ಮನೆ ಮುಂದೆ ‘ ತುಳಸಿ ಕಟ್ಟೆ’ ಹೇಗಿರಬೇಕು!?
ತುಳಸಿ ಗಿಡ ಬಾಡಿದರೆ ಏನರ್ಥ!?

ಪ್ರತಿಯೊಬ್ಬರ ಮನೆಗೊಂದು ತುಳಸಿ ಗಿಡ ಇರಲೇಬೇಕು. ಭಾರತೀಯ ಪರಂಪರೆಯಲ್ಲಿ ನಾವು ತುಳಸಿ ಆರಾಧನೆ ಮಾಡೋಷ್ಟು ಸಾಕಷ್ಟು ಪ್ರಯೋಜನಗಳನ್ನ ಕೊಂಡುಕೊಂಡಿದ್ದೇವೆ. ಯಾವ ತುಳಸಿ ಅಂದರೆ. ರಾಮ ತುಳಸಿ ಅಥವಾ ಕೃಷ್ಣ ತುಳಸಿಯೋ.ಕೃಷ್ಣನಿಗೆ ತುಳಸಿ ಎಂದರೆ ಪ್ರೀತಿ ರಾಮನಿಗೂ ತುಳಸೆ ಬೇಕೇ ಬೇಕು ಯಾವುದೇ ಪೂಜಾ ಪುನಸ್ಕಾರ ಮಾಡಿದರ ಸಹಿತ. ಕೊನೆಗೆ ಬ್ರಹ್ಮರ್ಚನೆಗೆ ಕೃಷ್ಣಾರ್ಪಣ ಮಸ್ತು. ಶಿವಾರ್ಪಣಮಸ್ತು. ಯಾವುದೇ ಹೇಳಿದರು ಸಹಿತವಾಗಿ. ತುಳಸಿ ದಳವನ್ನು ಕೈಯಲ್ಲಿಟ್ಟುಕೊಂಡು. ನಾವು ನೀರನ್ನ ಎರೆದಾಗ ಆಗ ಸಂಪೂರ್ಣವಾಗುತ್ತದೆ.

ಆಗಿದ್ದಾಗ ತುಳಸಿ ನಮಗೆ ಎಷ್ಟು ಪ್ರಾಮುಖ್ಯತೆ. ಕೇವಲ ಪೂಜೆ ಮಾತ್ರ ಅಲ್ಲ. ದೇಹದ ಆರೋಗ್ಯಕ್ಕೂ ಸಹಿತವಾಗಿ ತುಳಸಿ ಬೇಕಾಗುತ್ತದೆ. ಆದ್ದರಿಂದ ಮನೆಗೊಂದು ತುಳಸಿ ಕಟ್ಟೆ ಮಾಡಿಕೊಳ್ಳಬೇಕು. ಆ ಕಟ್ಟೆಯಲ್ಲಿ ತುಳಸಿ ಗಿಡವನ್ನು ನೆಡಬೇಕು. ತುಳಸಿ ಕಟ್ಟೆ ಮನೆಯ ಮುಂಭಾಗದಲ್ಲಿ ಇರಬೇಕು ಎಲ್ಲಿ ಅಂದರೆ. ಪೂರ್ವ ಭಾಗದಲ್ಲಿ ಇರಬೇಕು. ನಾವು ಮನೆಯಿಂದ ಹೊರಗೆ ಬರುವಾಗ ಅಥವಾ ಉತ್ತರ ಭಾಗದಲ್ಲಿ ಇರಬೇಕು. ಅಥವಾ ಈಶಾನ್ಯ ಭಾಗದಲ್ಲಿ ಇರಬೇಕು. ತುಳಸಿ ಕಟ್ಟೆಯಲ್ಲಿ ತುಳಸಿ ಗಿಡವು ಯಾವಾಗಲೂ ನಳಿ ನಳಿಸುತ್ತಾ ಇರಬೇಕು.

ತುಳಸಿ ಗಿಡವನ್ನು ನೆಡುವ ಮುಂಚೆ ತುಳಸಿ ಬಡ್ಡೆಯಲ್ಲಿ ಒಂದು ನಾಣ್ಯ ಹಾಕಬೇಕು. ಆನಂತರ ಮಣ್ಣನ್ನು ಹಾಕಿ ಗಿಡವನ್ನು ನೆಡಬೇಕು. ಯಾಕೆ ಗೊತ್ತಾ. ತುಳಸಿ ಇಂದಲು ನಾವು ಲಕ್ಷ್ಮಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಲಕ್ಷ್ಮಿ ದೇವಿ ನಮ್ಮನೆಗೆ ಬಂದಾಗ ಮೊದಲು ಯಾವುದನ್ನು ತುಳಸಿಯನ್ನ ದರ್ಶನ ಮಾಡುತ್ತಾಳೆ. ಅಲ್ಲಿ ತುಳಸಿ ಇದೆ ಅಂದರೆ. ಇವರು ಮನೆಯಲ್ಲಿ ಯೋಗ್ಯರಾಗಿದ್ದಾರೆ. ತುಳಸಿ ಪೂಜೆ ಮಾಡ್ತಾರೆ. ಜೊತೆಯಲ್ಲಿ ಲಕ್ಷ್ಮಿಯನ್ನು ಆರಾಧನೆ ಮಾಡುತ್ತಾರೆ. ಇಂಥವರ ಮನೆಯನ್ನು ನಾವು ಪ್ರವೇಶ ಮಾಡೋಣ ಅನ್ನೋ ಭಾವನೆ ಬರುತ್ತೆ.
ಅಂದರೆ ತುಳಸಿ ಕಟ್ಟಿ ಹೇಗೆ ಇರಬೇಕು?

ತುಳಸಿ ಕಟ್ಟೆ ಚೌಕ ವಾಗಿರಬೇಕು. ನಾವು ಹೊರಗೆ ಬರುವಾಗ ಸುತ್ತಲೂ ಕಟ್ಟೆ ಹರವು ಆಗಿರಬೇಕು. ಜೊತೆಯಲ್ಲಿ ಸದಾ ಕಾಲ ತುಳಸಿ ಗಿಡ. ಜೊತೆಯಲ್ಲಿ ಅರಳಿಕೊಂಡಿರಬೇಕು ಇದ್ದಲ್ಲಿ ಯಾವಾಗಲೂ ಮೇಲ್ಮುಖವಾಗಿರಬೇಕು ತುಳಸಿ ಬಗ್ಗಿರಬಾರದು, ಅಡ್ಡವಾಗಿರಬಾರದು. ಸುಂದರವಾಗಿ ಅರಳಿಕೊಂಡಿರಬೇಕು. ಅಂತಹ ತುಳಸಿ ಕಟ್ಟೆಯ ಗಿಡ ಬಹಳ ಪ್ರಶಿಷ್ಯವಾದದ್ದು. ತುಳಸಿ ಕಟ್ಟೆಯಲ್ಲಿ ಅದು ಕದರೂ ಬರದ ಹಾಗೆ ನೋಡಿಕೊಳ್ಳಬೇಕು ಅಥವಾ ಒಣಗದ ಹಾಗೆ ನೋಡಿಕೊಳ್ಳಬೇಕು.

ತುಳಸಿ ಕಟ್ಟೆ ಒಣಗಿಹದಲ್ಲಿ. ಆಗ ಮನೆಗೆ ಸಂಕಟ ಆಪತ್ತು. ಋಣಾತ್ಮಕ ಶಕ್ತಿ ಇದೆಲ್ಲ ಸ್ಪಷ್ಟವಾಗಿ ಗೋಚರವಾಗುತ್ತದೆ. ನಮ್ಮ ಮನೆಗೆ ಯಾರಾದರೂ ತೊಂದರೆ ಮಾಡಿದ್ದರೆ ಅಥವಾ ಮಾಟ ಮಂತ್ರ ಮಾಡಿದರೆ. ಕೆಲವೊಂದು ಸೂಚನೆ ಕೊಡುತ್ತದೆ. ತುಳಸಿ ಗಿಡದ ಎಲೆಗಳು ಬಾಡಿರುತ್ತದೆ ಅಥವಾ ತುಳಸಿ ಗಿಡ ಬತ್ತೆ ಹೋಗುತ್ತದೆ. ತುಳಸಿ ಗಿಡದಲ್ಲಿ ಸಾರ ಇರುವುದಿಲ್ಲ. ತುಳಸಿ ಗಿಡ ಒಣಗಿ ಕರಕಲಾಗಿ ಹೋಗುತ್ತದೆ. ನಮ್ಮ ಮನೆಗೆ ಆಪತ್ತು ಬಂದಾಗ ಸೂಚನೆ ಕೊಡುವಂತದ್ದು.

ತುಳಸಿ ಗಿಡವನ್ನು ನಾವು ಆರಾಧನೆ ಮಾಡಬೇಕು ಯಾವ ರೂಪದಲ್ಲಿ ಅಂದರೆ ಲಕ್ಷ್ಮಿಯ ರೂಪದಲ್ಲಿ. ತುಳಸಿಯು ಶ್ರೀಕೃಷ್ಣನ ಹೆಂಡತಿ. ಗೊತ್ತಾ ನಿಮಗೆ ತುಳಸಿ ಶ್ರೀಕೃಷ್ಣನನ್ನು ಪ್ರೀತಿಸಿದ್ದಾಳೆ. ಶ್ರೀಕೃಷ್ಣನ ತುಳಸಿಯನ್ನ ಪ್ರೀತಿಸಿದ್ದ.
ತುಳಸಿಯ ನಿಜವಾದ ಹೆಸರು. ‘ಪುರಂದಾಳು’ ಅನ್ನುವಂತಹದ್ದು. ಅವಳ ಗಂಡನ ಹೆಸರು ಜಲ್ಲಂದರಾಳು ಅನ್ನೋ ರಾಕ್ಷಸ. ತುಂಬಾ ವಿಶೇಷವಾಗಿ ಪತ್ತೆ ರತೆ ಇರುವವರೆಗೆ ಜಲ್ಲಂದರಾಳು. ಇಲ್ಲದ ಸಂದರ್ಭದಲ್ಲಿ ಯುದ್ಧಕ್ಕೆ ಹೋಗಿರುವ ಸಂದರ್ಭದಲ್ಲಿ. ಜಲಂಧರಾಳು ಸ್ವರೂಪದಲ್ಲಿ ಶ್ರೀ ಕೃಷ್ಣನ ಪುರಂದಾಳು ಮನೆಗೋಗಿ. ಪುರಂದಳಿಂದ ಪೂಜೆಯನ್ನು ಕೈಗೊಂಡ. ಆಗ ಕೋಪ ಬಂದು ಕೃಷ್ಣನಿಗೆ ಶಾಪ ಕೊಟ್ಟಳು. ದಂಡಕ್ಕಿ ನದಿಯಲ್ಲಿ ನೀನು ಸಾಲಿಗ್ರಾಮವಾಗಿ ಬಿಡು ಅಂತ ಶಾಪ ಕೊಟ್ಟಳು.

ತುಳಸಿ ಗಿಡವನ್ನು ಸಾಮಾನ್ಯವಾಗಿ ಒಳಗೆ ಇಡುವುದಿಲ್ಲ ಅದನ್ನು ಹೊರಗೆ ಇಟ್ಟು ಪೂಜೆ ಮಾಡುತ್ತಾರೆ. ಅದರಲ್ಲಿ ಕಲ್ಲು ಇಡುವಂತ ಪದ್ಧತಿ ಅದರಲ್ಲಿ ಉಂಡೆ ಇಡುವಂತಹ ಪದ್ಧತಿ ಅದರಲ್ಲಿ ಪ್ರತಿನಿತ್ಯ ಒಂದೊಂದು ಕಾಯನನ್ನು ಹಾಕಿ ಇಡುವಂತದ್ದು. ಅವರವರ ಮನೆಗೆ ಅವರವರ ಭಕ್ತಿ ಸೇರುವಂತಹ ಎದ್ಭಾವಂ ಅಥವಾ ತದ್ಭವತಿ ಎಂಬ ಭಾವನೆಯನ್ನು ಸೂಚಿಸುತ್ತದೆ.

ಹಿಂದುಗಳ ಅತಿ ಅವಶ್ಯಕವಾಗಿರುತ್ತದೆ. ತುಳಸಿ ಕಟ್ಟೆ ಅಥವಾ ತುಳಸಿ ಗಿಡ ಕಾರ್ತಿಕ ಮಾಸ ಸುಕ್ಲ ಪಕ್ಷದಂದು. ಉತ್ತಾನ ದ್ವಾದಶಿ. ದಿನದಂದು ತುಳಸಿ ಗಿಡಕ್ಕೆ ಮದುವೆ ಮಾಡು ಅಂತ ಪದ್ಧತಿ ಇರುವಂತದ್ದು. ಅದಕ್ಕೆ ತುಳಸಿ ಲಗ್ನ ಎಂದು ವಿಶೇಷವಾಗಿ ಹೇಳುತ್ತಾರೆ. ತುಳಸಿ ಕಟ್ಟೆ ಅಥವಾ ತುಳಸಿ ಗಿಡ.ತುಳಸಿ ಗಿಡದ ಮುಂದೆ ನೆಲವನ್ನು ಸಾರೀಸಿ . ರಂಗೋಲಿ ಬಿಟ್ಟು ಕುಂಕುಮ ವಿಭೂತಿ ಹಚ್ಚಿ ಪೂಜೆ ಮಾಡುವುದರಿಂದ ಸುಮಂಗಲಿ ತನ ಇರುತ್ತದೆ. ತುಳಸಿ ಗಿಡದಲ್ಲಿ ಅಪೂರ್ವವಾದಂತಹ ಶಕ್ತಿ ಮನೆಯಲ್ಲಿರುವಂತಹ ಧನಾತ್ಮಕ ಶಕ್ತಿಯನ್ನು ಹೊರಡಿಸುತ್ತದೆ.

ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಅಥವಾ ಉದಯ ಕಾಲದಲ್ಲಿ ಯಾರು ತುಳಸಿ ಗಿಡಕ್ಕೆ ಪೂಜೆಯನ್ನು ಮಾಡುತ್ತರೊ ಅಂಥವರ ಮನೆಯಲ್ಲಿ ಯಾವುದೇ ರೀತಿ ಆಪತ್ತು ಬರುವುದಿಲ್ಲ. ಅಪಘಾತಗಳು ಸಂಭವಿಸುವುದಿಲ್ಲ. ಅಥವಾ ಅನಿಷ್ಟಗಳು ಉಂಟಾಗುವುದಿಲ್ಲ.ಯಾವುದೇ ರೀತಿಯ ತೊಂದರೆ ತಪತ್ರೆಗಳು ಇರುವುದಿಲ್ಲ. ಅಂಥವರಿಗೆ ಲಕ್ಷ್ಮಿ ಸಾನಿಧ್ಯ ಸದಾ ಕಾಲ ಇರುತ್ತದೆ. ಸದಕಲ ಸೋಮಂಗಲಿತ್ವ ಇರುತ್ತದೆ. ಸದಾಕಾಲ ದಾಂಪತ್ಯ ಜೀವನದಲ್ಲಿ ಸುಖ ಇರುತ್ತದೆ. ಅನನ್ಯ ದಾಂಪತ್ಯ ಜೀವನದಲ್ಲಿ ಕುಟುಂಬ ವೃದ್ಧಿಯಾಗುತ್ತದೆ.

ಒಮ್ಮೆ ಯಾರ ಮನೆಯಲ್ಲಿ ತುಳಸಿ ಕಟ್ಟೆ ಇಲ್ಲವೋ ಅಂಥವರು ಮನೆಯಲ್ಲಿ ನಾಸ್ತಿಕರಿಲ್ಲದಿದ್ದರೆ ಆಸ್ತಿಕರಾಗಿದ್ದರೆ. ಯಾರ ಮನೆಯಲ್ಲಿ ತುಳಸಿ ಕಟ್ಟೆ ಇರುವುದಿಲ್ಲವೋ. ಒಂದು ತುಳಸಿ ಕಟ್ಟೆಯನ್ನು ಮಾಡಿಕೊಳ್ಳಿ. ತುಳಸಿಯನ್ನು ನೆಟ್ಟುಕೊಳ್ಳಿ ಪ್ರತಿನಿತ್ಯ ತುಳಸಿ ಆರಾಧನೆ ಮಾಡುತ್ತಾ ಬನ್ನಿ ಅದರಿಂದ ನಿಮಗೂ ಸಹಿತವಾಗಿ ಸಕಲ ಕ್ಷಮೆಗಳು ಉಂಟಾಗುತ್ತವೆ.ಜೊತೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಋಣಾತ್ಮಕ ಶಕ್ತಿ ಕಡಿಮೆ ಆಗ್ತಾ ಹೋಗುತ್ತದೆ. ಸಾಲಭಾದೆ ತೀರಿಹೋಗುತ್ತದೆ ಸಾಕಷ್ಟು ಸುಖವನ್ನು ಹೊಂದುತ್ತೀರಿ. ತುಳಸಿಂದ ಆಗುವಂತಹದ್ದು..

ಇನ್ನು ತುಳಸಿ ಆರೋಗ್ಯದ ದೃಷ್ಟಿಯಲ್ಲಿ: ಪ್ರತಿ ದಿವ್ಸವು ನಾವು ಒಂದು ತುಳಸಿ ಎಲೆಯನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಜಗಿಯುವಾಗ ಜಗಿದು ರಸವನ್ನು ನುಂಗಿದಾಗ ಅದೆಷ್ಟೋ ರೋಗಗಳು ನಮಗೆ ಪರಿಹಾರ ಆಗುತ್ತಾ ಸಾಧ್ಯತೆ ಇರುತ್ತದೆ. ನಮಗೆ ನೆಗಡಿ ಆದಾಗ ಒಂದು ತುಳಸಿ ದಳವನ್ನು ತೆಗೆದುಕೊಂಡು. ಅದನ್ನು ಉಜ್ಜಿ ಮೂಗಿನ ಒಳ್ಳೆಗಳಲ್ಲಿ ಇರಿಸಿ ಆಗ್ರಹಿಸಿ. ತುಳಸಿ ರಸ ಏನಿದೆಯೋ ಮೂಗಿನ ಒಳ್ಳೆಗಳ ಮೂಲಕ ಬ್ರಹ್ಮ ರಂಧ್ರವನ್ನು ಸೇರುತ್ತದೆ. ಆಗ ನಿಮ್ಮ ದೇಹದಲ್ಲಿರುವಂತಹ ಋಣಾತ್ಮಕ ಶಕ್ತಿಗಳನ್ನು ಹೊರಟುಹೋಗುತ್ತದೆ.

ಏನಾದರೂ ಗೋಮೂತ್ರ ಸಿಕ್ಕಿಲ್ಲ ಅಂದರೆ ಗಂಗಾಜಲ ಮನೆಯಲ್ಲಿ ಇಲ್ಲ. ಒಂದು ಸ್ವಲ್ಪ ನೀರಿಗೆ ಒಂದು ತುಳಸಿ ದಳವನ್ನು ಹಾಕಿ ತದನಂತರ ಮನೆಯಲ್ಲಿ ಪ್ರೋಕ್ಷಣೆ ಮಾಡುವುದರಿಂದ ಮನೆಯ ಸ್ಥಾನ ಶುದ್ದಿ ಆಗುತ್ತದೆ. ಮನಸ್ಸು ಶುದ್ದಿ ಮನೆಯ ಶುದ್ದಿ ಮಾಡುವಂತ ಒಳ್ಳೆ ಅವಕಾಶವಾಗಿರುತ್ತದೆ.

Leave a Comment