ನವರಾತ್ರಿ ಅಖಂಡ ದೀಪ ಹಚ್ಚಲು ಯಾವ ದೀಪ ಸೂಕ್ತವಾದುದು? ಯಾವ ಎಣ್ಣೆ ಹಾಕಬೇಕು, ಬತ್ತಿ ಹೇಗಿರಬೇಕು!

ನವರಾತ್ರಿಯಲ್ಲಿ ಹಚ್ಚುವ ಅಖಂಡ ದೀಪಕ್ಕೆ ಅದರದ್ದೇ ಆದ ಮಹತ್ವವಿದೆ.ಅಖಂಡ ದೀಪ ಹಚ್ಚು ನವರಾತ್ರಿಯನ್ನು ಯಾರು ಮಾಡುತ್ತಾರೋ ಅಂತವರಿಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಮಹತ್ವವಿರುವ ಅಖಂಡ ದೀಪರಾಧನೆ ಹಚ್ಚುವ ಮೊದಲು ಕೆಲವು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿರಂತರವಾಗಿ 10 ದಿನಗಳ ಕಾಲ ಈ ದೀಪ ಉರಿಯಬೇಕು. ಹಾಗಾಗಿ ದೀಪ ಹಚ್ಚುವಾಗ ದೀಪದ ಸೆಲೆಕ್ಷನ್ ಕೂಡ ಕರೆಕ್ಟ್ ಆಗಿ ಇರಬೇಕು.

ದೀಪದ ಬತ್ತಿಯನ್ನು ಸರಿ ಮಾಡುವುದಕ್ಕೆ ಅನುಕೂಲವಾದ ದೀಪವನ್ನು ಆಯ್ಕೆ ಮಾಡಿಕೊಳ್ಳಬೇಕು. ಆದಷ್ಟು ಅಗಲ ಮತ್ತು ಎಣ್ಣೆ ಜಾಸ್ತಿ ಇಡಿಸುವ ದೀಪವನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಈ ಅಖಂಡ ದೀಪ ಹಚ್ಚುವುದಕ್ಕೆ ಯಾವ ದೀಪ ಸೂಕ್ತವಾದದ್ದು ಎಂದು ತಿಳಿಸಿಕೊಡುತ್ತೀನಿ.

ನವರಾತ್ರಿಯಲ್ಲಿ ಅಖಂಡ ದೀಪರಾಧನೆ ಹಚ್ಚುವುದಕ್ಕೆ ಬಯಸುವವರು ಮಣ್ಣಿನಲ್ಲಿ ಆದರೂ ಅಖಂಡ ದೀಪವನ್ನು ಹಚ್ಚಬಹುದು ಅಥವಾ ಹಿತ್ತಾಳೆ, ಬೆಳ್ಳಿ ದೀಪಗಳಲ್ಲಿ ಹಚ್ಚಬಹುದಾಗಿದೆ. ಯಾವುದೆ ಕಾರಣಕ್ಕೂ ಬತ್ತಿ ಪೊಣಿಸುವ ದೀಪವನ್ನು ಬಳಸಬೇಡಿ ಇದರಿಂದ ದೀಪ ಹೋಗುವ ಸಾಧ್ಯತೆ ಇರುತ್ತದೆ. ಬೆಳ್ಳಿ ಕಾಮಾಕ್ಷಿ ದೀಪ, ಅಷ್ಟ ಲಕ್ಷ್ಮಿ ದೀಪವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೂ ಅಖಂಡ ದೀಪ ಹಚ್ಚುವುದಕ್ಕೆ ಅಗಲವಾದ ಮಣ್ಣಿನ ದೀಪ ತುಂಬಾ ಒಳ್ಳೆಯದು.

ದೀಪಕ್ಕೆ ಎಳ್ಳು ಎಣ್ಣೆ ಕೊಬ್ಬರಿ ಎಣ್ಣೆ, ತುಪ್ಪವನ್ನು ಬಳಸಬಹುದು. 9 ದಿನ ಬಳಸಬೇಕು ಹಾಗಾಗಿ ಎಣ್ಣೆಯನ್ನು ಬಳಸಿದರೆ ಒಳ್ಳೆಯದು. ದೀಪಕ್ಕೆ ಬತ್ತಿ ಹಾಕುವಾಗ ಮೂರು ಬತ್ತಿ ಹಾಕಬೇಕಾಗುತ್ತದೆ. ಶಾಂತವಾಗಿ 9 ದಿನಗಳ ಕಾಲ ಉರಿಯುವ ಹಾಗೆ ನೋಡಿಕೊಳ್ಳಬೇಕು. ದೀಪ ಬತ್ತಿಯನ್ನು ತುಳಸಿ ಕಡ್ಡಿಯಿಂದ ಸರಿ ಮಾಡಿಕೊಳ್ಳಬಹುದು.

Leave a Comment