ಹಲಸಿನ ಹಣ್ಣು ಚಳಿಗಾಲದಲ್ಲಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ!

ಆರೋಗ್ಯ ಉತ್ತಮವಾಗಿರಬೇಕು ಎಂದರೆ ಉತ್ತಮ ಆಹಾರವನ್ನು ಸೇವಿಸಬೇಕು. ಸರಿಯಾದ ರೀತಿಯ ಆಹಾರ ಸೇವನೆ ಪ್ರತಿ ವ್ಯಕ್ತಿಯ ಆರೋಗ್ಯದ ಗುಟ್ಟು. ಕೆಲವರು ಮಾಂಸದ ಸೇವನೆ ಮೂಲಕ ದೇಹಕ್ಕೆ ಬೇಕಾದ ವಿವಿಧ ರೀತಿಯ ಪ್ರೊಟೀನ್ ಪೋಷಕಾಂಶಗಳನ್ನು ಪಡೆಯುತ್ತಾರೆ. ಅದರೇ ಹೆಚ್ಚು ಮಾಂಸ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆ ಆಗಬಹುದು.ಇದರ ಬದಲು ಹಲಸಿನ ಹಣ್ಣನ್ನು ಬಳಸಬಹುದು. ಹಲಸಿನ ಹಣ್ಣಿನಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ವಿಟಮಿನ್ಸ್ ಗಳು ಅಡಗಿದೆ. ಅದರೆ ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.

ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರಿತಿಯ ಪೈಥೋ ಕೆಮಿಕಲ್ ಗಳು ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ. ಹಲಸಿನ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ಕೆಲವು ಕ್ಯಾನ್ಸರ್ ನ್ನು ಇದು ತಡೆಯುವುದು. ಹಲಸಿನ ಹಣ್ಣಿನಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಎಂದು ಅಧ್ಯಯನವು ಹೇಳಿವೆ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ, ಅನ್ನನಾಳದಂತಹ ಕ್ಯಾನ್ಸರ್ ನ್ನು ತಡೆಯುವುದು.

ಬೊಜ್ಜು ದೇಹಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಹಲಸಿನ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು.

ನೂರು ಗ್ರಾಂ ಹಲಸಿನ ಹಣ್ಣಿನಲ್ಲಿ 3.6 ಗ್ರಾಂ ಆಹಾರದ ನಾರಿನಾಂಶವಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಅದು ಹೊಟ್ಟೆ ನೋವು ಉಂಟು ಮಾಡದು ಮತ್ತು ಕರುಳಿನ ಕ್ರಿಯೆ ಸರಾಗವಾಗಿಸುವುದು. ದೊಡ್ಡ ಕರುಳಿನ ಕ್ಯಾನ್ಸರ್ ಕಾರಕ ರಾಸಾಯನಿಕವನ್ನು ಇದು ತೆಗೆದು ಕರಳನ್ನು ರಕ್ಷಿಸುವುದು.

ಹಲಸಿನ ಹಣ್ಣು ತುಂಬಾ ಸಿಹಿಯಾಗಿ ಇದ್ದರೂ ಇದನ್ನು ಮಧುಮೇಹಿಗಳು ತಿಂದರೂ ತುಂಬಾ ಸುರಕ್ಷಿತವಾಗಿರುವುದು. ಯಾಕೆಂದರೆ ಇದರಲ್ಲಿನ ಸಕ್ಕರೆಯು ರಕ್ತನಾಳದಲ್ಲಿ ತುಂಬಾ ನಿಧಾನವಾಗಿ ಹೀರಿಕೊಲ್ಳುವುದು. ಹೀಗಾಗಿ ಮಧುಮೇಹಿಗಳು ಈ ಹಣ್ಣನ್ನು ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು. ಎರಡೂ ರೀತಿಯ ಮಧುಮೇಹಿಗಳಲ್ಲಿ ಇದು ಗ್ಲೂಕೋಸ್ ಸಹಿಷ್ಣತೆಯನ್ನು ಹೆಚ್ಚಿಸುವುದು.

Leave a Comment