ಇನ್ನು ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಲು ಆಗದಿದ್ದರೆ ಈ ಮಂಗಳಕರ ವಸ್ತುವನ್ನು ಮನೆಗೆ ತನ್ನಿ ಶುಭವಾಗುತ್ತೆ!

ಅಕ್ಷಯ ತೃತೀಯ ಎಂದಕೂಡಲೇ ಚಿನ್ನವನ್ನು ಮತ್ತು ಬೆಳ್ಳಿಯನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಳ್ಳುತ್ತೇವೇ. ಅದರೆ ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ. ಆ ದಿನ ಈ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಬಂದರೆ ತುಂಬಾನೆ ಒಳ್ಳೆಯದು.ಅಕ್ಷಯ ತೃತೀಯ ಏಪ್ರಿಲ್ 22ನೇ ತಾರೀಕು ಶನಿವಾರ ಪ್ರಾರಂಭ ಆಗುತ್ತದೆ.ಅವತ್ತಿನ ಬೆಳಗ್ಗೆ ಎದ್ದು ಮನೆಯನ್ನು ಶುದ್ಧಿ ಮಾಡಿಕೊಂಡು ಮನೆಯಲ್ಲಿ ಪೂಜೆಯನ್ನು ಮಾಡಿಕೊಳ್ಳಿ.

ಮೊದಲು ಎರಡು ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ತುಳಸಿ ಗಿಡದ ಮುಂದೆ ಇಟ್ಟು ಎರಡು ತುಪ್ಪದ ದೀಪವನ್ನು ಹಚ್ಚಿ ತುಳಸಿ ಹತ್ತಿರ ಬೇಡಿಕೊಳ್ಳಿ.ಇನ್ನು ವಿಷ್ಣುವಿಗೆ ತುಳಸಿ ಎಂದರೆ ಪ್ರಿಯವಾದದ್ದು ಹಾಗಾಗಿ ನೀವು ಅಂದಿನಾ ದಿನ ದೀಪ ಹಚ್ಚುವುದು ಅಲ್ಲದೆ ಹೊಸದಾಗಿ ಗಿಡಗಳನ್ನು ತೆಗೆದುಕೊಂಡು ಬಂದು ಹಾಕಿದರೂ ಕೂಡ ನಿಮ್ಮ ಮನೆ ಸಮೃದ್ಧಿ ಆಗುತ್ತದೆ.ಇದನ್ನು ಮುಂಜಾನೆ ಮಾಡಿದರೆ ಒಳ್ಳೆಯದು.

ಇನ್ನು ಅವತ್ತಿನ ದಿನ ದವಸ ಧಾನ್ಯಗಳನ್ನು ತೆಗೆದುಕೊಂಡು ಬನ್ನಿ ಮತ್ತು ಅದರ ಜೊತೆ ಉಪ್ಪನ್ನು ಕೂಡ ತೆಗೆದುಕೊಂಡು ಬನ್ನಿ.ಇನ್ನು ಅಂದಿನ ದಿನ ಲಕ್ಷ್ಮಿ ಕುಬೇರ ವಿಗ್ರಹವನ್ನು ಕೂಡ ತೆಗೆದುಕೊಂಡು ಬಂದರೆ ತುಂಬಾನೇ ಒಳ್ಳೆಯದು.ಇನ್ನು ಅಕೋಲ ಕಡ್ಡಿಯನ್ನು ತೆಗೆದುಕೊಂಡು ಬಂದು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬಹುದು ಮತ್ತು ಮುಖ್ಯ ದ್ವಾರದ ಮೇಲೆ ಕಟ್ಟಿ ಪೂಜೆಯನ್ನು ಮಾಡಬಹುದು. ಆದ್ದರಿಂದ ಸಮೃದ್ಧಿ ಹೆಚ್ಚಾಗುತ್ತದೆ.ಇನ್ನು ಅಕ್ಷಯ ತೃತೀಯ ದಿನ ಲಕ್ಷ್ಮಿಗೆ ಪ್ರಿಯ ಆಗಿರುವ ವಸ್ತುಗಳನ್ನು ಸಹ ತೆಗೆದುಕೊಂಡು ಬಂದು ಪೂಜೆಯನ್ನು ಮಾಡಬಹುದು.

https://youtu.be/yfu_9Ginz14
Leave A Reply

Your email address will not be published.