ನಿಮ್ಮ ರಾಶಿಯವರಿಗೆ ಯಾವ ನಂಬರ್ ಅದೃಷ್ಟ ತಂದು ಕೊಡುತ್ತೆ ತಿಳಿದುಕೊಳ್ಳಿ!

ಬದುಕಿನಲ್ಲಿ ಯಶಸ್ಸು ಸಿಗಲು ನಮ್ಮ ಸತತ ಪ್ರಯತ್ನದ ಜೊತೆಗೆ ಸ್ವಲ್ಪ ಅದೃಷ್ಟವೂ ಇರಬೇಕು. ಈ ಅದೃಷ್ಟವನ್ನು ಪರೀಕ್ಷಿಸಲು ಜ್ಯೋತಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ನಮಗೆ ಸಹಾಯ ಮಾಡುತ್ತದೆ. ಜ್ಯೋತಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಎರಡೂ ನಮ್ಮ ವ್ಯಕ್ತಿತ್ವ , ವರ್ತನೆ, ಗುಣ ಸ್ವಭಾವ, ಭವಿಷ್ಯವನ್ನು ಹೇಳುತ್ತದೆ.ಈ ಹಿನ್ನೆಲೆ ನಾವಿಂದು 12 ರಾಶಿಚಕ್ರದ ಅದೃಷ್ಟದ ಸಂಖ್ಯೆ ಯಾವುದು, ಈ ಅದೃಷ್ಟ ಸಂಖ್ಯೆಯನ್ನು ಹೇಗೆ ಬಳಸಬೇಕು, ಯಾವೆಲ್ಲಾ ವಿಚಾರದಲ್ಲಿ ಅದೃಷ್ಟ ಸಂಖ್ಯೆ ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯೋಣ:

ಮೇಷ ರಾಶಿ
ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಮೇಷ ರಾಶಿಯ ಅದೃಷ್ಟ ಸಂಖ್ಯೆಗಳು 6, 24 ಮತ್ತು 64. ಆದರೆ ನೆನಪಿರಲಿ ಈ ಅದ‍ಷ್ಟದ ಸಂಖ್ಯೆಯನ್ನು ಮೇಷ ರಾಶಿಯವರು ನಕಾರಾತ್ಮಕ ಉದ್ದೇಶಗಳಿಗೆ ಬಳಸಬಾರದು. ಉದಾಹರಣೆಗೆ, ಜೂಜಿನ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಬದಲಾಗಿ ನಿಮ್ಮ ಪಾಸ್‌ವರ್ಡ್ ಆಗಿ ಬಳಸಬಹುದು ಅಥವಾ ನಿಮ್ಮ ಒಳ್ಳೆಯ ಉದ್ದೇಶಗಳಿಗೆ ನಿಮ್ಮ ಅದೃಷ್ಟ ಪರೀಕ್ಷೆ ನಡೆಯುತ್ತಿದ್ದರೆ ಈ ಸಂಖ್ಯೆಗಳನ್ನು ಬಳಸಿ. ಇದರಿಂದ ನಿಮ್ಮ ಉಳಿತಾಯ ಹೆಚ್ಚಿಸಬಹುದು ಹಾಗೂ ಹಣದ ಲಾಭದ ಸಾಧ್ಯತೆಯೂ ಇದೆ.

ವೃಷಭ ರಾಶಿ
ವೃಷಭ ರಾಶಿಯವರ ಅದೃಷ್ಟ ಸಂಖ್ಯೆಗಳು 6, 11 ಮತ್ತು 17. ನಿಮ್ಮ ದಿನನಿತ್ಯದ ಜೀವನದಲ್ಲಿ ಈ ಸಂಖ್ಯೆಗಳನ್ನು ಹೆಚ್ಚಾಗಿ ನೋಡಿದರೆ ಧನಾತ್ಮಕ ಶಕ್ತಿಯಿಂದ ಆಶೀರ್ವದಿಸಲ್ಪಡುವಿರಿ. ಸಂಖ್ಯಾಶಾಸ್ತ್ರಜ್ಞರ ಪ್ರಕಾರ ಈ ಅದೃಷ್ಟ ಸಂಖ್ಯೆಗಳು ನಿಮ್ಮ ವೃತ್ತಿಪರ ಯಶಸ್ಸಿಗೆ ಸಹಾಯ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಅದೃಷ್ಟ ಸಂಖ್ಯೆಯನ್ನು ಹೇಳುವುದು ತುಂಬಾ ಕಷ್ಟ. ಏಕೆಂದರೆ ಮಿಥುನ ರಾಶಿಯವರು ದೀರ್ಘಕಾಲದವರೆಗೆ ಒಂದೇ ವಿಚಾರ, ಕೆಲಸದಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಸಮಯದೊಂದಿಗೆ ತಮ್ಮ ವ್ಯಕ್ತಿತ್ವವನ್ನು ಮಾರ್ಪಾಡು ಮಾಡುವಂತೆ ಅವರ ಅದೃಷ್ಟ ಸಂಖ್ಯೆಗಳು ಸಹ ಬದಲಾಗುತ್ತವೆ. ಆದರೂ, ಸಂಖ್ಯಾಶಾಸ್ತ್ರದ ಪ್ರಕಾರ ಮಿಥುನ ರಾಶಿಯವರಿಗೆ ಅದೃಷ್ಟದ ಸಂಖ್ಯೆಗಳು 3 ಮತ್ತು 5. ಈ ಸಂಖ್ಯೆಗಳನ್ನು ಒಟ್ಟುಗೂಡಿಸಿ ನಂತರ ಬರುವ ಫಲಿತಾಂಶಗಳೇ ಇವರ ಅದೃಷ್ಟ ಸಂಖ್ಯೆಗಳು. ಅಂದರೆ, 5+3 = 8, 5+5 =10, 3+3+6 ಇತ್ಯಾದಿ.

ಕರ್ಕ ರಾಶಿ
ಕರ್ಕ ರಾಶಿಯವರು ತಮ್ಮ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವವರು, ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 24 ಯಾವುದೇ ಕೆಲಸವನ್ನು ಪ್ರಾರಂಭಿಸಲು ಕರ್ಕ ರಾಶಿಯವರಿಗೆ ತುಂಬಾ ಅದೃಷ್ಟ. 24ರ ಹೊರತಾಗಿ, ಕರ್ಕ ರಾಶಿಯವರ ಅದೃಷ್ಟ ಸಂಖ್ಯೆಗಳು 1 ಮತ್ತು 58. ಈ ಸಂಖ್ಯೆಗಳು ಕರ್ಕ ರಾಶಿಯವರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ. ಅಲ್ಲದೆ, 24 ಯಾವುದೇ ಪ್ರೀತಿಗೆ ಸಂಬಂಧಿತ ವಿಷಯಕ್ಕೆ ಅದೃಷ್ಟ ಸಂಖ್ಯೆ

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅತ್ಯಂತ ಮಂಗಳಕರ ಸಂಖ್ಯೆಗಳು 9, 19 ಮತ್ತು 49. ಈ ಸಂಖ್ಯೆಗಳನ್ನು ಹೊಂದಿರುವ ಮುಹೂರ್ತಗಳಲ್ಲಿ ಯಾವುದೇ ಕೆಲಸವನ್ನು ಮಾಡುವುದರಿಂದ ನಿಮಗೆ ಶುಭವಾಗುತ್ತದೆ ಮತ್ತು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಸಂಖ್ಯೆ ಒಂಬತ್ತು ದೇವತೆಗಳೊಂದಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ಸಿಂಹ ರಾಶಿಯವರು ಸ್ತ್ರೀ ಶಕ್ತಿಯಿಂದ ಕೂಡ ಆಶೀರ್ವದಿಸಲ್ಪಟ್ಟಿದ್ದಾರೆ. ಈ ಶಕ್ತಿಗಳು ಸಿಂಹ ರಾಶಿಯನ್ನು ಸಂವಹನ, ಇಂದ್ರಿಯತೆ ಮತ್ತು ನಮ್ರತೆಯಲ್ಲಿ ಉತ್ತಮಗೊಳಿಸುತ್ತದೆ.

ಕನ್ಯಾ ರಾಶಿ
ಕನ್ಯಾರಾಶಿ ಭೂಮಿಯ ಅಂಶಕ್ಕೆ ಸೇರಿದೆ. ಕನ್ಯಾ ರಾಶಿಯ ಅದೃಷ್ಟ ಸಂಖ್ಯೆಗಳು 0, 14 ಮತ್ತು 49. ಈ ಸಂಖ್ಯೆಗಳ ಪ್ರಕಾರ ನೀವು ಯಾವುದೇ ಕಾರ್ಯವನ್ನು ಪ್ರಾರಂಭಿಸಿದರೆ ಎಲ್ಲಾ ಕೆಲಸವು ಯಶಸ್ವಿಯಾಗುತ್ತದೆ, ಅಲ್ಲದೆ, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮವಾಗಿ ರೂಪಿಸಲು ಸಹಾಯ ಮಾಡುತ್ತದೆ.

ತುಲಾ ರಾಶಿ
ತುಲಾ ರಾಶಿಯವರು ತಾವು ಮಾಡುವ ಎಲ್ಲದರಲ್ಲೂ ಸಮತೋಲನ ಕಂಡುಕೊಳ್ಳಲು ಹಂಬಲಿಸುತ್ತಾರೆ. ಆದ್ದರಿಂದ ಒಂದೇ ಸಂಖ್ಯಾತ್ಮಕ 11, 77, 88, 99, 66 ಹೊಂದಿರುವ ಯಾವುದೇ ಎರಡು ಅಂಕಿಗಳ ಸಂಖ್ಯೆಯು ಅವರಿಗೆ ತುಂಬಾ ಅದೃಷ್ಟ ತರುತ್ತದೆ. ಆದರೂ, ಏಕ-ಅಂಕಿಯ ಸಂಖ್ಯೆಗಳಿಗೆ ಬಂದಾಗ ತುಲಾ ರಾಶಿಯವರಿಗೆ 8 ಮತ್ತು 2 ಮಂಗಳಕರ ಸಂಖ್ಯೆಗಳು. ಈ ಸಂಖ್ಯೆಗಳನ್ನು ಇಟ್ಟುಕೊಂಡು ನೀವು ಏನನ್ನೇ ಮಾಡಿದರೂ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಜೀವನದ ಬಗ್ಗೆ ತುಂಬಾ ಕುತೂಹಲ ಮತ್ತು ಆತಂಕವನ್ನು ಹೊಂದಿರುತ್ತಾರೆ. ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಸಂಖ್ಯೆಗಳು 5, 18 ಮತ್ತು 69. ಈ ಸಮಯದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ನಿಮಗೆ ಒಳ್ಳೆಯದಾಗುವ ಸಾಧ್ಯತೆ ಹೆಚ್ಚು. ಪ್ರಯಾಣದ ಮೊದಲು 18 ಸಂಖ್ಯೆಯನ್ನು ನೋಡುವುದು ವೃಶ್ಚಿಕ ರಾಶಿಯವರಿಗೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ.

ಧನು ರಾಶಿ
ಧನು ರಾಶಿಯವರ ಅದೃಷ್ಟ ಸಂಖ್ಯೆಗಳು 5, 7, 15 ಹಾಗೂ 28. ಧನು ರಾಶಿಯವರು ಯಾರ ಜನ್ಮ ದಿನಾಂಕ 5, 7, 15 ಅಥವಾ 28 ಆಗಿದೆಯೋ ಅಂಥವರೊಂದಿಗೆ ಸಂಬಂಧ ಬೆಸೆದುಕೊಂಡರೆ ನಿಮಗೆ ಸಂಬಂಧದ ವಿಚಾರದಲ್ಲಿ ಅದೃಷ್ಟ ತರುತ್ತದೆ. ಏಕೆಂದರೆ ಧನು ರಾಶಿಯವರಿಗೆ ದೀರ್ಘಾವಧಿಯ ಬಂಧಗಳನ್ನು ರೂಪಿಸುವುದೇ ಕಷ್ಟವಾಗುತ್ತದೆ.

ಮಕರ ರಾಶಿ
ಮಕರ ರಾಶಿಯವರ ಅದೃಷ್ಟ ಸಂಖ್ಯೆಗಳು 3, 5, 14, ಮತ್ತು 95. ಈ ಸಂಖ್ಯೆಗಳು ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ವಿಶೇಷವಾಗಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಈ ಅದೃಷ್ಟ ಸಂಖ್ಯೆಗಳು ನಿಮಗೆ ಹೆಚ್ಚು ಸಹಾಯ ಮಾಡಬಲ್ಲದು. ನೀವು ಯಾವುದೇ ಕೆಲಸದಲ್ಲಿ ಈ ಅದ‍ಷ್ಟ ಸಂಖ್ಯೆಗಳು ಯಾವುದೇ ರೀತಿಯಲ್ಲಾದರೂ ನಿಮ್ಮ ಜೊತೆಗಿದ್ದರೆ ಯಶಸ್ಸು ನಿಮ್ಮದೆ.

ಕುಂಭ ರಾಶಿ
ಕುಂಭ ರಾಶಿಯ ಅದೃಷ್ಟ ಸಂಖ್ಯೆಗಳು 2, 17 , 77 ಮತ್ತು 35. ಕುಂಭ ರಾಶಿಯವರು ತಮ್ಮ ಭಾವನೆಗಳನ್ನು ಮರೆಮಾಡುವುದರಲ್ಲಿ ಎತ್ತಿದ ಕೈ. ಕುಂಭ ರಾಶಿಯ ಐಷಾರಾಮಿ ಬದುಕು ಬೇಕು ಎಂದು ಬುಸಯವರು. ಅದ್ದಕಾಗಿ ಇವರು ತಮ್ಮ ಅದೃಷ್ಟ ಸಂಖ್ಯೆಯು ಜನ್ಮ ದಿನಾಂಕವಾಗಿರುವ ವ್ಯಕ್ತಿಯೊಂದಿಗೆ ಸಂಬಂಧ ಬೆಸೆದರೆ ಶುಭವಾಗುತ್ತೆ.

ಮೀನ ರಾಶಿ
ಮೀನ ರಾಶಿಯವರ ಅದೃಷ್ಟ ಸಂಖ್ಯೆಗಳು 5 ಮತ್ತು 7. ಈ ಸಂಖ್ಯೆಗಳಿಂದ ಆರಿಸಿಕೊಳ್ಳುವ ಮೂಲಕ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಅಲ್ಲದೆ, 15, 36, 21 ಸಂಖ್ಯೆಗಳಿಗೆ ಒಟ್ಟುಗೂಡಿಸುವ ಸಂಖ್ಯೆಗಳು ಮೀನ ರಾಶಿಯವರಿಗೆ ಅದೃಷ್ಟ. ನಕಾರಾತ್ಮಕ ಶಕ್ತಿಗಳ ವಿರುದ್ಧ ಹೋರಾಡಲು ಈ ಸಂಖ್ಯೆಗಳು ನಿಮಗೆ ಸಹಾಯ ಮಾಡುತ್ತವೆ.

Leave A Reply

Your email address will not be published.