ನಿತ್ಯ ಶೇಂಗಾ ತಿಂದರೇ ಏನಾಗುತ್ತದೆ!

Kannada health tips :ನೆನಸಿದ ಶೇಂಗಾ ಪ್ರಯೋಜನಗಳ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ಯಾವುದೇ ಧಾನ್ಯವನ್ನು ನೆನೆಸಿ ಉಪಯೋಗ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಇದರ ಪ್ರಯೋಜನ 100% ಸಿಗುತ್ತದೆ. ಶೇಂಗಾ ಬೀಜವನ್ನು ಹಾಗೆ ಸೇವನೆ ಮಾಡುವುದರಿಂದ ಪಿತ್ತ ಮತ್ತು ಉಲ್ಬಣ ವೃದ್ಧಿಯಾಗುತ್ತದೆ. ಅದೇ ಶೇಂಗಾವನ್ನು ನೆನೆಸಿ ತಿಂದರೆ ಪಿತ್ತ ಮತ್ತು ವಾತ ಶಮನವಾಗುತ್ತದೆ. ಇನ್ನು ನೆನಸಿದ ಕಡಲೆ ಬೀಜದಲ್ಲಿ ಅದ್ಭುತವಾದ ಸತ್ವಗಳನ್ನು ಕಾಣಬಹುದು. ಇದರಲ್ಲಿ ಪ್ರೊಟೀನ್ ಐರನ್ ವಿಟಮಿನ್ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ.

ಶೇಂಗಾ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಬಾದಾಮಿ ಗಿಂತಲೂ ಹತ್ತುಪಟ್ಟು ಹೆಚ್ಚು ಪೋಷಕಾಂಶ ಶೇಂಗಾಬೀಜದಲ್ಲಿದೆ. ಪ್ರತಿದಿನ ಶೇಂಗಾ ಬೀಜವನ್ನು ನೆನೆಸಿ ಬೆಲ್ಲದ ಜೊತೆ ಮಕ್ಕಳಿಗೆ ಕೊಡುವುದರಿಂದ ಮಕ್ಕಳ ಮಾನಸಿಕ ವಿಕಾಸ ಆಗುತ್ತದೆ. ಶರೀರಿಕ ವಿಕಾಸ ಆಗುತ್ತದೆ.ಶರೀರದಲ್ಲಿ ವಾತ ಪಿತ್ತ ಕಫ ವಿಕಾರಗಳು ಶಮನ ಆಗುತ್ತದೆ. ಶರೀರ ಸಮರ್ಪಕವಾಗಿ ಬೆಳವಣಿಗೆ ಆಗುತ್ತದೆ.ಶೇಂಗಾ ಬೀಜವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಬಲ ವೃದ್ಧಿಯಾಗುತ್ತದೆ.

Kannada health tips :ನೆನೆಸಿದ ಕಡಲೆ ಬೀಜವನ್ನು ಸೇವನೆ ಮಾಡುವುದರಿಂದ ಹೃದಯದ ರಕ್ತನಾಳಗಳ ಆಗಿರುವ ಬ್ಲಾಕೆಜ್ ಕಡಿಮೆಯಾಗುತ್ತದೆ.ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ಗ್ಯಾಸ್ಟಿಕ್ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾಲ್ಸಿಯಂ ಕೊರತೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ತಪ್ಪದೇ ಪ್ರತಿದಿನ ಬೆಳಗ್ಗೆ 50 ಗ್ರಾಂ ನೆನೆಸಿದ ಶೇಂಗಾ ಬೀಜವನ್ನು ಸೇವನೆ ಮಾಡಿ

https://youtu.be/DMaL3EhqJ3Q
Leave A Reply

Your email address will not be published.