Health tips Kannada :ಬೇಸಿಗೆ ಬಂತು ಅಂತ ಕಬ್ಬಿನ ಹಾಲನ್ನು ಕುಡಿಯುತ್ತೀರಾ?

Health tips Kannada:ಕಬ್ಬಿನ ಹಾಲು ಅಥವಾ ರಸವು ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ.ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ 10 ಅಥವಾ 15ರೂಪಾಯಿಗೆ ದೊರೆಯುವ ಪೋಷಕಾಂಶವುಳ್ಳ ಪಾನಿಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರುಳುಗೊಳಿಸಲು ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ.

ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿದರೆ ಹಲವಾರು ಪ್ರಯೋಜನಕಾರಿ ಇದೆ.ಮುಟ್ಟಿನ ಸಮಯದಲ್ಲಿ ಕಬ್ಬಿನ ರಸ ಒಳ್ಳೆಯದು. ಮುಖ್ಯವಾಗಿ ಚಳಿಗಾಲದ ಸಮಯದಲ್ಲಿ ಜನರು ಹೆಚ್ಚಾಗಿ ನೀರು ಕುಡಿಯುವುದಿಲ್ಲ. ಅಂತವರು ಬೆಳಗ್ಗೆ ಒಂದು ಲೋಟ ಕಬ್ಬಿನ ರಸ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದರಲ್ಲಿ ಕಬ್ಬಿಣ ಮೆಗ್ನೀಷಿಯಂ ಕ್ಯಾಲ್ಸಿಯಂ ಮತ್ತು ಎಲೆಕ್ಟ್ರಾ ಲೈಟ್ ಗಳಲ್ಲಿ ಸಮೃದ್ಧವಾಗಿದೆ.ಹಾಗಾಗಿ ಇದು ನಿರ್ಜಲೀಕರಣಕ್ಕೆ ಅತ್ಯುತ್ತಮವಾಗಿದೆ. ಕಬ್ಬಿನ ಹಾಲು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುತ್ತದೆ.ದೇಹದಲ್ಲಿ ಪ್ರೋಟೀನ್ ಮಟ್ಟವನ್ನು ಹೆಚ್ಚಿಸಿ ಜ್ವರ ಬರದಂತೆ ಕಾಪಾಡುತ್ತದೆ.ಇನ್ನು ಕಬ್ಬಿನ ರಸವು ಶಕ್ತಿ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ. ಉತ್ಕರ್ಷಣ ನಿರೋಧಕ ದಲ್ಲಿ ಶ್ರೀಮಂತವಾಗಿದ್ದು ಮೂತ್ರ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.ನಿಮ್ಮ ಯಾಕೃತ್ ನಾ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ಆಯುರ್ವೇದದ ಪ್ರಕಾರ ನೀರು ಅಥವಾ ಜ್ಯೂಸ್ ಯಾವುದೇ ಪಾನಿಯಾವಾಗಲಿ ನಿಂತು ಕುಡಿಯಬಾರದು. ಬದಲಿಗೆ ಕುಳಿತುಕೊಂಡು ಕುಡಿಯಬೇಕು. ಕಬ್ಬಿನಹಾಲು ಮಧುಮೇಹ ಹೊಂದಿರುವವರು ಕುಡಿಯಬಹುದು ಎಂಬ ಸಾಕಷ್ಟು ಅನುಮಾನಗಳಿಗೆ ಉತ್ತರ ಹೌದು. ಮಧುಮೇಹ ಹೊಂದಿರುವವರು ಕಬ್ಬಿನ ರಸವನ್ನು ನಿಸ್ಸಂದೇಹವಾಗಿ ಕುಡಿಯಬಹುದು.ಏಕೆಂದರೆ ಇದು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಮಧುಮೇಹ ಹೊಂದಿರುವ ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗುವುದರಿಂದ ವೈದ್ಯರಿಂದ ಸಲಹೆ ಪಡೆದುಕೊಂಡು ಕುಡಿಯಿರಿ. Health tips Kannada

Leave A Reply

Your email address will not be published.