ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಾತನ್ನು ಮನಸ್ಸಿನಲ್ಲಿ ಅಂದುಕೊಂಡು ದಿನ ಶುರು ಮಾಡಿ ಬದಲಾವಣೆ!

Kannada Health Tips :ನಾವು ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿರುತ್ತದೆ ಅದು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಜೀವನದಲ್ಲಿ ಯಾವಾಗಲೂ ನೋವು ದುಃಖ ಇರುವುದರಿಂದ ಅವರು ಬೆಳಗ್ಗೆ ಎದ್ದ ತಕ್ಷಣ ಕೇವಲ ಕೊರಗುವುದರಿಂದ ತಮ್ಮ ದಿನಚರಿ ಶುರು ಮಾಡುತ್ತಾರೆ.

ಇಡೀ ದಿನ ಹಾಗೆ ಉಳಿಯುತ್ತಾರೆ. ಆದರೆ ಯಾರು ಬೆಳಗ್ಗೆ ಎದ್ದ ತಕ್ಷಣ ಖುಷಿಯಾಗಿ ಸ್ವಲ್ಪ ಹೊತ್ತು ಕಾಲ ಕಳೆಯುತ್ತಾರೆ ಮತ್ತು ತಮ್ಮ ಮನಸ್ಸನ್ನು ತಾವಾಗಿಯೇ ಮುದಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಅಂತಹವರು ಇಡೀ ದಿನ ಖುಷಿಯಾಗಿ ಎಲ್ಲರೊಟ್ಟಿಗೆ ಬೆರೆತು ತಮ್ಮ ದಿನವನ್ನು ಸಂಭ್ರಮಿಸುತ್ತಾರೆ.

ಹಾಗಾದರೆ ಇಡೀ ದಿನ ಖುಷಿಯಾಗಿರಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು? ಕೇವಲ ಬೆಳಗಿನ ಒಂದು ಘಟನೆ ನಮ್ಮ ಇಡೀ ದಿನದ ಜೀವನವನ್ನು ನಿರ್ಧರಿಸುತ್ತದೆ ಎಂದರೆ ನಾವು ನಿಜವಾಗಲೂ ಹೇಗಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಬೆಳಗ್ಗೆ ಎದ್ದ ತಕ್ಷಣ ಇಂಪಾದ ಸಂಗೀತ ಕೇಳಿ
ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬೆಳಗ್ಗೆ ಎದ್ದ ತಕ್ಷಣ ದೇವರ ಶ್ಲೋಕ, ಮಂತ್ರ ಪಠಣೆ, ದೇವರ ಹಾಡುಗಳು, ಸುಮಧುರ ಸಂಗೀತ, ಕಿವಿಗೆ ಇಂಪು ಕೊಡುವ ಭಾವಗೀತೆಗಳು ಮನೆಮನೆಯಲ್ಲಿ ಕೇಳಿಬರುತ್ತವೆ.

ಕೆಲವರ ಮನೆಯಲ್ಲಿ ಎದ್ದ ತಕ್ಷಣ ಬರಿ ಜಗಳ. ಅವರನ್ನು ಪಕ್ಕಕ್ಕಿಟ್ಟರೆ, ಉಳಿದ ಎಲ್ಲರ ಬಾಳು ನಿಜಕ್ಕೂ ಅದ್ಭುತ ಎನಿಸುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಕಿವಿಗೆ ಇಂಪಾದ ಸಂಗೀತ ಕೇಳಿಸುವುದು ಅಥವಾ ಹಕ್ಕಿಗಳ ಚಿಲಿಪಿಲಿ ನಾದ ಆಲಿಸುವುದು ನಿಜಕ್ಕೂ ನಿಮ್ಮನ್ನು ಧನ್ಯ ಎನಿಸುವಂತೆ ಮಾಡುತ್ತದೆ.

ಸಂಗೀತ ಕೇಳುವುದರಲ್ಲಿ ಕೂಡ ನೀವು ಕೇವಲ ಇಂಪಾದ ಗೀತೆಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಉಂಟಾಗುವಂತೆ ಮಾಡುತ್ತದೆ.

ಹತ್ತರಿಂದ ಹದಿನೈದು ನಿಮಿಷಗಳ ಕಾಲ ಧ್ಯಾನ ಮಾಡಿ
ಪ್ರಶಾಂತವಾದ ವಾತಾವರಣದಲ್ಲಿ ನಮ್ಮ ಮೆದುಳಿಗೆ ನೀಡುವ ಒಂದು ವ್ಯಾಯಾಮ ಎಂದರೆ ಅದು ನಾವು ಮಾಡುವ ಧ್ಯಾನ. ಧ್ಯಾನ ಮಾಡಲು ಬೆಳಗ್ಗೆಗಿಂತ ಒಳ್ಳೆಯ ಸಮಯ ಇಲ್ಲ ಎನಿಸುತ್ತದೆ.

ಅಷ್ಟೇ ಅಲ್ಲದೆ ಧ್ಯಾನ ಮಾಡುವುದರಿಂದ ಬುದ್ಧಿಶಕ್ತಿ ಕೂಡ ಹೆಚ್ಚಾಗುತ್ತದೆ. ಚುರುಕುತನ ಮತ್ತು ಹೊಸ ಹುರುಪು ಮೈಗೂಡುತ್ತದೆ. ಇಡೀ ದಿನ ಯಾವುದೇ ಮಾನಸಿಕ ಒತ್ತಡ ಹಾಗೂ ಆತಂಕ ಇಲ್ಲದಂತೆ ಕೆಲಸ ಮಾಡಲು ಇದು ಅನುಕೂಲ ಮಾಡಿಕೊಡುತ್ತದೆ. ಧ್ಯಾನ ನಿಮ್ಮ ಇಡೀ ದಿನದ ಕೆಲಸ ಕಾರ್ಯಗಳನ್ನು ಸುಗಮಗೊಳಿಸುತ್ತದೆ ಎಂದು ಹೇಳಬಹುದು.ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಸಹಕಾರಿ

ಸುಮಾರು 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ–ವ್ಯಾಯಾಮ ಮಾಡುವುದು ಕೇವಲ ದೇಹಕ್ಕೆ ಮಾತ್ರ ಲಾಭ ಎಂದುಕೊಳ್ಳಬೇಡಿ. ವ್ಯಾಯಾಮ ಮನಸ್ಸಿನ ಸದೃಢತೆಯನ್ನು ಹೆಚ್ಚು ಮಾಡುತ್ತದೆ.

ಪರೋಕ್ಷವಾಗಿ ನಿಮ್ಮ ಮೆದುಳಿನ ಮೇಲೆ ಸಕಾರಾತ್ಮಕ ಪ್ರಭಾವವನ್ನು ಉಂಟುಮಾಡುವ ಶಕ್ತಿ ವ್ಯಾಯಾಮಕ್ಕೆ ಇದೆ. ವ್ಯಾಯಾಮ ಮಾಡುವುದರಿಂದ ನಿಮ್ಮ ಮೆದುಳಿನಲ್ಲಿ ಆನಂದಮಯ ಹಾರ್ಮೋನ್ ಎಂದು ಕರೆಸಿಕೊಳ್ಳುವ ಎಂಡಾರ್ಫಿನ್ ಹೆಚ್ಚು ಉತ್ಪತ್ತಿಯಾಗಲು ಪ್ರಾರಂಭ ಮಾಡುತ್ತದೆ.

ಇದು ನಿಮ್ಮ ಯಾವುದೇ ಮಾನಸಿಕ ಖಿನ್ನತೆಯನ್ನು ದೂರ ಮಾಡಿ ಸಂಪೂರ್ಣ ದಿನಚರಿಯನ್ನು ಸಂತೋಷಕರವಾಗಿ ಕಳೆಯುವ ಹಾಗೆ ನಿಮಗೆ ಅನುಕೂಲ ಮಾಡಿಕೊಡುತ್ತದೆ.

ನಿಂಬೆಹಣ್ಣು ಮಿಶ್ರಿತ ಬಿಸಿ ನೀರು ಕುಡಿಯಿರಿ–ಬೆಳಗಿನ ಸಮಯದಲ್ಲಿ ನೀವು ಎದ್ದ ತಕ್ಷಣ ಬೆಡ್ ಕಾಫಿ ಕುಡಿದು ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಒಂದು ಆರೋಗ್ಯವಾದ ಮತ್ತು ನಿಮ್ಮ ದೇಹಕ್ಕೆ ಸಾಕಷ್ಟು ಒಳ್ಳೆಯ ಪ್ರಭಾವವನ್ನು ಉಂಟು ಮಾಡುವ ಉತ್ತಮವಾದ ಪಾನಿಯವನ್ನು ಪ್ರತಿದಿನ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಸಾಧ್ಯವಾದರೆ ಬೆಳಗಿನ ಸಮಯದಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ ಕುಡಿಯಿರಿ. ಈ ಪಾನೀಯ ನಿಮ್ಮ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡುವುದು ಮಾತ್ರವಲ್ಲದೆ, ನಿಮ್ಮ ದೇಹಕ್ಕೆ ಯಾವುದೇ ನಿರ್ಜಲಿಕರಣ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.

ಬೇಕಿದ್ದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಬಿಸಿನೀರಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು. ಇದು ಸಹ ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

ಆರೋಗ್ಯಕರವಾದ ಉಪಹಾರ ಸೇವನೆ ಮಾಡಿ—ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹೊಟ್ಟೆ ಖಾಲಿ ಇರುತ್ತದೆ. ಅಷ್ಟೇ ಅಲ್ಲದೆ ರಾತ್ರಿಯ ಸಮಯದಲ್ಲಿ ಆಹಾರ ಸೇವನೆ ಮಾಡಿ ಅದಾಗಲೇ ಎಂಟು ಗಂಟೆಗಳ ಕಾಲ ಕಳೆದಿರುತ್ತದೆ. ಬೆಳಗಿನ ಸಮಯದಲ್ಲಿ ನೀವು ಸೇವನೆ ಮಾಡುವ ಯಾವುದೇ ಆಹಾರ ಕೂಡ ನಿಮ್ಮ ಇಡೀ ದಿನದ ಕಾರ್ಯ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯಬೇಡಿ.

ಹಾಗಾಗಿ ಬೆಳಗಿನ ಸಮಯದಲ್ಲಿ ನೀವು ಮೊದಲನೇ ಆಹಾರವಾಗಿ ತೆಗೆದುಕೊಳ್ಳುವ ಯಾವುದೇ ಉಪಹಾರ ನಿಮ್ಮ ಆರೋಗ್ಯವನ್ನು ವೃದ್ಧಿಸುವ ಹಾಗಿರಬೇಕು. ಅಷ್ಟೇ ಅಲ್ಲದೆ ನೀವು ಬೆಳಗಿನ ಸಮಯದಲ್ಲಿ ಒಳ್ಳೆಯ ಆಹಾರ ಸೇವನೆ ಮಾಡಿದರೆ, ನಿಮ್ಮ ಮೆದುಳಿನ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.Kannada Health Tips

Leave a Comment