದ ಸೋಂಕು ನಿವಾರಣೆಗೆ ಈ ಜ್ಯೂಸ್ ತುಂಬಾ ಒಳ್ಳೆಯದು. ದೇಹದ ಉಷ್ಣತೆ ಹೆಚ್ಚಾದರೆ ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಂಡು ಬರುತ್ತದೆ. ಅದನ್ನು ಕಡಿಮೆ ಮಾಡುವಲ್ಲಿ ಎಳನೀರಿನಷ್ಟೇ ಪರಿಣಾಮಕಾರಿಯಾಗಿ ದಾಸವಾಳ ಜ್ಯೂಸ್ ಕೂಡ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಕಾಡುವ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ದಾಸವಾಳ ಜ್ಯೂಸ್ ಉಪಯುಕ್ತವಾಗಿದೆ. ಆದರೆ ಗರ್ಭಣಿಯರು ಹಾಗೂ ಈಗಾಗಲೇ ಅನಾರೋಗ್ಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವ ಮಂದಿ ಈ ಜ್ಯೂಸ್ ಕುಡಿಯಬಾರದು……

Leave A Reply

Your email address will not be published.