ಹೇಗೆ ಬುದ್ಧಿಶಕ್ತಿಯನ್ನು ಹೆಚ್ಚಾಗಿಸೋದು? 

0 222

ಮೆರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.

ಆದರೆ ಕೆಲವರಿಗೆ ವಿಪರೀತ ಮರೆವಿನ ಸಮಸ್ಯೆ ಇರುತ್ತದೆ, ಈ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಕಂಡು ಬರುತ್ತದೆ. ಈ ರೀತಿಯ ಮರೆವಿನ ಸಮಸ್ಯೆ ತುಂಬಾ ಅಪಾಯಕಾರಿಯಾದದ್ದು, ಇದನ್ನು ಅಲ್ಜೈಮರ್ಸ್ ಎಂದು ಕೂಡ ಕರೆಯುತ್ತಾರೆ. ಈ ಸಮಸ್ಯೆ ಕಾಣಿಸಿಕೊಂಡರೆ ವ್ಯಕ್ತಿಗೆ ನಾನು ಯಾರು ಎಂಬುವುದು ಕೂಡ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿ ಮನೆಯಿಂದ ಹೊರಡುವಾಗ ಇಂಥದ್ದೇ ಜಾಗಕ್ಕೆ ಹೋಗಬೇಕೆಂದು ಹೊರಟಿರುತ್ತಾರೆ, ಆದರೆ ಮಾರ್ಗ ಮರ್ಧಯ ತಲುಪಿದಾಗ ನಾನೆಲ್ಲಿಗೆ ಹೋಗುತ್ತಿದ್ದೇನೆ ಎಂದೇ ಗೊತ್ತಾಗುವುದಿಲ್ಲ. ಇನ್ನು ಇಟ್ಟ ವಸ್ತು ನಂತರ ನೆನಪಾಗುವುದಿಲ್ಲ, ಅಷ್ಟೇ ಕೆಲವರು ತಮ್ಮ ಮಕ್ಕಳನ್ನೇ ಗುರುತಿಸುವುದಿಲ್ಲ. ಈ ರೀತಿಯ ಸಮಸ್ಯೆ ಕಾಣಿಸಿದರೆ ಚಿಕಿತ್ಸೆ ಪಡೆಯಬೇಕು.

ಸಾಮಾನ್ಯವಾಗಿ ಕಾಡುವ ಮರೆವಿನ ಸಮಸ್ಯೆ ಹೋಗಲಾಡಿಸಿ, ಬುದ್ಧಿಶಕ್ತಿ ಚುರುಕುಗೊಳಿಸಲು ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿಯಾಗಿವೆ. ಇನ್ನು ಮೆದುಳಿನ ಶಕ್ತಿ ಹೆಚ್ಚಿಸಲು ನಿಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಿ:

ಶಂಖ ಪುಷ್ಪಿ–ಇದೊಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ. ಮನೆಯಲ್ಲಿ ಅಜ್ಜಿಂದಿರು ಇದ್ದರೆ ಈ ಶಂಖಪುಷ್ಠಿಯ ಮಹತ್ವದ ಬಗ್ಗೆ ಹೇಳುವುದನ್ನು ಕೇಳಿರಬಹುದು. ನೆನಪಿನ ಶಕ್ತಿ ಹೆಚ್ಚಿಸಲು ಶಂಖಪುಷ್ಪಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಿದರೆ ಸಾಕು.

ಬ್ರಾಹ್ಮೀ ಎಲೆ ಪುಡಿ—ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಈ ಎಲೆ ತುಂಬಾ ಸಹಕಾರಿ. ದಿನಾ ಒಂದು ಬ್ರಾಹ್ಮೀ ಎಲೆ ಸಾಕು ಬುದ್ಧಿ ಶಕ್ತಿ ಹೆಚ್ಚುವುದು, ಮರೆವಿನ ಕಾಯಿಲೆ ಕಡಿಮೆಯಾಗುವುದು.ಬ್ರಾಹ್ಮೀ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ಕುಡಿದರೆ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ.ಇನ್ನು ಈ ಎಲೆಯನ್ನು ಹಾಲಿನ ಜತೆ ಕುಡಿದರೂ ಒಳ್ಳೆಯದೂ, ಸ್ವಲ್ಪ ಜಾಸ್ತಿ ಎಲೆಯಿದ್ದರೆ ಸಾರಿನಲ್ಲಿಯೂ ಹಾಕಿ ಬಳಸಬಹುದು.

ಬಾದಾಮಿ ಕಲ್ಲು ಸಕ್ಕರೆ ಹಾಲಿನ ಮಿಶ್ರಣ–ಒಂದು ಕಪ್ ಹಾಲು ಕುದಿಸಿ, ಅದಕ್ಕೆ ಬಾದಾಮಿ, ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.

ಎಳ್ಳೆಣ್ಣೆ ಮಸಾಜ್–ಪ್ರತಿದಿನ ತಲೆ ಮತ್ತು ಪಾದಗಳಿಗೆ ಎಳ್ಳೆಣ್ಣೆಯಿಂದ ಮಸಾಜ್‌ ಮಾಡಿ, ಇದರಿಂದ ಮರೆವಿನ ಸಮಸ್ಯೆ ಉಂಟಾಗುದಿಲ್ಲ.

ತುಪ್ಪ–ಕೊಬ್ಬಿನಂಶ ಇದೆಯೆಂದು ತುಪ್ಪವನ್ನು ದೂರವಿಡಬೇಡಿ, ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಚಿಂತೆ ಬಿಡಿ. ದೇಹದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎಂಬ ಎರಡು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್ ಅವಶ್ಯಕ. ತುಪ್ಪ ಒಳ್ಳೆಯ ಕೊಲೆಸ್ಟ್ರಾಲ್ ಆಗಿದೆ. ಆದ್ದರಿಂದ ತುಪ್ಪ ಸೇವಿಸಿ. ತುಪ್ಪ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೋಡಬಹುದು. ಪ್ರತಿದಿನ ಶುದ್ಧ ತುಪ್ಪವನ್ನು ಮಿತಿಯಲ್ಲಿ ಸೇವಿಸಿದರೆ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬಜೆ ನೆನಪಿನ ಶಕ್ತಿಗೆ ಒಳ್ಳೆಯದು–ಚಿಕ್ಕ ಮಕ್ಕಳಿಗೆ ಮನೆಮದ್ದಾಗಿ ಬಜೆ ಕೊಡುವಂತೆ ಅಜ್ಜಿ ಹೇಳುತ್ತಾರೆ. ಬಜೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿ. ಬಜೆಗೆ ನೀರು ಹಾಕಿ ಕಷಾಯ ಮಾಡಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಬಾದಾಮಿ–ಬಾದಾಮಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಇದನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುವುದು, ಇದರಲ್ಲಿರುವ ವಿಟಮಿನ್ ಇ ತ್ವಚೆಯನ್ನು ರಕ್ಷಣೆ ಮಾಡುವುದು. ಇನ್ನು ಪ್ರತಿದಿನ ಸ್ವಲ್ಪ ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ಖಾಲಿ ಹೊಟ್ಟೆಗೆ ತಿಂದರೆ ನೆನಪಿನ ಶಕ್ತಿಗೆ ತುಂಬಾ ಒಳ್ಳೆಯದು.

ಅಶ್ವಗಂಧ–ಅಶ್ವಗಂಧವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದನ್ನು ಪ್ರತಿದಿನ ನಿಯಮಿತವಾಗಿ ಸೇವಿಸಿದರೆ ಮೆದುಳಿನ ನರಗಳು ಬಲವಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.

ಬೂದಗುಂಬಳಕಾಯಿ–ಬೂದುಗುಂಬಳಕಾಯಿ ಸೀಸನ್‌ನಲ್ಲಿ ದೊರೆಯುವುದಾದರೂ ಇದನ್ನು ವರ್ಷ ಪೂರ್ತಿ ಇಡಬಹುದಾಗಿದೆ. ಬೂದುಗುಂಬಳಕಾಯಿ ಬೇಯಿಸಿ ಆ ರಸಕ್ಕೆ ಸ್ವಲ್ಪ ತುಪ್ಪ ಹಾಗೂ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬುದ್ಧಿಶಕ್ತಿ ಹೆಚ್ಚುವುದು, ಮರೆವಿನ ಸಮಸ್ಯೆ ಕಡಿಮೆಯಾಗುವುದು. ಬೂದುಕುಂಬಳಕಾಯಿಯನ್ನು ಹಸಿ ತಿನ್ನಲು ಸಾಧ್ಯವಾದರೆ ತಿಂದರೆ ಒಳ್ಳೆಯದು.

ಗರ್ಭಿಣಿಯರ ನಟ್ಸ್ ತಿನ್ನುವುದು ಒಳ್ಳೆಯದು–ಗರ್ಭಣಿಯಾಗಿದ್ದಾಗ ತಾಯಿ ತಿನ್ನುವ ಆಹಾರ ಮಗುವಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.ಆದ್ದರಿಂದ ಗರ್ಭಿಣಿಯರು ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಮಗುವಿನ ಬುದ್ಧಿ ಶಕ್ತಿ ಹೆಚ್ಚಾಗಲು, ಮಗುವಿಗೆ ನೆನಪಿನ ಶಕ್ತಿ ಹಚ್ಚಲು ನಟ್ಸ್ ಸೇವಿಸಿ.

ಮರೆವು ತಡೆಗಟ್ಟುವ ನೆಲ್ಲಿಕಾಯಿ–ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇನ್ನು ಮರೆವು ತಡೆಗಟ್ಟುವಲ್ಲಿಯೂ ಸಹಕಾರಿ. ದಿನಾ ಮೂರರಿಂದ 4 ಚಮಚದಷ್ಟು ನೆಲ್ಲಿಕಾಯಿ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಊಟದ ನಂತರ ಇದನ್ನು ಸೇವಿಸುತ್ತಾ ಬನ್ನಿ, ಇದರಿಂದ ಮರೆವಿನ ಸಮಸ್ಯೆ ಕಡಿಮೆಯಾಗಿ ನೆನಪಿನ ಶಕ್ತಿ ಹೆಚ್ಚುವುದು.

ಕೇಸರಿ–ಹಾಲಿಗೆ ಕೇಸರಿ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದು ಮೆದುಳಿನ ಜೀವಕೋಶಗಳು ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ಗೋಡಂಬಿ–ದಿನಾ 5-10 ಗೋಡಂಬಿ ತಿನ್ನುವುದು ಮರೆವಿನ ಸಮಸ್ಯೆ ಕಡಿಮೆಯಾಗಿ ಜ್ಞಾಪಕ ಶಕ್ತಿ ಹೆಚ್ಚಲು ಸಹಕಾರಿ.

ಮೂಲಂಗಿ ಹಾಗೂ ಮೆಂತ್ಯ ಸೊಪ್ಪು–ಮೂಲಂಗಿ ಹಾಗೂ ಮೆಂತ್ಯೆ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಮೆಣಸು, ಜೀರಿಗೆ, ಸ್ವಲ್ಪ ಕರಿಬೇವು ,ಇಂಗು ಒಗ್ಗರಣೆ ಹಾಕಿ ಸೇವಿಸಿದರೆ ಬಾಯಿಗೆ ರುಚಿ ನೆನಪಿನ ಶಕ್ತಿಗೆ ತುಂಬಾ ಒಳ್ಳೆಯದು.

ಕೊತ್ತಂಬರಿ ಹಾಗೂ ಜೇನುತುಪ್ಪ–ಊಟದ ನಂತರ ಸ್ವಲ್ಪ ಕೊತ್ತಂಬರಿ ಬೀಜದ ಪುಡಿ ಸ್ವಲ್ಪ ಜೇನುತುಪ್ಪ ಎರಡನ್ನು ಬೆರೆಸಿ ತಿಂದರೆ ಜ್ಞಾಪಕ ಶಕ್ತಿ ಕ್ರಮೇಣವಾಗಿ ಹೆಚ್ಚುತ್ತಾ ಹೋಗುತ್ತದೆ.

ಏಲಕ್ಕಿ–ಹಾಲಿಗೆ ಏಲಕ್ಕಿ ಹಾಕಿ ಕುದಿಸಿ, ಅದಕ್ಕೆ ಜೇನುತುಪ್ಪಬೆರೆಸಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು

ಬಕುಳ ಮರದ ಚಕ್ಕೆ–ಬಕುಳ ಮರದ ಚೆಕ್ಕೆಯಿಂದ ಕಷಾಯ ತಯಾರಿಸಿ ಪ್ರತಿನಿತ್ಯ ಕುಡಿಯುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚಾಗುವುದು.

ಅಲಸಂದೆ–ದಿನಾ ಸ್ವಲ್ಪ ಅಲಸಂದೆ ಕಾಳು ತಿನ್ನುವುದರಿಂದ ಕೂಡ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ.
ಚಕ್ಕೆ ಕೂಡ ಒಳ್ಳೆಯದು

ದಾಲ್ಚಿನ್ನಿಅಥವಾ ಚಕ್ಕೆ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುವುದು, ಇದರ ಮತ್ತೊಂದು ಪ್ರಯೋನವೆಂದರೆ ಮೈ ಬೊಜ್ಜು ಕೂಡ ಕರಗುವುದು.

ಈ ಮದ್ದುಗಳ ಜೊತೆಗೆ ಜೀವನಶೈಲಿಯಲ್ಲಿ ಇವುಗಳನ್ನು ರೂಡಿಸಿಕೊಳ್ಳಿ

  • ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಹಾಗೂ ದಿನದಲ್ಲಿ 8 ಗಂಟೆ ನಿದ್ದೆ ಮಾಡುವುದು ಮಾಡಿ. ಇದರಿಂದ ಆರೋಗ್ಯ ವೃದ್ಧಿಯಾಗುವುದು, ನೆನಪಿನ ಶಕ್ತಿ ಕೂಡ ಹೆಚ್ಚಾಗುವುದು.
  • ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸಿ, ಹಸಿ ಸೊಪ್ಪು, ತರಕಾರಿ ಬಳಸಿ.
  • ದಿನಾ ಒಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಕೂಡ ಮರೆವು ಬರದಂತೆ ತಡೆಯಬಹುದು.
  • ಸೇಬು ಹಣ್ಣನ್ನು ಸೇವಿಸುವಾಗ ಸಿಪ್ಪೆ ಸಹಿತ ತಿನ್ನಿ, ಇದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
  • ವೃಕ್ಷಾಸನ, ಪ್ರಾಣಯಾಮ ಇವೆಲ್ಲಾ ಜ್ಞಾಪಕ ಶಕ್ತಿ, ಏಕಗ್ರತೆ ಹೆಚ್ಚಿಸುವಲ್ಲಿ ಸಹಕಾರಿ.
Leave A Reply

Your email address will not be published.