ಮೊಳಕೆ ಬರಿಸಿದ ಹೆಸರು ಕಾಳನ್ನು ಮಿಸ್ ಮಾಡದೇ ಸೇವಿಸಿ!

ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರುಬೇಳೆಯನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ.

ಪ್ರತೀ ಕಪ್ ಮೊಳಕೆ ಭರಿಸಿರುವ ಹೆಸರುಬೇಳೆಯಲ್ಲಿ 31 ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದು ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವುದು. ವಿಟಮಿನ್ ಕೆ ಯ ಆಗರ ವಿಟಮಿನ್ ಕೆ ಯು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಯ ಖನಿಜಾಂಶವನ್ನು ನಿಯಂತ್ರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡುವುದು. ಮೊಳೆಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಒಂದು ಕಪ್ ನಲ್ಲಿ 34 ಮಿ.ಗ್ರಾಂ.ಇದೆ.

ಆರೋಗ್ಯಕರ ದೇಹಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಯ ವಿಟಮಿನ್ ಕೆ ಯನ್ನು ಇದು ಒದಗಿಸುವುದು. ವಿಟಮನ್ ಸಿ ಸಮೃದ್ಧವಾಗಿದೆ ಮೊಳಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಸೋಂಕು ಹಾಗೂ ಕಾಯಿಲೆಗ ವಿರುದ್ಧ ಹೋರಾಡುವುದು. ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ 14 ಮಿ.ಗ್ರಾಂ. ವಿಟಮಿನ್ ಸಿ ಇದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ ಪುರುಷರು 90 ಮಿ.ಗ್ರಾಂ.ನಷ್ಟು ವಿಟಮಿನ್ ಸಿಯನ್ನು ಸೇವಿಸಬೇಕು. ಇದೇ ವೇಳೆ ಮಹಿಳೆಯರು 75 ಮಿ.ಗ್ರಾಂ.ನಷ್ಟು ಸೇವನೆ ಮಾಡಬೇಕು. ವಿಟಮಿನ್ ಸಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಫ್ರೀ ರ್ಯಾಡಿಕಲ್ ನ್ನು ಆ್ಯಂಟಿಆಕ್ಸಿಡೆಂಟ್ ಗಳು ತಟಸ್ಥಗೊಳಿಸದೆ ಇದ್ದರೆ ಆಗ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು.

ಇದು ಹಾನಿ ಹಾಗೂ ಉರಿಯೂತ ಉಂಟು ಮಾಡಿ ರೋಗಗಳಿಗೆ ಕಾರಣವಾಗುವುದು. ವಿಟಮಿನ್ ಸಿಯಲ್ಲಿ ಕಾಲಜನ್ ಕೂಡ ಇದ್ದು, ಇದು ಚರ್ಮ, ಅಂಗಾಂಗವನ್ನು ಬಲಗೊಳಿಸುವುದು.ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು. ರಕ್ತಸಂಚಾರ ಸುಗಮಗೊಳಿಸುವುದು ಮೊಳಕೆಯುಕ್ತ ಹೆಸರುಬೇಳೆ ಕಾಳುಗಳಲ್ಲಿ ಇರುವಂತಹ ಕಬ್ಬಿಣ ಹಾಗೂ ತಾಮ್ರದ ಅಂಶವು ರಕ್ತದಲ್ಲಿನ ಕೆಂಪು ರಕ್ತದ ಕಣಗಳನ್ನು ನಿರ್ವಹಣೆ ಮಾಡಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು.ಇದರಿಂದ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು.

ಆಯುರ್ವೇದದ ಮೂಲಕ ‘ಬಾಡಿ ಹೀಟ್’ ಕಡಿಮೆ ಮಾಡಲು ಸರಳ ಟಿಪ್ಸ್ ಜೀರ್ಣಕ್ರಿಯೆಗೆ ನೆರವಾಗುವುದು ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು.

ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು. ತೂಕ ಇಳಿಸಲು ಸಹಕಾರಿ ಮೊಳಕೆ ಭರಿಸಿದ ಹೆಸರುಬೇಳೆ ಕಾಳುಗಳು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಇದರಲ್ಲಿ ಪೋಷಕಾಂಶಗಳು ಉನ್ನತ ಮಟ್ಟದಲ್ಲಿದೆ. ಆದರೆ ಕ್ಯಾಲರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.

Leave a Comment