ನಿಮಗೆ ಗ್ಯಾಸ್ಟಿಕ್ ನಿಂದ ಹೊಟ್ಟೆ ಉಬ್ಬರ, ವಾಕರಿಕೆ,ವಾಂತಿ, ಮಲಬದ್ಧತೆ ಇವೆಲ್ಲಾ ಕಂಡು ಬರುತ್ತಿದೆಯಾ? ಹಾಗಾದರೆ ನಮ್ಮ ಹಿರಿಯರ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡುತ್ತೇವೆ,ಕೇಳಿ….ಗ್ಯಾಸ್ಟ್ರಿಕ್ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಅನಾದಿಕಾಲದಿಂದ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ತಿನ್ನುತ್ತಿರುವುದು ಕಳಪೆ ಆಹಾರ, ಅದರಲ್ಲಿಯೂ ಸಹ ಕಾಯಿಲೆಕಾರಕ ಅಂಶಗಳು ಇರುತ್ತವೆ.
ಇಂತಹ ಒಂದು ಸಂದರ್ಭದಲ್ಲಿ ಗ್ಯಾಸ್ಟ್ರಿಕ್ ನಂತಹ ಇನ್ನು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜ. ಗ್ಯಾಸ್ಟ್ರಿಕ್ ಬಂದಂತಹ ಸಂದರ್ಭದಲ್ಲಿ ಏನು ಮಾಡಬಹುದು ಮತ್ತು ಯಾವ ರೀತಿಯ ನಮ್ಮ ಹಿರಿಯರು ಅನುಸರಿಸುತ್ತಿದ್ದ ಮನೆಮದ್ದುಗಳು ನಮಗೆ ಸಹಾಯ ಮಾಡುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ನಿಮಗೆ ಗ್ಯಾಸ್ಟಿಕ್ ಆಗಿದ್ದರೆ ತಕ್ಷಣ ಇವುಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಅಜ್ವೈನ ಅಥವಾ ಓಂ ಕಾಳುಗಳು–ಹೊಟ್ಟೆ ನೋವು ಮತ್ತು ಇನ್ನಿತರ ಸಮಸ್ಯೆಗಳಿಗೆ ಓಂ ಕಾಳುಗಳು ಒದಗಿಸುತ್ತವೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಎದೆಯುರಿ ಇಂತಹ ತೊಂದರೆಗಳು ಸಹ ಓಂಕಾಳು ಸೇವನೆಯಿಂದ ದೂರವಾಗುತ್ತದೆ.ನೀವು ಇದಕ್ಕಾಗಿ 1 ಟೀಚಮಚ ಓಂ ಕಾಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಸ್ವಲ್ಪ ಹೊತ್ತು ಬಿಟ್ಟು ಊಟ ಆದ ನಂತರದಲ್ಲಿ ಅಥವಾ ದಿನದ ಯಾವುದೇ ಸಂದರ್ಭದಲ್ಲಿ ನಿಮಗೆ ತೊಂದರೆ ಆದಾಗ ಸೇವನೆ ಮಾಡಬಹುದು.ಸಿಂಪಲ್ ಮನೆ ಮದ್ದು ಹೊಟ್ಟೆನೋವು ಬಂದರೆ ಓಂ ಕಾಳಗಳನ್ನು ಈ ರೀತಿ ಬಳಸಿ
ಇಂಗು–ಅಡುಗೆಯ ರುಚಿಯನ್ನು ಹೆಚ್ಚಿಸುವ ಇಂಗು, ನಿಮ್ಮ ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುತ್ತದೆ. ಕರುಳಿನ ಭಾಗದಲ್ಲಿ ಉಂಟಾಗುವ ಚಲನೆಯ ವ್ಯತ್ಯಾಸವನ್ನು ಇದು ತಡೆಹಿಡಿಯುತ್ತದೆ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲಿಯತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ನಿಮಗೆ ಗ್ಯಾಸ್ಟ್ರಿಕ್ ಆದಂತಹ ಸಂದರ್ಭದಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದು ಕೊಂಡು ಅದಕ್ಕೆ ಒಂದು ಟೀ ಚಮಚ ಇಂಗು ಹಾಕಿ ಊಟ ಆದ ನಂತರದಲ್ಲಿ ಅಥವಾ ನಿಮಗೆ ಅಸ್ವಸ್ಥತೆ ಎದುರಾದಾಗ ಕುಡಿಯಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಡಿ. ಏಕೆಂದರೆ ಇದು ಎದೆಯುರಿ ತಂದುಕೊಡಬಹುದು.ಮನೆ ಮದ್ದು ಇಂಗು ಬೆರೆಸಿದ ನೀರು ಕುಡಿದರೆ ಹೊಟ್ಟೆ ನೋವು ಕೂಡಲೇ ಕಮ್ಮಿ ಆಗುತ್ತೆ
ಜೀರಿಗೆ–ನಿಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುವ ಜೀರಿಗೆ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ.ನೀವು ಇದಕ್ಕಾಗಿ ಬೆಳಗಿನ ಸಮಯದಲ್ಲಿ ಆರೋಗ್ಯ ತಜ್ಞರು ಹೇಳುವಂತೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಹುರಿದ ಜೀರಿಗೆ ಪುಡಿ ಸೇರಿಸಿ ಕುಡಿಯಬೇಕು. ನಿಮಗೆ ಹೊಟ್ಟೆ ಉಬ್ಬರ ಅಥವಾ ಹೆಚ್ಚು ಆಯಾಸ ಆದಾಗ ಹೀಗೆ ಮಾಡಿ.
ನಿಂಬೆ ಸೋಡಾ–ಮನೆಯ ಹೊರಗಡೆ ಸೋಡಾ ಕುಡಿಯುವ ಬದಲು ನೀವೇ ಮನೆಯಲ್ಲಿ ಸ್ವತಹ ನಿಂಬೆ ಹಣ್ಣಿನಿಂದ ಎರಡು ಟೇಬಲ್ ಚಮಚ ಹುಳಿ ತೆಗೆದುಕೊಂಡು ಅದಕ್ಕೆ 1 ಟೀ ಚಮಚ ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿ ಸ್ವಲ್ಪ ನೀರು ಹಾಕಿಕೊಂಡು ಗ್ಯಾಸ್ಟ್ರಿಕ್ ಆದಂತಹ ಸಂದರ್ಭ ದಲ್ಲಿ ಕುಡಿದರೆ ನಿಮ್ಮ ಹೊಟ್ಟೆಯಲ್ಲಿನ ಆಮ್ಲೀಯತೆ ಸಂಪೂರ್ಣವಾಗಿ ಮಾಯವಾಗುತ್ತದೆ.ಒಂದು ವೇಳೆ ನೀವು ಹೆಚ್ಚಾಗಿ ಆಹಾರ ಸೇವನೆ ಮಾಡಿದ ಸಂದರ್ಭದಲ್ಲಿ ಕೂಡ ಊಟ ಆದ ಮೇಲೆ ಈ ರೀತಿ ಮಾಡಬಹುದು.
ತ್ರಿಫಲ–ಇದು ಒಂದು ಆಯುರ್ವೇದಿಕ ಗಿಡಮೂಲಿಕೆ ಆಗಿದ್ದು, ಗ್ರಂತಿಕೆ ಅಂಗಡಿಗಳಲ್ಲಿ ಪೌಡರ್ ರೂಪದಲ್ಲಿ ಸಿಗುತ್ತದೆ.ನಿಮಗೆ ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ವಾಕರಿಕೆ, ವಾಂತಿ ಸಮಸ್ಯೆಗಳು ಕಂಡು ಬಂದ ಸಮಯದಲ್ಲಿ ಇದನ್ನು ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ ದಿನಕ್ಕೆ ಒಂದು ಬಾರಿ ಕುಡಿಯಬೇಕು. ಇದು ಮಲಬದ್ಧತೆ ಸಮಸ್ಯೆಯನ್ನು ಸಹ ಹೋಗಲಾಡಿಸಿ ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ….