ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

ಇನ್ನು ಈ ಗಿಡಕ್ಕೆ ಹೆಚ್ಚು ಅರೈಕೆ ಬೇಕಾಗಿಲ್ಲ. ಗೊಬ್ಬರ ನಾಶಕಗಳ ಅವಶ್ಯಕತೆ ಕೂಡ ಇಲ್ಲಾ. ತನ್ನಿಂದ ತಾನೇ ಹುಟ್ಟಿ ಬೆಳೆಯುವ ಈ ಗಿಡ ನಾನಾ ರೀತಿಯಲ್ಲಿ ಮನೆಮದ್ದು ಕೂಡ ಹೌದು. ಇದರ ಬೇರಿನಿಂದ ಇಡಿದು ಬೀಜದವರೆಗೆ ಎಲ್ಲಾವು ಒಂದಲ್ಲ ಒಂದು ರೀತಿಯಲ್ಲಿ ಔಷಧವೇ ಆಗಿವೆ. ಇಂತಹ ಸಸ್ಯದ ಮಹತ್ವದ ಕುರಿತಾಗಿ ತಿಳಿದವರಿಗಿಂತ ನಿರ್ಲಕ್ಷ ಮಾಡಿರೋರೆ ಹೆಚ್ಚು.

ಈ ಮೂಲಿಕೆಯು ಹುಲ್ಲು ಗಾವಲಿನಲ್ಲಿ,ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ.ಈ ಗಿಡವನ್ನು ಸೊಪ್ಪು ತರಕಾರಿಯಂತೆ ಬಳಸುತ್ತಾರೆ.ಇದು ೧-೩ ಅಡಿ ಎತ್ತರ ಬೆಳೆಯುತ್ತದೆ.ಕಾಂಡವು ವಿರಳವಾಗಿ ಕವಲೊಡೆದಿರುತ್ತದೆ. ಸರಳವಾದ, ನೀಳ ಅಥವಾ ಕರ್ನೆಯಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಉದ್ದನೆಯ ಪುಷ್ಪಮಂಜರಿಯು ಕಾಂಡದ ತುದಿ ಮತ್ತು ಎಲೆಯ ಕಂಕುಳಲ್ಲಿರುತ್ತವೆ.ಹೂಗಳು ಮೊದಲು ಕೆಂಪಾಗಿರುತ್ತವೆ ಬಲಿತಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ.ಹೂಗಳನ್ನು ಕಾಪಾಡುವ ಹೂಸೂಚಿಗಳು ಬೆಳ್ಳಗೆ ಹೊಳಪಿರುವ ಪೊರೆಯಂತಿರುತ್ತವೆ.ಹಣ್ಣುಗಳಲ್ಲಿ ಕಪ್ಪಾದ ಹೊಳಪಿನಿಂದ ಕೂಡಿದ ಸಣ್ಣ ಬೀಜಗಳಿರುತ್ತವೆ.

ನಾಟಿ ವೈದ್ಯದಲ್ಲಿ ಅಣ್ಣೆ ಬೀಜಕ್ಕೆ ಸೊಪ್ಪಿನಷ್ಟೇ ಪ್ರಾಧಾನ್ಯತೆ ಇದೆ. ನಾಟಿ ವೈದ್ಯದಲ್ಲಿ ಕೋಲಾಣಿ ಎಂದು ಕರೆಯುವ ಅಣ್ಣೆ ಬೀಜವನ್ನು ಮೂಲವ್ಯಾಧಿ ಗುಣಪಡಿಸಲು ಬಳಸುತ್ತಾರೆ ಎನ್ನುತ್ತಾರೆ ಪಂಡಿತ ಪರಮಶಿವಯ್ಯ. ಅಣ್ಣೆ ಬೀಜದ ಜತೆ ನಾಲ್ಕೈದು ರೀತಿ ಬೀಜ ಮತ್ತು ಸೊಪ್ಪು ಬೆರೆಸಿ ಮಾಡುವ ಔಷಧ ಮೂಲವ್ಯಾಧಿಗೆ ರಾಮ ಬಾಣವಂತೆ.ಇದನ್ನು ಅಡುಗೆಯಲ್ಲಿ ಕೂಡ ಬಳಸಲಾಗುತ್ತದೆ.

ದೇಹದಲ್ಲಿ ಉಷ್ಣತೇ ಜಾಸ್ತಿಯಾದರೆ ಈ ಸೊಪ್ಪು ಸೇವನೆ ಮಾಡಿದರೇ ಒಳ್ಳೆಯದು ಮತ್ತು ಸರ್ಪ ಸುತ್ತು, ದಡರ, ಮೊಡವೆ ಕಣ್ಣು ಉರಿ, ಕಣ್ಣು ಕೆಂಪು ಆಗುವುದು ಮೊದಲಾದ ರೋಗಗಳಿಗೆ ಮದ್ದಾಗಿ ಈ ಆಣ್ಣೆ ಸೊಪ್ಪನ್ನು ಬಳಸಲಾಗುತ್ತದೆ.

ಅಣ್ಣೆಸೊಪ್ಪು ಬೇರನ್ನು ಅರೆದು ಕುಡಿಸುವುದರಿಂದ ಭಂಗಿಸೊಪ್ಪಿನ ಸೇವನೆಯಿಂದುಂಟಾದ ದೋಷ ಪರಿಹಾರವಾಗುತ್ತದೆ.ಎಲೆಯ ರಸ,ಕಷಾಯ ಅಥವಾ ಚೂರ್ಣ ಸೇವನೆಯಿಂದ ಪಿತ್ತಕೋಶ(ಲಿವರ್) ಬಲಗೊಳ್ಳುತ್ತದೆ ಹಾಗೂ ಗೊನ್ಹೊರಿಯ ರೋಗವು ವಾಸಿಯಾಗುತ್ತದೆ.ಬೀಜಗಳನ್ನು ಅರೆದು ಕುಡಿಸಿದರೆ ಭೇದಿ ನಿಲ್ಲುತ್ತದೆ.ಬೀಜದ ಚೂರ್ಣ ಅಥವಾ ಬೀಜಗಳನ್ನು ಅರೆದು ಸೇವಿಸುವುದರಿಂದ ವೀರ್ಯವೃದ್ಧಿಯಾಗುತ್ತದೆ.ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ರೋಗಗಳು ವಾಸಿಯಾಗುತ್ತವೆ.

Leave a Comment