ಲಕ್ಕಿ ಸೊಪ್ಪು,ನಿರ್ಗುಂಡಿ ಗಿಡ ದ ಬಂಗಾರದಂತಹ ಉಪಯೋಗ ಇಂದು ತಿಳಿಯಿರಿ ಸ್ನೇಹಿತರೆ.

ಆಯೂರ್ವೇದ ಕಾಲದಿಂದಲೂ ಇದು ದೇವರ ಪೂಜೆಗೆ ಅಷ್ಟೇ ಅಲ್ಲ,ಹಲವಾರು ಸಿದ್ಧೌಷಧ ಹಾಗೂ ಮನೆಮದ್ದು,ಹಳ್ಳಿಗಳ ನಾಟಿ ಔಷಧಿ ಗಳಲ್ಲಿ ಬಳಸಲಾಗುತ್ತದೆ.

ಹಸಿರು,ನೀಲಿ,ಕಪ್ಪು ವರ್ಣಗಳಲ್ಲಿ ಬೆಳೆಯುತ್ತಿದ್ದ ಲಕ್ಕಿಗಿಡದ ಸಂಪೂರ್ಣ ಗಿಡವೇ ಔಷಧಿ ಯುಕ್ತವಾಗಿದೆ.
ಇದು ನಿಮಗೆಷ್ಟು ತಿಳಿದಿದೆ?ಬೇಲಿ ಸಾಲಿನ ಕಳೆಯಂತೆ ನಾವು ಮಲೆನಾಡಿನ ಮನೆಮನೆಯ ಸುತ್ತಲು ನೋಡಿಯೇ ಇರುತ್ತೇವೆ.ಇದರ ಬಳಕೆ ಎಷ್ಟು ಮಾಡಿಕೊಂಡಿದ್ದೇವೆ?

ಹಿಂದಿನ ನಮ್ಮ ಶಾಲಾದಿನಗಳಲ್ಲಿ ಲಕ್ಕಿಯ ಕೋಲು ಮಕ್ಕಳಿಗೆ ತಳಿಸುವ,ಶಿಕ್ಷಿಸಲು ಬಳಸುವ ಬಡಿಗೆಯ ಬೆತ್ತವಾಗಿತ್ತು.ಅದೇ ಲಕ್ಕಿ ಜೀವ ರಕ್ಷಕ ಕವಚವಾಗಿ,ಬಂಗಾರದ ಗಣಿಯಷ್ಟೇ ಚಮತ್ಕಾರಿ ಎಂಬುದು ತಿಳಿದಾಗ ಆಶ್ಚರ್ಯ ವಾಗುತ್ತದೆ.ಖಂಡಿತಾ ಇದರ ಮೇಲೆ ಸಂಶೋಧನೆಗಳು ಮತ್ತಷ್ಟು ಮಾಡುವ ಮೂಲಕ ಲಕ್ಕಿ ಭಾರತದ ದೇಶದ ಲಕ್ಕಾಗಿ ಪರಿಣಮಿಸಲಿ ಎಂಬ ಆಶಯ.

Leave a Comment