ಚಿನ್ನವನ್ನು ಕಾಲು ಗೆಜ್ಜೆ ಧರಿಸಬಹುದೇ.!

ಪ್ರತಿಯೊಬ್ಬರು ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ತುಂಬಾನೆ ಇಷ್ಟ, ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಆಭರಣವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸಲು ಒಂದು ಸಹಾಯ ಮಾಡುತ್ತದೆ. ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿಯ ಆಭರಣಗಳು ಕೂಡ ಧರಿಸುವ ಕ್ರಮ ಇರುತ್ತದೆ. ಅಂದರೆ ದೇಹದದಲ್ಲಿ ಪ್ರತಿಯೊಂದು ಭಾಗದಲ್ಲಿ ಕೂಡ ಚಿನ್ನದಿಂದ ಮಾಡಿದ ಆಭರಣವನ್ನು ಹಾಕಿಕೊಳ್ಳುತ್ತೇವೆ. ಆದರೆ ಕಾಲುಗಳಿಗೆ ಮಾತ್ರ ಬೆಳ್ಳಿ ಗೆಜ್ಜೆಯನ್ನು ಧರಿಸುತ್ತಾರೆ.

ಧಾರ್ಮಿಕದ ಪ್ರಕಾರ ವೈಜ್ಞಾನಿಕ ಕಾರಣ ಕೂಡ ಇದೆ ಚಿನ್ನದ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸಬಾರದು ಆದರೆ ಇತ್ತೀಚಿನ ದಿನಗಳಲ್ಲಿ ಅನುಕೂಲತೆ ಇರುವವರು ಚಿನ್ನದ ಗೆಜ್ಜೆಯನ್ನುಕೂಡ ಹಾಕಿಕೊಳ್ಳುತ್ತಾರೆ. ಆದರೆ ಸೊಂಟದ ಉಡುದಾರದಿಂದ ಹಿಡಿದು ಗೆಜ್ಜೆಯ ಚಿನ್ನವನ್ನು ಧರಿಸುವುದಕ್ಕೆ ಬರುವುದಿಲ್ಲ.

ಏಕೆಂದರೆ ಬಂಗಾರದ ಒಡವೆಗಳು ವಿಷ್ಣುವಿಗೆ ತುಂಬಾನೇ ಪ್ರಿಯವಾದದ್ದು .ಹಿಂದೂ ಸಂಪ್ರದಾಯದಲ್ಲಿ ಚಿನ್ನ ಎಂದರೆ ಲಕ್ಷ್ಮಿ, ಆದರೆ ಚಿನ್ನದೇವತೆಗೆ ಸಮಾನ ಆಗಿರುವುದರಿಂದ . ಚಿನ್ನವನ್ನು ಕಾಲುಗಳ ಗೆಜ್ಜೆಯ ರೂಪದಲ್ಲಿ ಹಾಕಿಕೊಳ್ಳುವುದರಿಂದ. ತಾಯಿ ಜಗನ್ಮಾತೆಗೆ ಅವಮಾನ ಮಾಡಿದಂತೆ ಆಗುತ್ತದೆ. ಚಿನ್ನವು ಲಕ್ಷ್ಮಿಯ ಸ್ವರೂಪ ಆಗಿರುವುದರಿಂದ, ಲಕ್ಷ್ಮಿ ವಿಷ್ಣುವಿನ ಪತ್ನಿ ಹಾಗೂ ಸೊಂಟದ ಕೆಳಗೆ ಚಿನ್ನವನ್ನು ಧರಿಸುವುದು ಕಾಲುಗಳಿಗೆ ಗೆಜ್ಜೆ ಯ ರೂಪದಲ್ಲಿ ಬಂಗಾರವನ್ನು ಹಾಕಿಕೊಳ್ಳುವುದರಿಂದ. ವಿಷ್ಣು ಮತ್ತು ಲಕ್ಷ್ಮಿಗೆ ಎಲ್ಲಾ ದೇವರುಗಳಿಗೂ ಕೂಡ ಅವಮಾನ ಮಾಡಿದಂತೆ ಆಗುತ್ತದೆ.

ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನದ ಆಭರಣಗಳು ಯಾವಾಗಲೂ ತುಂಬಾನೇ ಹೀಟ್. ಅಂದರೆ ದೇಹದ ಶಾಖವನ್ನು ಉತ್ಪಾದಿಸುತ್ತದೆ. ಅದೇ ಸಮಯದಲ್ಲಿ ಬೆಳ್ಳಿ ದೇಹಕ್ಕೆ ತಂಪು ಕೊಡುತ್ತದೆ. ಹಾಗಾಗಿ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.ಚಿನ್ನವನ್ನು ತಲೆಯಿಂದ ಹಿಡಿದು ಸೊಂಟದ ಪಟ್ಟಿಯವರೆಗೆ ಹಾಕಿಕೊಳ್ಳಬಹುದು. ಹಾಗೂ ಸೊಂಟದ ಕೆಳಗೆ ಬೆಳ್ಳಿ ಹಾಕಿಕೊಳ್ಳುವುದರಿಂದ. ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಯಾವುದೇ ರೀತಿಯ ರೋಗಗಳು ಬರುವುದಿಲ್ಲ.

Leave a Comment