ನರಿ ಮತ್ತು ಕಪ್ಪೆಯ ಶುಭ ಅಶುಭ ಫಲಗಳೇನು ಗೊತ್ತಾ?

-ಕಪ್ಪೆ ಇಂದ್ರ ದಿಕ್ಕಿನಲ್ಲಿದ್ದು ವಟ ಗುಟ್ಟಿದರೆ ವಸ್ತ್ರ ವಾಹನಗಳ ಲಾಭ ಆಗುವುದು.-ಕಪ್ಪೆ ಅಗ್ನಿ ದಿಕ್ಕಿನಿಂದ ವಟಗುಟ್ಟಿದರೆ ತೊಂದರೆ ಸಂಭಾವಿಸಬಹುದು.-ಯಮನ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ದಾನ್ಯ ಸಂಪತ್ತು ದೊರೆಯುವುದು.-ನೈರುತ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಶುಭ ವಾರ್ತೆ ಕೇಳುವಿರಿ.-ವರುಣ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ಹಾನಿ ಮರಣ ಪ್ರಾಪ್ತಿಯಾಗುವುದು.-ವಾಯುವ್ಯಾ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಭೋಜನ ಕೂಟ ಕಾರ್ಯ ಸಿದ್ದಿ ಆಗುವುದು.-ಈಶನ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ದ್ರವ್ಯ ನಾಶ ಆಗುವುದು.

ಇನ್ನು ನರಿಗೆ ಇನ್ನೊಂದು ಹೆಸರು ಜಂಬುಕ. ನರಿಯು ಇಂದ್ರ ದಿಕ್ಕಿನಲ್ಲಿ ನಿಂತು ಕೂಗಿದರೆ ಶತ್ರುವಿಗೆ ಪರಜಯ ಆಗುವುದು.-ಅಗ್ನಿ ದಿಕ್ಕಿನಲ್ಲಿ ಕೂಗಿದರೆ ಬಂದುಗಳ ಆಗಮನ ಆಗುವುದು.-ಯಮನ ದಿಕ್ಕಿನಲ್ಲಿ ಕೂಗಿದರೆ ಉಡುಗೊರೆ ದೊರೆಯುವುದು.-ನರಿಯು ವರುಣ ದಿಕ್ಕಿನಲ್ಲಿ ಕೂಗಿದರೆ ಮಳೆ ಸುರಿಯುವುದು.-ವಾಯುವ್ಯಾ ದಿಕ್ಕಿನಲ್ಲಿ ಕೂಗಿದರೆ ಗ್ರಾಮಕ್ಕೆ ತೊಂದರೆ ಆಗುವುದು.-ಕುಬೇರ ದಿಕ್ಕಿನಲ್ಲಿ ಕೂಗಿದರೆ ದೊರೆಯ ಆಗಮನ ಆಗುವುದು.-ಈಶನ್ಯ ದಿಕ್ಕಿನಲ್ಲಿ ಕೂಗಿದರೆ ಜಯಲಕ್ಷ್ಮಿ ಒಲಿಯುತ್ತಾಳೆ.

ಇನ್ನು ಅಳಿಲಿನ ಶುಭ ಶಕುನ ನೋಡುವುದಾದರೇ-ಇಂದ್ರ ದಿಕ್ಕಿನಿಂದ ಕೂಗಿದರೆ ದುಃಖ ತೊಂದರೆ-ಅಗ್ನಿ ದಿಕ್ಕಿನಿಂದ ಕೂಗಿದರೆ ಶತ್ರು ಪರಾಜಯ ಗೊಳಿಸುವುದು.-ಯಮನ ದಿಕ್ಕಿನಿಂದ ಕೂಗಿದರೆ ಬಂದುಗಳ ದರ್ಶನ ಆಗುವುದು.-ವಾಯುವ್ಯಾ ದಿಕ್ಕಿನಿಂದ ಕೂಗಿದರೆ ಜೋರಾಗಿ ಮಳೆ ಬರುವುದು.ಕುಬೇರ ದಿಕ್ಕಿನಿಂದ ಕೂಗಿದರೆ ಗ್ರಾಮಕ್ಕೆ ಹಾನಿ ಉಂಟಾಗುವುದು.-ಈಶನ್ಯ ದಿಕ್ಕಿನಿಂದ ಕೂಗಿದರೆ ಮರಣ ಪ್ರಾಪ್ತಿಯಾಗುವುದು ಎನ್ನುವುದು ಶಕುನ ಶಾಸ್ತ್ರದಲ್ಲಿ ತಿಳಿಸಿದ್ದಾರೆ.

Leave a Comment