ತೀರ್ಥ ಯಾತ್ರೆಗಳಲ್ಲಿ ತುಂಬಾ ಜನರು ಗೊತ್ತಿಲ್ಲದೇ ಮಾಡುವ ತಪ್ಪುಗಳು ಇವು!ತಪ್ಪದೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳು!
ತೀರ್ಥ ಯಾತ್ರೆಗೆ ಹೋದಾಗ ಈ ಒಂದು ತೀರ್ಥ ಸ್ನಾನ ಮಾಡಿಕೊಳ್ಳುವುದರಿಂದ ಬಹಳ ಪುಣ್ಯ ಫಲ ಲಭಿಸುತ್ತದೆ ಎಂದು ತೀರ್ಥ ಸ್ಥಳಕ್ಕೆ ಹೋದಾಗ ಸ್ನಾನವನ್ನು ಮಾಡುತ್ತಾರೆ. ತೀರ್ಥ ಯಾತ್ರೆಗೆ ಹೋದಾಗ ಪಾಲಿಸಬೇಕಾದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು.
ತೀರ್ಥ ಕ್ಷೇತ್ರಕ್ಕೆ ಹೋದಾಗ ನೇರವಾಗಿ ತೀರ್ಥ ಸ್ನಾನ ಮಾಡುವುದಕ್ಕೆ ಹೋಗುತ್ತಾರೆ. ಅದರೆ ಇದರಿಂದ ಪುಣ್ಯ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ಏಕೆಂದರೆ ಶುದ್ದಿಯಾಗದೆ ಯಾವುದೇ ಕಾರಣಕ್ಕೂ ಪುಣ್ಯ ಕ್ಷೇತ್ರದಲ್ಲಿ ಸ್ನಾನ ಮಾಡುವುದಕ್ಕೆ ಹೋಗಬೇಡಿ. ಈ ವಿಧಾನವಾಗಿ ಮಾಡಿದರೆ ನದಿಯ ಸ್ವಚ್ಛತೇ ಹಾಳಾಗುತ್ತದೆ.
ಹಿರಿಯರು ಹೇಳುತ್ತಿದ್ದರು ಗಂಗಾ ಸ್ನಾನ ತುಂಗಾ ಪಾನ ಎಂದು ಹೇಳುತ್ತಿದ್ದರು. ಅದರೆ ಹೀಗಾಗಲೇ ಸಾಕಷ್ಟು ಪ್ರಕೃತಿಯನ್ನು ಹಾಳುಮಾಡಿಕೊಂಡು ಬಂದಿದ್ದೇವೆ. ಹಾಗಾಗಿ ಈ ವಿಧಾನವಾಗಿ ತೀರ್ಥ ಕ್ಷೇತ್ರಕ್ಕೆ ಹೋದಾಗ ಮೊದಲಿಗೆ ಒಮ್ಮೆ ರೂಮ್ ನಲ್ಲಿ ಸ್ನಾನ ಮತ್ತು ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳಿ. ನಂತರ ತೀರ್ಥ ಸ್ನಾನವನ್ನು ಮಾಡಿಕೊಳ್ಳುವುದಕ್ಕೆ ಹೋಗಿ. ಈ ವಿಧಾನವಾಗಿ ಮಾಡಿಕೊಳ್ಳುವುದರಿಂದ ನಿಮಗೂ ಒಳ್ಳೆಯದು. ತೀರ್ಥ ಸ್ನಾನ ಆದಾಗ ಅಲ್ಲಿ ಇರುವ ದೇವರ ಹತ್ತಿರ ಹೋಗಿ ಪೂಜೆಯನ್ನು ಸಲ್ಲಿಸಿ ಬರುವುದರಿಂದ ನಿಮಗೆ ಆ ದೈವದ ಅನುಗ್ರಹ ಕೂಡ ಸಂಪೂರ್ಣವಾಗಿ ಪ್ರಾಪ್ತವಾಗುತ್ತದೆ.