ರುಚಿ ವಾಸನೆಯ ಗ್ರಹಿಕೆ ಇಲ್ಲವೇ?

ಏನಾದರು ಜ್ವರ ಬಂದಾಗ ಅಥವಾ ಮೂಗು ಕಟ್ಟಿದಾಗ ಬಾಯಿಯಲ್ಲಿ ರುಚಿ ಮತ್ತು ಮೂಗಿನಲ್ಲಿ ವಾಸನೆ ಗೊತ್ತಾಗುವುದಿಲ್ಲ.ಬೇಗನೇ ವಾಸನೆ ಮತ್ತು ರುಚಿ ಗೊತ್ತಾಗಬೇಕು ಎಂದರೇ ಈ ಕೆಲವೊಂದು ಟಿಪ್ಸ್ ಅನ್ನು ಫಾಲೋ ಮಾಡಿ.

ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ನಾಲ್ಕು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಕುದಿಯುವ ಸಮಯದಲ್ಲಿ ಅಬಿಯನ್ನು ತೆಗೆದುಕೊಂಡರು ಸಹ ಮೂಗು ಕಟ್ಟಿರುವುದು ಕಡಿಮೆ ಆಗುತ್ತದೆ ಮತ್ತು ಇನ್ಫ್ಯಾಕ್ಷನ್ ಕೂಡ ಕಡಿಮೆ ಆಗುತ್ತದೆ. ಇದು ಚೆನ್ನಾಗಿ ಬಿಸಿ ಆದಮೇಲೆ ಒಂದು ಲೋಟಕ್ಕೆ ಹಾಕಿಕೊಳ್ಳಿ ಮತ್ತು ಸ್ವಲ್ಪ ಕಲ್ಲು ಉಪ್ಪು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಈ ರೀತಿ 2 ಸರಿ ಮಾಡಿ ಕುಡಿದರೆ ಸಾಕು ಬಾಯಿಯಲ್ಲಿ ರುಚಿ ಮತ್ತು ಮೂಗು ಕಟ್ಟಿರೋದು ಸಹ ನಿವಾರಣೆ ಆಗುತ್ತದೆ.

ಒಂದು ತೆಳು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಓಂ ಕಾಳು ಹಾಕಿ ಗಂಟ್ಟು ಕಟ್ಟಬೇಕು. ನಂತರ ಇದನ್ನು ಅರ್ಧ ಗಂಟೆಗೆ ಒಂದು ಬಾರಿ ಇದನ್ನು ಸ್ಮೆಲ್ ಮಾಡಬೇಕು. ಓಂ ಕಾಳಿನಿಂದ ಮೂಗು ಕಟ್ಟಿರೋದು ಸಹ ನಿವಾರಣೆ ಆಗುತ್ತದೆ. ಇದರಿಂದ ಉಸಿರಾಟ ತೊಂದರೆ ಇದ್ದರು ಸಹ ನಿವಾರಣೆ ಆಗುತ್ತದೆ.

https://www.youtube.com/watch?v=3zeyvnprgeI&pp=wgIGCgQQAhgB

Leave a Comment