ಪೂಜೆಯ ತೆಂಗಿನಕಾಯಿ ಕೆಟ್ಟುಹೋದಲ್ಲಿ!ಜೋಡಿ ತಿರುಳಿದ್ದಲ್ಲಿ, ಮೊಳಕೆ ಹೂವು ಬಂದಲ್ಲಿ ಶುಭವೋ ಅಶುಭವೋ!
ಪೂಜೆಗೆ ಉಪಯೋಗಿಸುವ ತೆಂಗಿನಕಾಯಿ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ. ತೆಂಗಿನಕಾಯಿ ಜುಟ್ಟಿನ ಕೆಳಗೆ ಮೂರು ಕಣ್ಣುಗಳು ಇರುತ್ತವೆ. ಅದು ಪರಮೇಶ್ವರನ ಸ್ವರೂಪ. ಹಾಗಾಗಿ ಪರಮೇಶ್ವರನ ಅನುಗ್ರಹ ಸಿಗಬೇಕು ಎಂದರೆ ಯಾವುದಾದರು ಚಿಕ್ಕ ಪೂಜೆ ಮಾಡಿದರು ತೆಂಗಿನಕಾಯಿ ಒಡೆದು ಪೂಜೆ ಮಾಡಿದರೆ ಪರಮೇಶ್ವರನ ಅನುಗ್ರಹ ಯಾವಾಗಲು ಇರುತ್ತದೆ.
ಪೂಜೆ ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಭಯ ಪಡುತ್ತಾರೆ. ಅದರೆ ತೆಂಗಿನಕಾಯಿ ಕೆಟ್ಟು ಹೋದರೆ ಯಾವುದೇ ರೀತಿ ಭಯ ಪಡೋದು ಬೇಡ. ಏಕೆಂದರೆ ಅದು ನೈಸರ್ಗಿಕವಾದದ್ದು. ಪೂಜೆ ಮಾಡುವ ಸಂದರ್ಭದಲ್ಲಿ ಕಾಯಿ ಕೆಟ್ಟು ಹೋದರೆ ಮತ್ತೊಂದು ಕಾಯಿ ತೆಗೆದುಕೊಂಡು ಬಂದು ಸಂಕಲ್ಪ ಮಾಡಿ ಕಾಯಿಯನ್ನು ಒಡೆಯಬಹುದು.
ಇನ್ನು ದೇವಸ್ಥಾನದಲ್ಲಿ ಕೆಟ್ಟು ಹೋದರು ಸಹ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಕೆಟ್ಟರೆ ಕೆಟ್ಟ ದೃಷ್ಟಿ ಹೋಯಿತು ಅಂತಾ ಅಂದುಕೊಂಡು ಮುಂದಿನ ಕೆಲಸವನ್ನು ಮಾಡಿ.ಇನ್ನು ಪೂಜೆ ಸಮಯದಲ್ಲಿ ಕಾಯಿ ಒಡೆದಿರುತ್ತೇವೆ ಅಥವಾ ದೇವಸ್ಥಾನದಲ್ಲಿ ಕಾಯಿಯನ್ನು ಒಡೆದಿರುತ್ತೇವೆ. ಕೆಲವೊಂದು ಕಾಯಿಯನ್ನು ಒಡೆದಾಗ ಎರಡು ಕೊಬ್ಬರಿ ಒಳಗೆ ಇರುತ್ತದೇ. ಒಂದು ವೇಳೆ ಈ ರೀತಿ ಆದಾಗ ನಿಮ್ಮ ಮನೆಯಲ್ಲಿ ಪ್ರೆಗ್ನೆಟ್ ಮಹಿಳೆ ಇದ್ದರೆ ಅವರಿಗೆ ಅವಳಿಜಾವಳಿ ಮಗು ಆಗುವ ಸಾಧ್ಯತೆ ಇರುತ್ತದೆ.
ಇನ್ನು ಮನೆಯಲ್ಲಿ ಪೂಜೆಗೆ ಒಡೆದ ಕಾಯಿಯಲ್ಲಿ ಹೂವು ಬಂದಿರುತ್ತದೆ. ಒಂದು ವೇಳೆ ಹೂವು ಬಂದರೇ ತುಂಬಾ ಒಳ್ಳೆಯದು.ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಸಿಗುವ ಸಾಧ್ಯತೆ ಇರುತ್ತದೆ. ಶುಭಕಾರ್ಯ ಆಗುವ ಸಾಧ್ಯತೆ ಕೂಡ ಇರುತ್ತದೆ.
ಇನ್ನು ಕಾಯಿ ಒಡೆದಾಗ ತೊಟ್ಟಿಲು ತರ ಕಾಯಿ ಒಡೆದರೆ ಅದು ಸಂತಾನ ಭಾಗ್ಯ ಆಗುವ ಸೂಚನೆಯನ್ನು ನೀಡುತ್ತದೆ. ಇನ್ನು ಮೂರು ನಾಲ್ಕು ಚೂರು ಆದರೂ ಸಹ ಯಾವುದೇ ತೊಂದರೆ ಆಗುವುದಿಲ್ಲ. ಇನ್ನು ತೆಂಗಿನಕಾಯಿಯಲ್ಲಿ ಮೊಳಗೆ ಒಡೆದು ಗಿಡ ಆಗಿದ್ದರೆ ನಿಮ್ಮ ಮನೆಯ ತೋಟದಲ್ಲಿ ಹಾಕಿ ಬೆಳೆಸಿದರೇ ತುಂಬಾ ಒಳ್ಳೆಯದು. ತೆಂಗಿನಕಾಯಿ ಕಲ್ಪ ವೃಕ್ಷ ಆಗಿರುವುದರಿಂದ ಭಯ ಪಡುವುದು ಬೇಡ. ಮೊಳಕೆ ಬಂದರು ಸಹ ಒಳ್ಳೆಯದು. ಒಂದು ವೇಳೆ ಕೆಟ್ಟು ಹೋದರೆ ಯಾವುದೇ ತೊಂದರೆ ಇರುವುದಿಲ್ಲ.