ಶಾಂಪೂವಿನ ತಪ್ಪಾದ ಬಳಕೆ ನಾವು ಶಾಂಪೂವನ್ನು ಬಳಸುವಾಗ ಸಾಮಾನ್ಯವಾಗಿ ಕೈಯಲ್ಲಿ ಶಾಂಪು ಹಾಕಿ ಕೂದಲನ್ನು ತೊಳೆಯುತ್ತೇವೆ. ದಯವಿಟ್ಟು ನಿಲ್ಲಿಸಿ. ಇದು ಶಾಂಪೂವನ್ನು ಬಳಸುವ ಸರಿಯಾದ ವಿಧಾನ ಅಲ್ಲ ಈ ತಪ್ಪಿನಿಂದ ಕೂದಲು ಸ್ವಚ್ಛವಾಗುವುದಿಲ್ಲ ಇದರಿಂದ ಕೂದಲು ಜಾಸ್ತಿಯಾಗಿ ಉದುರುತ್ತದೆ.
ಸರಿಯಾದ ವಿಧಾನ ಶಾಂಪೂವನ್ನು ನೀರಿನಿಂದ ಕಲಸಿ ಕೂದಲನ್ನು ತೊಳೆಯಬೇಕು. ಅಷ್ಟೇ ಅಲ್ಲ ಮೊದಲಿಗೆ ಕೂದಲನ್ನು ಒಂದು ಬಾರಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಒಂದು ಮೊಗ್ಗಿನಿಂದ ಅಥವಾ ಬೌಲ್ ನಿಂದಶಾಂಪೂ ಅನ್ನು ಮಿಕ್ಸ್ ಮಾಡಿ ತೊಳೆಯಿರಿ. ಶಾಂಪು ನಿಮ್ಮ ಕೂದಲಿನ ಉದ್ದದ ಅನುಗುಣವಾಗಿ ಬಳಸಿ. ಎರಡು ಚಮಚ ಉದ್ದ ಕೂದಲು ಇದ್ದರೆ ಸಾಕಾಗುತ್ತದೆ. ಒಂದು ಚಮಚ ಗಿಡ್ಡ ಕೂದಲು ಇದ್ದರೆ ಸಾಕಾಗುತ್ತೆದೆ. ಇದರಿಂದ ಕೂದಲಿಗೆ ಶಾಂಪೂನಿಂದ ಹಾನಿಕಾರಕ ಕೆಮಿಕಲ್ ನಿಂದ ಕೂದಲಿಗೆ ತೊಂದರೆ ಆಗುವುದಿಲ್ಲ. ಕೂದಲು ಉದುರುವುದು ತುಂಬಾನೇ ಕಡಿಮೆ ಆಗುತ್ತದೆ.
ಸರಿಯಾದ ನೀರಿನ ಬಳಕೆ ಮಾಡದೇ ಇರುವುದು. ಈ ತಪ್ಪು ಕೂಡ ಸಾಮಾನ್ಯವಾಗಿ ಮಾಡುತ್ತೇವೆ ನಾವು ಚಳಿಗಾಲ ಮಳೆಗಾಲ ಬಂದರೆ ತುಂಬಾ ಬಿಸಿ ನೀರಿನಿಂದ ತಲೆ ಸ್ನಾನ ಮಾಡುತ್ತೇವೆ. ಬೇಸಿಗೆಯಲ್ಲಿ ತಣ್ಣೀರಿನಿಂದ ತಲೆಯನ್ನು ತೊಳೆಯುತ್ತೇವೆ. ಈ ಎರಡು ತಪ್ಪುಗಳನ್ನು ಏನಾದರೂ ಮಾಡುತ್ತಿದ್ದರೆ. ದಯವಿಟ್ಟು ನಿಲ್ಲಿಸಿ ಕೂದಲು ಉದುರಲ್ಲೂ ಇದು ಒಂದು ಕಾರಣ.
ನಾವು ಸ್ನಾನ ಮಾಡುವ ನೀರು ಜಾಸ್ತಿ ಬಿಸಿಯಾಗಿಯೂ ಇರಬಾರದು ತಣ್ಣಗೂ ಇರಬಾರದು. ಉಗುರು ಬೆಚ್ಚನ ನೀರಿನಲ್ಲಿ ತಲೆ ಕೂದಲನ್ನು ತೊಳೆದರೆ ತುಂಬಾನೇ ಒಳ್ಳೆಯದು ಇದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ.ಸರಿಯಾದ ಶಾಂಪೂನ ಬಳಕೆ ಇದು ಕೂಡ ಸಾಮಾನ್ಯವಾಗಿ ಮಾಡೋದು ಒಂದು ತಪ್ಪು. ಕೂದಲು ಉದುರುವ ಸಮಸ್ಯೆ ಇದ್ದರೆ ಹೇರ್ ಫಾಲ್ ಶಾಂಪೂಗಳನ್ನು ಬಳಸಬೇಕು ಹಾಗೆ ಡ್ಯಾಂಡ್ರಫ್ ಸಮಸ್ಯೆ ಇದ್ದರೆ ತಲೆ ಹೊಟ್ಟಿನ ಸಮಸ್ಯೆಗೆ ಸರಿಯಾದ ಶಾಂಪೂವನ್ನು ಆಯ್ಕೆ ಮಾಡಿ ಬಳಸಬೇಕು.
ಇನ್ನು ನೀವು ಬಳಸುವ ಶಾಂಪೂನಲ್ಲಿ ಸಲ್ಫೇಟ್ ಬ್ಯಾರೆಬೆನ್ ಇರಬಾರದು. ಇದ್ದರೆ ಕೂದಲು ಉದುರುವ ಸಮಸ್ಯೆ ಬರುವುದು ಖಂಡಿತ. ಇನ್ನು ಒಳ್ಳೆಯ ಕೆಮಿಕಲ್ ಇಲ್ಲದ ಶಾಂಪೂಗಳ ಬಗ್ಗೆ ವಿಡಿಯೋ ಮಾಡಿದ್ದೇನೆ.ಕಂಡಿಷನರ್ ಬಳಕೆ ಮಾಡುವಾಗ ಮಾಡುವ ತಪ್ಪು. ಕಂಡಿಷನರ್ ನಾವು ಬಳಕೆ ಮಾಡುವಾಗ ಈ ತಪ್ಪು ಮಾಡಿದರೆ ಕೂದಲು ಹಂಡ್ರೆಡ್ ಪರ್ಸೆಂಟ್ ಉದುರುತ್ತದೆ. ಕಂಡಿಷನರ್ ಕುದಲ್ಲ ಉದ್ದಕ್ಕೆ ಅಪ್ಲೈ ಮಾಡಬೇಕು. ಯಾವುದೇ ಕಾರಣಕ್ಕೂ ತಲೆ ಬುಡಕ್ಕೆ ತಲೆ ಬಾರದು. ಇದರಿಂದ ಡ್ಯಾಂಡ್ರಫ್ ಸಮಸ್ಯೆ ಆರಂಭವಾಗಿ ಮುಂದೆ ಕೂದಲು ಉದುರುವ. ಸಮಸ್ಯೆ ಬರುವುದು ಖಂಡಿತ..
ಕಂಡಿಷನರ್ ಅನ್ನು ಎರಡರಿಂದ ಮೂರು ನಿಮಿಷಕ್ಕೆ ನಾ ಜಾಸ್ತಿ ತಲೆಯಲ್ಲಿ ಇಡಬಾರದು. ಅಷ್ಟೇ ಅಲ್ಲ ಹಾನಿಕಾರಕ ಕೆಮಿಕಲ್ಸ್ ಇರುವ ಕಂಡೀಷನರ್ ಅನ್ನು ಬಳಸದೆ ಇದ್ದರೆ ಉತ್ತಮ. ಅದರಲ್ಲಿ ಮುಖ್ಯವಾಗಿ ಪ್ಯಾರ್ ಬೆನ್ ಮತ್ತು ಸಲ್ಫ್ಲೈಡ್ ಇರುವಂತ ಕಂಡಿಷನರ್ ಅನ್ನು ಬಳಸದೆ ಇದ್ದರೆ ತುಂಬಾನೇ ಒಳ್ಳೆಯದು.
ಸರಿಯಾದ ಎಣ್ಣೆಯನ್ನು ಬಳಕೆ ಮಾಡದೆ ಇರುವುದು. ನಮಗೆ ಹೇರ್ ಫಾಲ್ ಆಗುತ್ತಿದ್ದರೆ ಕೆಮಿಕಲ್ ಫ್ರೀ ಎಣ್ಣೆಯನ್ನು ಬಳಸುವುದು ತುಂಬಾನೇ ಮುಖ್ಯ.
ಸಾಮಾನ್ಯವಾಗಿ ನೀವು ಬಳಸುವ ಎಣ್ಣೆಯಲ್ಲಿ ಪ್ಯಾರಬಿನ್ ಮಿನರಿಲ್ಲ ಆಯಿಲ್ ಸುವಾಸನೆ ಕಲರ್ ಇರಬಹುದು. ಇದ್ದರೆ ತೊಂದರೆ ತಪ್ಪಿದಲ್ಲ. ಇದರಿಂದ ಡ್ಯಾಂಡ್ರಫ್ ಸಮಸ್ಯೆ ಹಾಗೂ ಕೂದಲು ಉದರುವ ಸಮಸ್ಯೆ ಜಾಸ್ತಿ ಆಗುತ್ತದೆ. ಆದಷ್ಟು ಮನೆಯಲ್ಲೇ ತಯಾರಿಸಿದ ಎಣ್ಣೆಯನ್ನು ಬಳಸಿ. ವಾರದಲ್ಲಿ ಎರಡು ಬಾರಿ ಎಣ್ಣೆ ಹಚ್ಚಿದರೆ ತುಂಬಾನೇ ಒಳ್ಳೆಯದು. ಆದರೆ ಎಣ್ಣೆ ಹಚ್ಚಿ ಹೊರಗಡೆ ಹೋಗದಿರಿ. ಇದರಿಂದ ಧೂಳು ಕೂದಲಿಗೆ ಕೂತು ಕೂದಲು ಇನ್ನೂ ಉದುರುತ್ತದೆ.
ಕೂದಲಿನ ಆರೈಕೆಗೆ ಎಣ್ಣೆ ತುಂಬಾನೇ ಮುಖ್ಯ ಆದ್ದರಿಂದ ರಾತ್ರಿ ಹೊತ್ತು ಎಣ್ಣೆಯನ್ನು ಹಚ್ಚಿ ಮಾರ್ನಿಂಗ್ ವಾಶ್ ಮಾಡಿಕೊಳ್ಳಿ. ತಲೆ ಸ್ನಾನ ಮಾಡುವ ಎರಡು ಗಂಟೆ ಮೊದಲು ಎಣ್ಣೆಯನ್ನು ಹಚ್ಚಿ ಆಮೇಲೆ ಸ್ನಾನ ಮಾಡಿ. ಹೊದ್ಯೆ ಕೂದಲನ್ನು ಬಾಚುವುದು. ಹೊದ್ಯೆ ಕೂದಲನ್ನು ಬಾಚುವುದರಿಂದ ಕೂದಲು ಇನ್ನೂ ಜಾಸ್ತಿ ಉದುರುತ್ತದೆ. ಕಾರಣ ಕೂದಲು ನಾವು ವಾಶ್ ಮಾಡುವಾಗ ನಮ್ಮ ಕೂದಲು ಬುಡದಿಂದ ದುರ್ಬಲವಾಗಿ ಇರುತ್ತದೆ. ಅಂದರೆ
ಕೂದಲಿನ ರಂದ್ರಗಳು ಓಪನ್ ಆಗಿರುತ್ತವೆ. ಆ ಸಮಯದಲ್ಲಿ ಕೂದಲನ್ನು ಬಾಚುವುದರಿಂದ ಕೂದಲು ಇನ್ನೂ ಜಾಸ್ತಿ ಉದುರುತ್ತದೆ. ಆದ್ದರಿಂದ ಒದ್ದೆ ಕೂದಲನ್ನು ನ್ಯಾಚುರಲ್ಲಾಗಿ ಒಣಗಲು ಬಿಡಿ ಆಮೇಲೆ ಪೂರ್ತಿ ಕೂದಲು ಒಣಗಿದ ಮೇಲೆ ಬಾಚಿ.
ಇನ್ನು ಸಾಮಾನ್ಯವಾಗಿ ಮಾಡುವ ಇತರ ತಪ್ಪುಗಳು ಬೇರೆಯವರ ಬಾಚಣಿಕೆಯನ್ನು ಬಳಸದಿರೆ. ವಾರದಲ್ಲಿ ಒಂದು ಬಾರಿ ಬಾಚಣಿಕೆಯನ್ನು ಕ್ಲೀನ್ ಮಾಡಿ. ಜಂಕ್ ಫುಡ್ ಗಳನ್ನು ಕಡಿಮೆ ಸೇವಿಸಿ. ನೀರ್ ಕುಡಿಯಿರಿ ನೀವು ಬಳಸುವ ಶಾಂಪೂವನ್ನು ಪದೇ ಪದೇ ಬಾದಲಾಯಿಸದಿರಿ. ಹೀಟ್ ಟೂಲ್ ಗಳನ್ನು ಆದಷ್ಟು ಕಡಿಮೆ ಬಳಸಿ ಜಾಸ್ತಿ ಎಳೆದು ಕೂದಲನ್ನು ಕಟ್ಟಲೇಬೇಡಿ. ಇದರಿಂದ ಕೂಡ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ……