ನೀವು ಪ್ರತಿದಿನ ಒಂದು ಲೋಟ ಹಾಲಿನ ಜೊತೆ ಅಶ್ವಗಂಧ ಬೆರೆಸಿ ಕುಡಿದರೆ ಏನಾಗುತ್ತೆ ಗೊತ್ತಾ?

Kannada tips :ಇತ್ತೀಚಿನ ದಿನಗಳಲ್ಲಿ ನರಗಳ ಬಲಹೀನತೆ, ನರಗಳ ದೌರ್ಬಲ್ಯತೆ ಸಮಸ್ಯೆಯಿಂದ ಬಹಳಷ್ಟು ಜನರು ನರಳುತ್ತಿದ್ದಾರೆ. ಕೈ ಕಾಲು ಜುಮ್ಮು ಹಿಡಿಯುವುದು ಮತ್ತು ಇದ್ದಕ್ಕಿದ್ದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನಡೆದಾಗ ಹೃದಯದ ಬಡಿತ ಹೆಚ್ಚಾಗುವುದು, ಚಿಕ್ಕ ಕೆಲಸ ಮಾಡಿದರೂ ಬಹಳ ಬೇಗ ಸುಸ್ತು ಆಗುವುದು, ಭಾರವಾದ ವಸ್ತುಗಳನ್ನು ಎತ್ತಲು ಸಹ ಆಗದೆ ಬಳಲುವುದು.ಇದೆಲ್ಲ ನರ ಬಲಹೀನತೆಯ ಕೆಲವು ಲಕ್ಷಣಗಳು.

ಇನ್ನು ಮನುಷ್ಯನ ಚಲನೇ-ವಲೆನೆಗಳಿಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮುಖ್ಯವೋ ಅಷ್ಟೇ ನರಗಳು ಸಹ ಮುಖ್ಯವಾದದ್ದು. ಮೆದುಳಿನಿಂದ ಬರುವ ಸಂಕೇತಗಳನ್ನು ನರಗಳಿಂದ ಕಂಡಗಳಿಗೆ ಹೋಗಿ ನಂತರ ಚಾಲನೆ ಸಿಗುತ್ತದೆ. ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ ಅವಾಗ ಸ್ಪರ್ಶ ಇಲ್ಲದಂತೆ ಆಗುವುದು, ಕೈ ಕಾಲುಗಳು ಚಾಲನೆ ಹೆಚ್ಚಾಗಿ ಸ್ಪರ್ಶ ಇಲ್ಲದಂತೆ ಆಗುವುದು, ನಡೆಯದಂತೆ ಆಗುವುದು. ಇದೆಲ್ಲವೂ ನರಸಂಬಂಧಿತ ರೋಗದ ಲಕ್ಷಣಗಳು.

ಸಾಮಾನ್ಯವಾಗಿ ಈ ಲಕ್ಷಣಗಳನ್ನು ಸಕ್ಕರೆಕಾಯಿಲೆ ಇರುವವರಲ್ಲಿ ನೋಡಬಹುದು. ಇನ್ನು ಧೂಮಪಾನ, ಮಧ್ಯಪಾನ ಅತಿಯಾಗಿ ಸೇವನೆ ಮಾಡುವವರಲ್ಲಿ ಈ ದೌರ್ಬಲ್ಯ ಹೆಚ್ಚಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಪೂರ್ತಿ ಸಸ್ಯಹಾರಿ ಸೇವನೆ ಮಾಡುವವರಿಗೂ ಬೇಗನೆ ನರಗಳ ದೌರ್ಬಲ್ಯ ಕಂಡುಬರುತ್ತದೆ. ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆಯುವುದಿಲ್ಲ ಅಂಥವರು
ಕ್ರಮಬದ್ಧವಾಗಿ ವ್ಯಾಯಾಮ ಮತ್ತು ಪ್ರಾಣ ವ್ಯಾಯಾಮ ಮಾಡಿದರೆ ಸಾಕು ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ಪನ್ನವಾಗುತ್ತದೆ. ಸೂರ್ಯನ ಕಿರಣಗಳಲ್ಲಿ ವಿಟಮಿನ್-ಡಿ ಸಿಗುವುದರಿಂದ ಸ್ವಲ್ಪ ಹೊತ್ತು ಬೆಳಗಿನ ಜಾವದಲ್ಲಿ ಬಿಸಿಲಿನಲ್ಲಿ ಓಡಾಡಿದರೆ ಇನ್ನೂ ಉತ್ತಮ.

ಇನ್ನು ಆಯುರ್ವೇದದಲ್ಲಿ ಉತ್ತಮ ಪರಿಹಾರ ಇದೆ.ಅಶ್ವಗಂಧ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿಕೊಂಡು ಒಂದು ಡಬ್ಬದಲ್ಲಿ ಶೇಖರಣೆ ಮಾಡಿ.ಪ್ರತಿದಿನ ಎರಡು ಬಾರಿ ಉಗುರು ಬೆಚ್ಚಗೆ ಇರುವ ಹಾಲಿಗೆ ಒಂದು ಚಮಚ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದ 2-3 ತಿಂಗಳಲ್ಲಿ ನಿಮ್ಮ ನರಗಳು ಬಲಗೊಳ್ಳುತ್ತವೆ.

ಇನ್ನು ಮಧುಮೇಹದಿಂದ ಬಳಲುತ್ತಿರುವವರು ಕಲ್ಲು ಸಕ್ಕರೆ ಹಾಕುವ ಬದಲು ಹಳೆಯ ಬೆಲ್ಲವನ್ನು ಮಿಶ್ರಣ ಮಾಡಿಕೊಂಡು ಅಶ್ವಗಂಧವನ್ನು ಸೇವಿಸಬಹುದು. ಇನ್ನು ಈ ನರಗಳ ಬಲಹೀನತೆ ಇರುವವರು ತಪ್ಪದೇ ಪ್ರತಿದಿನ ಹಾಲನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ನರಗಳ ದೌರ್ಬಲ್ಯತೆ ಕಡಿಮೆ ಆಗುತ್ತದೆ.ಇನ್ನು ನರ ದೌರ್ಬಲ್ಯತೆ ಇರುವವರು ಪ್ರತಿದಿನ ಉಗುರು ಬೆಚ್ಚಗೆ ಇರುವ ನೀರಿಗೆ ಸ್ವಲ್ಪ ನಿಂಬೆ ರಸ, ಸ್ವಲ್ಪ ಅರಿಶಿಣ, ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಕುಡಿಯುವುದರಿಂದ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ.

Kannada tipsಇನ್ನು ಹಾಲಿಗೆ ಸ್ವಲ್ಪ ಅರಿಶಿಣ ಬೆರೆಸಿ ಕುಡಿಯುವುದರಿಂದ ನರಗಳು ಬಲವಂತವಾಗಿ ಮಾರ್ಪಾಡಾಗುತ್ತದೆ.ಅಷ್ಟೇ ಅಲ್ಲದೆ ಪ್ರತಿದಿನ ತಪ್ಪದೆ ವಾಕಿಂಗ್ ಮಾಡಬೇಕು. ಇದರಿಂದ ಶರೀರಕ್ಕೆ ರಕ್ತ ಪ್ರಸಾರಣೆ ಚೆನ್ನಾಗಿ ಉಂಟಾಗಿ ಬ್ಲಡ್ ಸರ್ಕ್ಯುಲೇಶನ್ ಆಗುವುದರಿಂದ ನರಗಳ ಬಲಹೀನತೆ ಕಡಿಮೆಯಾಗುತ್ತದೆ.ಇನ್ನು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರು ಬೆಚ್ಚನೆ ನೀರಿನಲ್ಲಿ ನಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಸಾಕಷ್ಟು ಬಲಹೀನತೆ ಕಡಿಮೆಯಾಗುತ್ತದೆ.ಇಂತಹ ನೈಸರ್ಗಿಕವಾಗಿರುವ ಪರಿಹಾರಗಳನ್ನು ನಿಮ್ಮ ಡಯಟ್ ನಲ್ಲಿ ಪ್ರತಿದಿನ ಬಳಸುವುದರಿಂದ ನಿಮ್ಮ ದೇಹದ ನರಗಳ ದೌರ್ಬಲ್ಯತೆ ಯನ್ನು ನಿವಾರಿಸಿಕೊಳ್ಳಬಹುದು.

Leave A Reply

Your email address will not be published.