ಮನೆಯಲ್ಲಿ ಉಪ್ಪು ಚೆಲ್ಲಿದರೆ ಏನು ಅರ್ಥ ಗೊತ್ತಾ ಎಚ್ಚರವಾಗಿರಿ…..!!!

ಮನೆಯಲ್ಲಿ ಉಪ್ಪಿನ ಡಬ್ಬ ಕೈಜಾರಿ ಕೆಳಗೆ ಚೆಲ್ಲಿತೆಂದರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ. ಮುಂದೆ ಏನೋ ಆಗಬಾರದ್ದು ಆಗುವುದಿದೆ ಎನ್ನುವ ಮೂಢ ನಂಬಿಕೆಗಳು ನಮ್ಮ ಸಮಾಜದಲ್ಲಿದೆ.ಹಿಂದೂ ಜ್ಯೋತಿಷ್ಯ ಮತ್ತು ನಂಬಿಕೆಗಳ ಪ್ರಕಾರ, ಒಬ್ಬರ ಕೈಯಿಂದ ಉಪ್ಪು ಚೆಲ್ಲುವುದು ಭಯಾನಕ ಅದೃಷ್ಟವನ್ನು ಮುನ್ಸೂಚಿಸುತ್ತದೆ. ಇಂತಹ ವಿಚಾರಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಆಚರಣೆಯಲ್ಲಿವೆ. ಈ ರೀತಿಯ ಮೂಢನಂಬಿಕೆಯು ನಿಜವಾಗಿಯೂ ಹೌದಾ, ಇದರಿಂದ ಏನಾದರೂ ಸಮಸ್ಯೆ ಉಂಟಾಗುತ್ತಾ..ಉಪ್ಪು ಚೆಲ್ಲುವ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಉಪ್ಪು ಚೆಲ್ಲುವುದರ ಹಿಂದಿನ ಇತಿಹಾಸ
ಉಪ್ಪು ಚೆಲ್ಲಿದರೆ ಅನಾಹುತವಾಗುತ್ತೆ ಎನ್ನುವ ನಂಬಿಕೆ ಶತಮಾನಗಳ ಹಿಂದಿನಿಂದಲೂ ಇದೆ. ಉಪ್ಪು ತುಂಬಾ ದುಬಾರಿಯಾಗಿದ್ದ ಕಾಲವದು. ಆ ಸಮಯದಲ್ಲಿ ಲಭ್ಯವಿರುವ ಇತರ ಮಸಾಲೆಗಳಿಗಿಂತ ಇದು ಹೆಚ್ಚು ಮೌಲ್ಯಯುತವಾಗಿತ್ತು. ಆದ್ದರಿಂದ ಸ್ವಲ್ಪ ಉಪ್ಪು ಚೆಲ್ಲುವುದು ದೊಡ್ಡ ಹಣದ ವ್ಯರ್ಥ ಎಂದು ಪರಿಗಣಿಸಲಾಗುತ್ತಿತ್ತು. ಆ ಸಮಯದಲ್ಲಿ ಹಣವನ್ನು ವ್ಯರ್ಥ ಮಾಡುವುದು ತುಂಬಾ ದುರಾದೃಷ್ಟವೆಂದು ಪರಿಗಣಿಸಲ್ಪಟ್ಟಿತು ಏಕೆಂದರೆ ನೀವು ಅದನ್ನು ಗೌರವಿಸದೇ, ದುರಾದೃಷ್ಟವನ್ನು ಪ್ರಚೋದಿಸುತ್ತೀರಿ ಎಂದು ಚಿತ್ರಿಸುತ್ತದೆ. ಇದಕ್ಕಾಗಿ ನೀವು ಹೊಂದಿದ್ದ ಪ್ರತಿಯೊಂದು ವಸ್ತುಗಳನ್ನು ನೀವು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು.

ಬ್ರಿಟಿಷ್ ಸಂಸ್ಕೃತಿಯಲ್ಲಿನ ಮೂಢನಂಬಿಕೆಯ ಪ್ರಕಾರ ಯಾರಾದರೂ ಉಪ್ಪನ್ನು ಚೆಲ್ಲಿದರೆ ಆ ವ್ಯಕ್ತಿ ದೆವ್ವಗಳನ್ನು ಈ ಜಗತ್ತಿಗೆ ಆಹ್ವಾನಿಸುತ್ತಾನೆ ಎಂದು ಹೇಳಲಾಗುತ್ತದೆ. ಉಪ್ಪನ್ನು ಚೆಲ್ಲಿದವನನ್ನು ಆ ರಾಕ್ಷಸ ಸದಾ ಕಾಡುತ್ತದೆ. ಈ ದುರಾದೃಷ್ಟವನ್ನು ತೊಡೆದುಹಾಕಲು ಭುಜದ ಹಿಂದೆ ಸ್ವಲ್ಪ ಉಪ್ಪನ್ನು ಎಸೆಯಬೇಕು. ಉಪ್ಪು ಚೆಲ್ಲುವ ಮೂಢನಂಬಿಕೆಯ ಬಗ್ಗೆ ವಿಭಿನ್ನ ಸಂಸ್ಕೃತಿಗಳು ವಿಭಿನ್ನ ಅರ್ಥಗಳನ್ನು ನೀಡುತ್ತವೆ. ಕೆಲವೊಂದು ಮೂಢ ನಂಬಿಕೆಯ ಪ್ರಕಾರ ನೀವು ಉಪ್ಪನ್ನು ಚೆಲ್ಲಿದರೆ ದೊಡ್ಡ ಜಗಳವಾಗುತ್ತದೆ ಅಥವಾ ಸ್ನೇಹದ ಅಂತ್ಯವೂ ಆಗುತ್ತದೆ ಎನ್ನುತ್ತಾರೆ. ಕೆಲವೊಂದು ಮೂಢನಂಬಿಕೆ ಪ್ರಕಾರ ಉಪ್ಪುಚೆಲ್ಲಿದ ವ್ಯಕ್ತಿಯನ್ನು ದುರಾದೃಷ್ಟವು ಆವರಿಸುತ್ತದೆಂದು ಹೇಳಲಾಗುತ್ತದೆ. ಕೆಲವರು ಎಷ್ಟು ಉಪ್ಪು ಚೆಲ್ಲಿರುತ್ತಾರೋ ಅಷ್ಟು ಜೀವನದಲ್ಲಿ ಕಣ್ಣೀರು ಹಾಕಬೇಕಾಗುತ್ತದೆ ಎನ್ನುತ್ತಾರೆ.

ಜ್ಯೋತಿಷ್ಯ ಉಪ್ಪು ಚೆಲ್ಲುವುದರ ಬಗ್ಗೆ ಏನು ಹೇಳುತ್ತೆ..?

ಜ್ಯೋತಿಷ್ಯದ ಪ್ರಕಾರ ಆಕಸ್ಮಿಕವಾಗಿ ಉಪ್ಪು ಕೈಜಾರಿ ಬೀಳುವುದು ಎಂದರೆ ಶುಕ್ರ ಮತ್ತು ಚಂದ್ರ ನವಗ್ರಹಗಳು ಮುಂದಿನ ದಿನಗಳಲ್ಲಿ ವ್ಯಕ್ತಿಯ ಜೀವನದಲ್ಲಿ ತೊಂದರೆಗಳನ್ನು ತರುತ್ತವೆ ಎಂದರ್ಥ. ಜೀವನದಲ್ಲಿ ಭಯಾನಕ ಘಟನೆಗಳು ಇರಬಹುದು. ಮನಸ್ಸಿನಲ್ಲಿ ಒತ್ತಡ ಮತ್ತು ನೋವು ಇರುತ್ತದೆ ಎನ್ನಲಾಗುತ್ತದೆ. ಆಕಸ್ಮಿಕವಾಗಿ ಉಪ್ಪು ಬಿದ್ದರೆ ಏನು ಮಾಡಬೇಕು ಎನ್ನುವುದನ್ನೂ ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಅದೇನೆಂದರೆ

  • ಶ್ರೀಂ ಚಂದ್ರಾಯ ಕ್ಷಪಾಕರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿ.
  • ಹಸುವಿಗೆ ಬಿಳಿ ಬಣ್ಣದ ಆಹಾರವನ್ನು ನೀಡಬೇಕು. ಇದು ಚಂದ್ರ ಗ್ರಹ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಶುಕ್ರನನ್ನು ಸಮಾಧಾನಗೊಳಿಸಲು ‘ಓಂ ದ್ರಂ ದ್ರೀಂ ದ್ರೋಂ ಸಹ ಶುಕ್ರಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಿ.
    *ಹಸುವಿಗೆ ಸ್ವಲ್ಪ ಹಸಿರು ಹುಲ್ಲು ನೀಡಿ. ಇದು ಶುಕ್ರ ಗ್ರಹ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

Leave a Comment