ಕರಿ ದತ್ತೂರ ದಲ್ಲಿದೆ ಎಂಥ ಅದ್ಬುತ ಶಕ್ತಿ ಗೊತ್ತಾ…!!ಇಂತಹಾ ಕಾಯಿಲೆಗಳೂ ಸಂಪೂರ್ಣವಾಗಿ ಕರಗುತ್ತದೆ…..!!

ಉಮ್ಮತ್ತಿ ಗಿಡದಲ್ಲಿ ಅದ್ಭುತವಾದ ಔಷಧಿ ಗುಣ ಇದೆ.ಈ ದತ್ತೂರಿ ಗಿಡವನ್ನು ಪ್ರತಿಯೊಬ್ಬರೂ ಸಹ ನೋಡಿರುತ್ತಾರೆ.ಇದರಲ್ಲಿ ಎರಡು ರೀತಿ ಇದೆ. ಒಂದು ಬಿಳಿ ದತ್ತೂರಿ ಗಿಡ ಮತ್ತು ಇನ್ನೊಂದು ನೀಲಿ ಬಣ್ಣದ ದತ್ತೂರಿ ಗಿಡ. ಇದು ಎಲ್ಲಾ ಕಡೆ ಸಿಗುವುದಿಲ್ಲ. ಇದು ಸಿಕ್ಕರೆ ತುಂಬಾನೇ ಒಳ್ಳೆಯದು.ಈ ದತ್ತೂರಿ ಗಿಡದ ಪ್ರೊಟೆಕ್ಟ್ ಎಲ್ಲಾ ಆಯುರ್ವೇದ ಶಾಪ್ ನಲ್ಲಿ ಸಿಗುತ್ತದೆ. ಆದರೆ ಯಾವ ರೀತಿ ತಯಾರು ಮಾಡಿದ್ದಾರೆ ಎನ್ನುವುದು ಯಾರಿಗೂ ಸಹ ತಿಳಿದಿರುವುದಿಲ್ಲ.

ಇನ್ನು ಗಂಡು ಮಕ್ಕಳ ಬೋಕ್ಕು ತಲೆಗೋಸ್ಕರ ಹೇರ್ ಆಯಿಲ್ ಅನ್ನು ಮಾರ್ಕೆಟ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ಮಂಡಿ ನೋವು ಕೈಕಾಲು ನೋವು, ಕಾಲು ಉಳಕು ಇಂತಹ ಸಮಯದಲ್ಲಿ ದತ್ತೂರಿ ಗಿಡದ ಎಲೆ ತುಂಬಾನೇ ಸಹಾಯಮಾಡುತ್ತದೆ. ದತ್ತೂರಿ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ನೋವು ಇರುವ ಜಾಗದಲ್ಲಿ ಹಚ್ಚಿದರೆ ಬೇಗ ನೋವು ಕಡಿಮೆಯಾಗುತ್ತದೆ. ಇನ್ನು ದತ್ತೂರಿ ಗಿಡದ ಎಲೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅಂಚಿನ ಮೇಲೆ ಸ್ವಲ್ಪ ಬಿಸಿ ಮಾಡಬೇಕು. ನಂತರ ಈ ಎಲೆಯನ್ನು ನೋವು ಇರುವ ಜಾಗಕ್ಕೆ ಇಡಬೇಕು. ಈ ರೀತಿ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ. ದತ್ತೂರಿ ಗಿಡದ ಎಲೆಯಲ್ಲಿ ನೋವನ್ನು ಎಳೆದುಕೊಳ್ಳುವ ಶಕ್ತಿ ಇದೆ.

ಇನ್ನು ದತ್ತೂರಿ ಎಣ್ಣೆ ಕೂಡ ನೋವು ನಿವಾರಕ ಶಕ್ತಿಯನ್ನು ಹೊಂದಿದೆ. ಒಂದು ವೇಳೆ ನೋವು ನಿವಾರಕ ಎಣ್ಣೆಯನ್ನು ತಯಾರಿಸಬೇಕು ಎಂದರೆ ಸಾಸಿವೆ ಎಣ್ಣೆಯನ್ನು ಬಳಸಬೇಕು. ಒಂದು ಪಾತ್ರೆಯಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಮತ್ತು ದತ್ತೂರಿ ಕಾಯಿ ಮತ್ತು ಎಲೆಯನ್ನು ಹಾಕಿ ಕಾಯಿಸಬೇಕು.ಈ ಎಣ್ಣೆಯನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಹಚ್ಚಿದರೆ ನಿಮಗೆ ಬೇಗ ನೋವು ಕಡಿಮೆಯಾಗುತ್ತದೆ. ಈ ದತ್ತೂರಿ ಗಿಡದಲ್ಲಿ ವಿಟಮಿನ್ ಸಿ ಅಂಶ ಮತ್ತು ಆಂಟಿಆಕ್ಸಿಡೆಂಟ್ ಗುಣ ತುಂಬಾ ಇದೆ. ಇದರಿಂದ ಮುಖದಲ್ಲಿ ಯಾವುದೇ ರೀತಿಯ ಕಲೆಗಳು ಮೊಡವೆಗಳು ಇದ್ದರೂ ಕೂಡ ನಿವಾರಣೆಯಾಗುತ್ತದೆ. ಯಾವುದೇ ಕಾರಣಕ್ಕೂ ಇದರ ಎಲೆಯನ್ನು ಮತ್ತು ಬೀಜವನ್ನು ಸೇವನೆ ಮಾಡಬಾರದು.

Leave a Comment