ಒಬ್ಬ ಮನುಷ್ಯನ ದೇಹದಲ್ಲಿ ಮಚ್ಚೆಗಳು ಇರಬಹುದು ಇಲ್ಲದೆ ಇರಬಹುದು.ಅಲವರಿಗೆ ಒಂದು ಇರಬಹುದು ಅಥವಾ ಅಲವಷ್ಟು ಇರಬಹುದು.ಅದು ದೇಹದಲ್ಲಿ ಇದ್ದರೆ ಯಾರಿಗೆ ಒಳ್ಳೆಯದು ಯಾರಿಗೆ ಕೆಟ್ಟದು ಅನ್ನೋದು ತುಂಬಾ ಮುಖ್ಯವಾಗಿರುತ್ತದೆ.ಈ ಮಚ್ಚೆಗಳಲ್ಲಿ 3 ವಿದಗಳಿವೆ.ಅವು ಕಪ್ಪು ಬಣ್ಣದು,ಹಸಿರು ಬಣ್ಣ,ಹಾಗೂ ಬಿಳಿಬಣ್ಣ ಎಂದು.ವಿಶೇಷವಾಗಿ ಇದರಲ್ಲಿ ಇನ್ನೂ ಎರಡು ಭಾಗವಿದೆ. ಅದು ಒಂದು ಗರುಡ ಮಚ್ಚೆ, ಒಂದು ಸರ್ಪ ಮಚ್ಚೆ ಮೀನ ಮಚ್ಚೆ ಎಂದು.
ಈ ಎರಡು ವಿಧಾನದಲ್ಲಿ ವಿಶೇಷವಾಗಿ ಗಂಡು ಹುಡುಗರಿಗೆ ಎಲ್ಲಿದ್ದರೆ ಶ್ರೇಷ್ಠ, ಹೆಣ್ಣು ಮಕ್ಕಳಿಗೆ ಎಲ್ಲಿದ್ದರೆ ಶ್ರೇಷ್ಠ ಎಂದು ಈ ಅಂಶ ನಿಮಗೆ ತಿಳಿಸುತ್ತೇವೆ.ವಿಶೇಷವಾಗಿ ಗಂಡು ಮಕ್ಕಳಿಗೆ ಹುಟ್ಟುತ್ತನೇ ಬಲ ಭಾಗದಲ್ಲಿ ಇದ್ದರೆ ಶ್ರೇಯಸ್ಸು ಅಂತ ಹೇಳುತ್ತಾರೆ.ಅಲ್ಲಿ ಯಾವ ಭಾಗ ವಿಶೇಷವಾಗಿ ಗಂಡು ಮಕ್ಕಳಿಗೆ ಬಲ ಭಾಗ ದಲ್ಲಿ ಭುಜದ ಮೇಲೆ ಇರಬೇಕು.ಭುಜ ಶ್ರೇಷ್ಠವಾದ ಅಂಶ ಭುಜದ ಮೇಲೆ ಬಂದರೆ ಲಕ್ಷ್ಮೀ, ಆತ ಹುಟ್ಟಿದಾಗಲೇ ಅವನ ಮನೆಯನ್ನು ಸಂಬೃದ್ದಿ ಸ್ಥಾನಕ್ಕೆ ಹೋಗುತ್ತಾನೆ ಎಂದು ಅರ್ಥ,ಅದಾಗಿ ಎರಡನೆಯದಾಗಿ ಹೊಟ್ಟೆಯ ಬಾಗದಲ್ಲಿ ಇರಬೇಕು.ಹೊಟ್ಟೆ ವಿಶೇಷವಾಗಿ ಬ್ರಹ್ಮ ಮೂಲ ಜಾಗ ಎಂದು ಹೇಳುತ್ತೀವಿ.
ಆ ಸ್ಥಳದಲ್ಲಿ ಇದ್ದರೆ ನಿಮಗೆ ಯಾವತ್ತಿಗು ಅನ್ನಕ್ಕೆ ದಾರಿದ್ರ್ಯ ಇರುವುದಿಲ್ಲ. ನೀವೇ 10 ಜನರಿಗೆ ಅನ್ನ ಹಾಕುವ ವ್ಯಕ್ತಿಗಳಾಗುತ್ತೀರಿ.ಇದು ಬಹಳ ವಿಶಿಷ್ಟವಾದ ಅಂಶ.ಮೂರನೆಯದಾಗಿ ಈ ಮಚ್ಚೆ ತೂಡೆಯ ಹಿಂಬದಿಯಲ್ಲಿ ಇರಬೇಕು,ಬಹಳ ವಿಶಿಷ್ಟವಾಗಿರುತ್ತದೆ ಈ ತೂಡೆ ಹಿಂಬದಿಯಲ್ಲಿ ಇರುವ ಮಚ್ಚೆಯವರು ಬಹಳ ದಾನಿಗಳಾಗಿರುತ್ತಾರೆ.ಮತ್ತು ಬಹಳ ವಿದ್ಯಾವಂತರಾಗುತ್ತಾರೆ,ಬುದ್ದಿವಂತರು ಸಹ ಆಗಿರುತ್ತಾರೆ.ಇದೆಲ್ಲಾ ಗಂಡು ಮಕ್ಕಳಲ್ಲಿ ಇದ್ದರೆ ಒಳ್ಳೆಯದು.ಹೆಣ್ಣುಮಕ್ಕಳಿಗೆ ಎಲ್ಲಿದ್ದರೆ ಶ್ರೇಯಸ್ಸು ಅಂದರೆ ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಇದ್ದರೆ ಒಳ್ಳೆಯದು.
ಮೊದಲನೆಯದಾಗಿ ಹೆಣ್ಣು ಮಕ್ಕಳಿಗೆ ಎಡಬಾಗ ಬೆನ್ನಿನ ಹಿಂದೆ ಇದ್ದರೆ ಶ್ರೇಷ್ಠ ಹಾಗು ಲಕ್ಷ್ಮೀ ರೂಪ ಹಾಗು ಇದ್ದ ಮನೆಗಿಂತ ಹೋದ ಮನೆಗೆ ಸಂಬೃದ್ದಿ ಆಗುತ್ತದೆ ಬಹಳ ಉತ್ತಮವಾಗಿರುತ್ತದೆ.ಎರಡನೇಯದಾಗಿ ಬಲಬಾಗ ಹೊಟ್ಟೆಯಿಂದ ಮೇಲ್ಬಾಗ ದಲ್ಲಿ ಇರಬೇಕು ಅದು ಶ್ರೇಷ್ಠ ವಾದ ಜಾಗ ಆಕೆ ದಾಂಪತ್ಯದಲ್ಲಿ,ಸಂತಾನದಲ್ಲಿ,ಮನೆಯ ವಿಚಾರ ,ಪೂಜೆ ಪುನಸ್ಕಾರ ಹಾಗು ಸಾತ್ವಿಕ ಗುಣ ಲಕ್ಷಣಗಳು ಹೋಂದಿರುವ ಸ್ತ್ರೀ ಆಗಿರುತ್ತಾರೆ.ಮೂರನೆಯದಾಗಿ ವಿಶೇಷವಾಗಿ ಮೂಗಿನ ಮೇಲ್ಭಾಗದಲ್ಲಿ ಹಾಗೂ ತುಟಿಯ ಕೆಳಭಾಗದಲ್ಲಿ ಇದ್ದರೆ ಅದು ಶುಕ್ರ ಆಕರ್ಷಣ ಯೋಗ ಎಂದು ಹೇಳುತ್ತೇವೆ.ಅವರು ಕಲಾತ್ಮಕವಾಗಿ,ಕಲೆಗೆ ಸಂಬಂಧ ಪಟ್ಟ ಹಾಗೆ,ಸಂಗೀತಕಾರರಾಗಿ ವಿಶೇಷವಾಗಿ ಕೆಲವೊಂದು ವೇದಿಕೆಗಳಲ್ಲಿ ವಿನ್ನರ್ ಆಗಿ ಮಿಂಚುವಂತಹುದು.