ಬನದ ಹುಣ್ಣಿಮೆ ಇದೆ ಸರಳವಾಗಿ ಲಕ್ಷ್ಮಿ ಪೂಜೆಯನ್ನು ಈ ರೀತಿ ಮಾಡಿ!

ಬನದ ಹುಣ್ಣಿಮೆ :ಜನವರಿ 6ನೇ ತಾರೀಕು ಬಂದಿರುವ ಬನದ ಹುಣ್ಣಿಮೆ ಪೂಜೆಯನ್ನು ಈ ರೀತಿಯಾಗಿ ಮಾಡಬೇಕು.ಪುಷ್ಯಾ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ನಾವು ಪುಷ್ಯಾ ಹುಣ್ಣಿಮೆ ಅಥವಾ ಬನದ ಹುಣ್ಣಿಮೇ ಎಂದು ಕರೆಯುತ್ತೇವೆ.ಈ ಒಂದು ಹುಣ್ಣಿಮೆ ಬಹಳ ವಿಶೇಷ ಎಂದು ಹೇಳಬಹುದು. ಈ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ವಿಶೇಷವಾಗಿ ಪೂಜೇಯನ್ನು ಮಾಡಲಾಗುತ್ತದೆ. ಜೊತೆಗೆ ಜಾತ್ರೆ ಕೂಡ ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ. ಇನ್ನೂ ಮನೆಯಲ್ಲಿ ಈ ರೀತಿಯಾಗಿ ಸರಳವಾಗಿ ಬನದ ಹುಣ್ಣಿಮೆ ಪೂಜೆಯನ್ನು ಮಾಡಬಹುದು. Parrot in house ಮನೆಯಲ್ಲಿ ಗಿಳಿ ಸಾಕುವುದರಿಂದ ಇರುವ ಲಾಭಗಳು ತಿಳಿಯಿರಿ!

ಇನ್ನೂ ಬನಶಂಕರಿ ಮತ್ತೊಂದು ಸ್ವರೂಪ ಆಗಿರುವ ಲಕ್ಷ್ಮಿ ದೇವಿಯ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡಬಹುದು. ಲಕ್ಷ್ಮಿ ಫೋಟೋ ಇಟ್ಟು ಮಲ್ಲಿಗೆ ಹೂವಿನ ಹಾರವನ್ನು ಹಾಕಬೇಕು.ಅರಿಶಿನ ಕುಂಕುಮ ಹಚ್ಚಿ ಗೆಜ್ಜೆ ವಸ್ತ್ರವನ್ನು ಹಾಕಬೇಕು. ನಂತರ ಗುಲಾಬಿ ಹೂವಿನಿಂದ ಅಲಂಕಾರ ಮಾಡಬೇಕು. ದೇವರ ಮುಂದೆ ಎರಡು ದೀಪ ಇಟ್ಟು ಊದುಬತ್ತಿಯಿಂದ ದೀಪವನ್ನು ಹಚ್ಚಿ ಊದುಬತ್ತಿಯನ್ನು ಬೆಳಗಬೇಕು.

ನಂತರ ಲಕ್ಷ್ಮಿ ದೇವಿ ಫೋಟೋ ಮುಂದೆ ಒಂದು ತಟ್ಟೆ ಇಟ್ಟು ಮತ್ತು 5 ವೀಳ್ಯದೆಲೆ ಇಡಬೇಕು. ವೀಳ್ಯದೆಲೆ ಮೇಲೆ ಅರಿಶಿನ ಕುಂಕುಮವನ್ನು ಹಾಗು ಅಕ್ಷತೆಯನ್ನು ಹಾಕಿ ಲಕ್ಷ್ಮಿ ವಿಗ್ರಹವನ್ನು ಇಡಬೇಕು. ನಂತರ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ಈ ಪೂಜೆ ಮಾಡುವ ಮೊದಲು ವಿಗ್ನೇಶ್ವರ ಪೂಜೆಯನ್ನು ಮಾಡಬೇಕು ಮತ್ತು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು. ನೈವೈದ್ಯಕ್ಕೆ ವೀಳ್ಯದೆಲೆ ಅರಿಶಿನ ಕೊಂಬು ಬಾಳೆಹಣ್ಣು ಇಡಬೇಕು. ನಂತರ ದೂಪಾ ಹಚ್ಚಿ ಮತ್ತು ಸಾಂಬ್ರಾಣಿ ಹೊಗೆಯನ್ನು ಹಾಕಬೇಕು. ನಂತರ ಅರ್ಚನೆ ಮಾಡುವುದಕ್ಕೆ ಬೆಳ್ಳಿ ಹೂವು ಅಥವಾ ಹೂವನ್ನು, ಕವಡೆ, ಗೋಮಾತಿ ಚಕ್ರ,ಗುಲಗಂಜಿ ಅನ್ನು ಬಳಸಿ ಅರ್ಚನೆಯನ್ನು ಮಾಡಬಹುದು.ಲಕ್ಷ್ಮಿ ಅಷ್ಟೊತ್ತರ ಹೇಳುತ್ತಾ ಒಂದೊಂದೇ ಹೂವು ಹಾಕಬೇಕು.

ಇನ್ನೂ ದೃಢ ಸಂಕಲ್ಪ ಇದ್ದರೆ ರಾಹು ಕಾಲದಲ್ಲಿ ಬನಶಂಕರಿ ದೇವಸ್ಥಾನಕ್ಕೆ ಹೋಗಿ ನಿಂಬೆ ಹಣ್ಣಿನ ದೀಪರಾಧನೇಯನ್ನು ಮಾಡಬೇಕು. ಈ ರೀತಿ ಮಾಡಿದರೇ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗುತ್ತದೆ.ಅರ್ಚನೆ ಮಾಡಿದ ತಕ್ಷಣ ಮತ್ತೊಮ್ಮೆ ಅರಿಶಿಣ ಕುಂಕುಮ ಹಚ್ಚಿ ದೂಪವನ್ನು ತೋರಿಸಬೇಕು.ನೈವೇದ್ಯಕ್ಕೆ ಸಿಹಿ ಖರ್ಜುರ ಇಡಬೇಕು. ದೀಪ ದೂಪಾ ನೈವೇದ್ಯ ಅದನಂತರ ಮಹಾ ಮಂಗಳಾರತಿ ಮಾಡಬೇಕು. ಕರ್ಪೂರ ಹಚ್ಚಿಕೊಂಡು ಮಹಾ ಮಂಗಳಾರತಿ ಅನ್ನು ಮಾಡಬೇಕು. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ದೇವರ ಹತ್ತಿರ ಕೇಳಿಕೊಂಡು ಪೂಜೆಯನ್ನು ಸಮಾಪ್ತಿಗೊಳಿಸಬಹುದು. Parrot in house ಮನೆಯಲ್ಲಿ ಗಿಳಿ ಸಾಕುವುದರಿಂದ ಇರುವ ಲಾಭಗಳು ತಿಳಿಯಿರಿ!

Leave a Comment