ಗೋಮತಿ ಚಕ್ರಗಳ ವಿಶೇಷತೆ ಯಾವ ವಾರ ಮನೆಗೆ ತಂದರೆ ಶುಭ, ಎಷ್ಟು ಚಕ್ರಗಳನ್ನು ಮನೆಯಲ್ಲಿಡಬೇಕು!

ಜ್ಯೋತಿಷಿಗಳ ಪ್ರಕಾರ ಗೋಮತಿ ಚಕ್ರವನ್ನು ಇಟ್ಟುಕೊಳ್ಳುವ ಮನೆ ಎಲ್ಲಾ ತೊಂದರೆಗಳಿಂದ ದೂರವಿರುತ್ತದೆ. ಇದು ಎಲ್ಲಾ ನಕಾರಾತ್ಮಕತೆ, ಅನಾರೋಗ್ಯ ಮತ್ತು ದುಃಖವನ್ನು ತೆಗೆದುಹಾಕಿ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ಗೋಮತಿ ಚಕ್ರವು ಚಿಪ್ಪನ್ನು ಹೋಲುವಂತಹ ಕಲ್ಲು ಇದು, ಗೋಮತಿ ನದಿಯಲ್ಲಿ ಮಾತ್ರವೇ ಕಂಡುಬರುತ್ತದೆ. ಸಾಮಾನ್ಯವಾಗಿ ಇದನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಗೋಮತಿ ಚಕ್ರವನ್ನು ಸುದರ್ಶನ ಚಕ್ರವೆಂದೂ ಕರೆಯುತ್ತಾರೆ. ಇದು ಶ್ರೀಕೃಷ್ಣನ ಶಕ್ತಿಶಾಲಿ ಅಸ್ತ್ರವೆಂಬ ನಂಬಿಕೆ ಇದೆ. ಇದನ್ನು ಅತ್ಯಂತ ಶಕ್ತಿಶಾಲಿಯೆಂದೂ ಪರಿಗಣಿಸಲಾಗುತ್ತದೆ.

ವಿಶೇಷವಾಗಿ ಈ ಕಲ್ಲು ನಂಬಲಾಗದಿರುವಂತಹ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಈ ಕಲ್ಲನ್ನು ಪೂಜೆಯ ಹೊರತಾಗಿ ತಂತ್ರ ಮಂತ್ರಗಳಲ್ಲೂ ಬಳಸಲಾಗುತ್ತದೆ. ಈ ಗೋಮತಿ ಚಕ್ರವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲಾ ಸಮಸ್ಯೆಗಳನ್ನು ತೊಡೆದು ಹಾಕಬಹುದುದೆಂದು ಹೇಳಲಾಗುತ್ತದೆ. ಈ ಕಲ್ಲಿನ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಈ ಗೋಮಾತಿ ಚಕ್ರವು ಉತ್ತರ ಪ್ರದೇಶದಲ್ಲಿ ಹರಿಯುವಂತಹ ಗೋಮಾತಿ ಎಂಬ ನದಿಯಲ್ಲಿ ಸಿಗುತ್ತದೆ. ಹಾಗಾಗಿ ಇವುಗಳಿಗೆ ಗೋಮಾತಿ ಚಕ್ರ ಎಂದು ಹೆಸರು ಬಂದಿದೆ. ಈ ಗೋಮಾತಿ ಚಕ್ರವನ್ನು ವಿಷ್ಣುವಿನ ಸುದರ್ಶನ ಚಕ್ರಕ್ಕೆ ಹೋಲಿಸುತ್ತೀವಿ ಹಾಗು ವಿಷ್ಣುವಿನ ಸ್ವರೂಪ ಎಂದು ಕರೆಯುತ್ತೇವೆ. ಹಾಗಾಗಿ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ವಸ್ತುಗಳು ಇವು. ಈ ಗೋಮಾತಿ ಚಕ್ರವು ಲಕ್ಷ್ಮಿಯನ್ನು ಧನವನ್ನು ಆಕರ್ಷಣೆ ಮಾಡುವ ಶಕ್ತಿಯನ್ನು ಒಳಗೊಂಡಿವೆ. ಈ ಗೋಮಾತಿ ಚಕ್ರ ತೆಗೆದುಕೊಂಡು ಬಂದು ಹಾಗೆ ಮನೆಯಲ್ಲಿ ಇಡುವಂತಿಲ್ಲ.

ಮೊದಲು ಒಂದು ಬೌಲ್ ನಲ್ಲಿ ನೀರು ತೆಗೆದುಕೊಂಡು ಬಂದು ನೀರಿಗೆ ಅರಿಶಿನ ಕುಂಕುಮ ಹಾಗು ಗಂಗಾಜಲವನ್ನು ಹಾಕಬೇಕು. ಇದರಲ್ಲಿ ಗೋಮಾತಿ ಚಕ್ರ ಇಟ್ಟು ಒಂದು ದಿನಪೂರ್ತಿ ಇಡಬೇಕು. ಮಾರನೇ ದಿನ ಇದನ್ನು ಬಟ್ಟೆಯಲ್ಲಿ ವರೆಸಿಕೊಳ್ಳಬೇಕು. ಗೋಮಾತಿ ಚಕ್ರ ಇಡುವುದಕ್ಕೆ ಸಪರೇಟ್ ಆಗಿ ಒಂದು ಪ್ಲೇಟ್ ಅನ್ನು ಇಡಬೇಕು. ನಂತರ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಬೇಕು.

ಇನ್ನು ಶುಕ್ರವಾರ ಅಥವಾ ಹುಣ್ಣಿಮೆ ದಿನ ಗೋಮಾತಿ ಚಕ್ರವನ್ನು ಮನೆಗೆ ತಂದರೆ ತುಂಬಾನೇ ಒಳ್ಳೆಯದು ಆಗುತ್ತದೆ. ಗೋಮಾತಿ ಚಕ್ರ ಇಡುವ ಪ್ಲೇಟ್ ಮೇಲೆ ಸ್ವಲ್ಪ ಅಕ್ಕಿ ಹಾಕಿ ಅಷ್ಟದಳ ಪದ್ಮ ಬರೆದು ಅರಿಶಿನ ಕುಂಕುಮ ಹಚ್ಚಿ ಗೋಮಾತಿ ಚಕ್ರವನ್ನು ಇಡಬೇಕು. ನಂತರ ಮಧ್ಯದಲ್ಲಿ ಅಕ್ಷತೆಯನ್ನು ಹಾಕಬೇಕು. ನಂತರ ಲಕ್ಷ್ಮಿ ಅಷ್ಟೋತರ ಹೇಳಿಕೊಂಡು ಅರ್ಚನೆ ಮಾಡಿ. ಆದಷ್ಟು ಮಲ್ಲಿಗೆ ಸಂಪಿಗೆಯನ್ನು ಬಳಸಿ. ಇದೆ ರೀತಿ ಪ್ರತಿ ಶುಕ್ರವಾರ ಪೂಜೆಯನ್ನು ಮಾಡಿಕೊಳ್ಳಬೇಕು.

ಗೋಮಾತಿ ಚಕ್ರ ಬಳಸಿಕೊಂಡು ಒಳ್ಳೆಯ ಪರಿಹಾರವನ್ನು ಮಾಡಿಕೊಳ್ಳಬಹುದು. ಒಂದು ವೇಳೆ ಸಾಲ ಹೆಚ್ಚಾಗುತ್ತಾ ಬಂದರೆ ಗೋಮಾತಿ ಚಕ್ರವನ್ನು ತೆಗೆದುಕೊಂಡು ಪೂಜೆ ಮಾಡುತ್ತ ಬನ್ನಿ. ನಿಮಗೆ ಒಳ್ಳೆಯ ಫಲಗಳು ಲಭಿಸುತ್ತವೆ. ಗೋಮಾತಿ ಚಕ್ರ ಪ್ರತಿಷ್ಟಾಪನೆ ಮಾಡಿದ ನಂತರ ದೂಪಾ ದೀಪ ನೈವೇದ್ಯ ಮಾಡಬೇಕು. ಇನ್ನು ಮನೆಯಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಗೋಮಾತಿ ಚಕ್ರವನ್ನು ತೆಗೆದುಕೊಂಡು ಬನ್ನಿ. ಅದರೆ ಕೆಲವು ಪರಿಹಾರಗಳಿಗೆ ಇಷ್ಟಿಷ್ಟೇ ಗೋಮಾತಿ ಚಕ್ರ ಬಳಸಬೇಕು ಎಂದು ಹೇಳುತ್ತಾರೆ.

Leave a Comment