ಪೈಲ್ಸ್ ಆಪರೇಷನ್ ಆದ ನಂತರ ಎಷ್ಟು ದಿನಗಳ ಕಾಲ ನೋವಿರುತ್ತದೆ?ಬೇಗನೆ ರಿಕವರಿ ಯಾಗಲು ಏನು ಮಾಡಬೇಕು!

ಈ ಪೈಲ್ಸ್ ಅಫೇರಷನ್ ನಲ್ಲಿ ಹಲವಾರು ವಿಧಾನಗಳು ಇವೆ. ಮೂಲ್ಯವಾಗಿ ಇದರಲ್ಲಿ ಲೆಝರ್ ಚಿಕಿತ್ಸೆ, ಪೈಲ್ಸ್ ಓಪನ್ ಸರ್ಜರಿ ಮತ್ತು ಸ್ಟೇಪಲಾರ್ ಮೂಲಕ ಸರ್ಜರಿ ಮಾಡುತ್ತಾರೆ. ಇನ್ನು ಹಲವಾರು ರೀತಿಯ ಸರ್ಜರಿಗಳು ಈ ಪೈಲ್ಸ್ ನಲ್ಲಿ ಇದೆ. ವೈದ್ಯರು ನಿಮ್ಮ ಪೈಲ್ಸ್ ಅನ್ನು ನೋಡಿ ಅದನ್ನು ಪರೀಕ್ಷೆ ಮಾಡಿ ಯಾವ ಸರ್ಜರಿ ನಿಮಗೆ ಸೂಕ್ತವಾಗುತ್ತದೆ ಅಂತಹ ಸರ್ಜರಿ ಮಾಡಲಾಗುತ್ತದೆ. ಇನ್ನು ಸಾಕಷ್ಟು ಕಡೆ ಲೆಝರ್ ಸರ್ಜರಿ ಇರುವುದಿಲ್ಲ.ಹಾಗಾಗಿ ಹಲವಾರು ಕಡೆ ಈ ಪೈಲ್ಸ್ ಗೆ ಓಪನ್ ಸರ್ಜರಿ ಅನ್ನು ಮಾಡುತ್ತಾರೆ.

ಲೆಝರ್ ಯಿಂದ ಆಪರೇಷನ್ ಮಾಡಿದರೆ ಒಂದೇ ವಾರದಲ್ಲಿ ಕೂಡ ನೀವು ರಿಕವರಿ ಆಗಬಹುದು ಮತ್ತು ನೋವು ಕೂಡ ಕಡಿಮೆ ಇರುತ್ತದೆ. ಇನ್ನು ಓಪನ್ ಪೈಲ್ಸ್ ಸರ್ಜರಿ ಮಾಡಿದರೆ ರಿಕವರಿ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಅಂದರೆ ಕನಿಷ್ಠ 15 ರಿಂದ 1 ತಿಂಗಳವರೆಗೂ ಕೂಡ ಆಗಬಹುದು. ಈದು ಕೂಡ ನಿಮ್ಮ ಪೈಲ್ಸ್ ನ ಸೈಜ್ ಮೇಲೆ ಮತ್ತು ಅಪರೆಷನ್ ಮೇಲೆ ಡಿಪೆಂಡ್ ಆಗಿರುತ್ತದೆ.

ಆಪರೇಷನ್ ಆದನಂತರ ಯಾವೆಲ್ಲಾ ರೀತಿಯ ಮುನ್ನೆಚರಿಕೆ ತೆಗೆದುಕೊಳ್ಳಬೇಕು ಎಂದರೆ ಆಪರೇಷನ್ ಆದ ಬಳಿಕ ಹಲವಾರು ರೀತಿಯ ನೋವು ನಿವಾರಕ ಮಾತ್ರೆಗಳನ್ನು ಕೊಟ್ಟಿರುತ್ತಾರೆ. ಇವುಗಳನ್ನು ನೀವು ತಪ್ಪದೆ ತೆಗೆದುಕೊಳ್ಳಿ. ನೀವು ಟಾಯ್ಲೆಟ್ ಗೆ ಹೋಗಿ ಬರುವಾಗ ಸ್ವಿಜ್ ಬಾತ್ ಮಾಡಲೇಬೇಕು. ಒಂದು ಟಬ್ ನಲ್ಲಿ ಬಿಸಿ ನೀರು ಹಾಕಿ ಕುಳಿತುಕೊಳ್ಳುವುದರಿಂದ ನಿಮ್ಮ ನೋವು ಬೇಗನೆ ಕಡಿಮೆ ಆಗುತ್ತದೆ. ಇನ್ನು ವೈದ್ಯರು ನೀಡಿರುವ ಆ ಕ್ರೀಮ್ ಗಳನ್ನು ಆ ಸ್ಥಳಕ್ಕೆ ತಪ್ಪದೆ ಹಚ್ಚಿಕೊಳ್ಳಿ.

ಮುಖ್ಯವಾಗಿ ಗಟ್ಟಿಯಾದ ಪದಾರ್ಥಗಳನ್ನು ಸೇವನೆ ಮಾಡಬೇಡಿ.ನನ್ ವೆಜ್ ಹಾಗು ಯಾವ ಆಹಾರ ತಿಂದರೆ ಜೀರ್ಣ ಆಗುವುದಿಲ್ಲವೋ ಅಂತಹ ಆಹಾರ ಸೇವನೆ ಮಾಡಬೇಡಿ. ಆದಷ್ಟು ಸುಲಭವಾಗಿ ಜೀರ್ಣ ಆಗುವ ಆಹಾರ ಸೇವನೇ ಮಾಡಿ. ಇದರಿಂದ ನಿಮಗೆ ಟಾಯ್ಲೆಟ್ ಗೆ ಹೋದಾಗ ನೋವು ಆಗುವುದಿಲ್ಲ ಮತ್ತು ನಿಮಗೆ ಆಪರೇಷನ್ ಮಾಡಿದಾಗ ವೈದ್ಯರು ನಿಮಗೆ ಟಾಯ್ಲೆಟ್ ಕ್ಲಿಯರ್ ಆಗಲು ಹಲವಾರು ರೀತಿಯ ಔಷಧಿಗಳನ್ನು ಕೊಟ್ಟಿರುತ್ತಾರೆ. ಅದನ್ನು ತಪ್ಪದೆ ತೆಗೆದುಕೊಳ್ಳಿ ಹಾಗು ಟಾಯ್ಲೆಟ್ ಮಾಡುವಾಗ ತಿನುಕಿ ಮಾಡಬೇಡಿ. ಇದರಿಂದ ಸ್ಟಿಚ್ ಬಿಚ್ಚುವ ಸಾಧ್ಯತೆ ಇರುತ್ತದೆ. ನಿಮಗೆ ಯಾವಾಗ ಬರುತ್ತದೆಯೋ ಅವಾಗ ಟಾಯ್ಲೆಟ್ ಮಾಡಿ.

ಇನ್ನು ಓಪನ್ ಸರ್ಜರಿ ಮಾಡಿಸಿದರೆ ಹಾಸ್ಪಿಟಲ್ ನಲ್ಲಿ 2 ರಿಂದ 3 ದಿನ ಇರಬೇಕಾಗುತ್ತದೆ. ಹಾಸ್ಪಿಟಲ್ ನಲ್ಲಿ ಇದ್ದಾಗ ನಿಮಗೆ ನೋವು ಅನಿಸುವುದಿಲ್ಲಾ. ಅದರೆ ಮನೆಗೆ ಬಂದಾಗ ಟಾಯ್ಲೆಟ್ ಗೆ ಹೋದಾಗ ನೋವು ಜಾಸ್ತಿ ಆಗುತ್ತದೆ. ಅದರೆ 15 ದಿನ ತಡೆದುಕೊಂಡರೆ ಎಲ್ಲಾ ನೋವು ಕೂಡ ಕಡಿಮೆ ಆಗುತ್ತದೆ ಮತ್ತು ಮೊದಲಿನ ತರಾನೇ ನೀವು ಆಕ್ಟಿವ್ ಆಗಿ ಇರುತ್ತಿರಿ. ಇನ್ನು ಪೈಲ್ಸ್ ಆಪರೇಷನ್ ಮಡಿಸಬೇಕು ಎಂದು ನೀವು ಅಂದುಕೊಂಡಿದ್ದಾರೆ ಚಳಿಗಾಲದಲ್ಲಿ ಮಾಡಿಸಿ. ಏಕೆಂದರೆ ಚಳಿಗಾಲದಲ್ಲಿ ಯಾವಾಗಲು ಕೋಲ್ಡ್ ಆಗಿರುತ್ತದೆ ಮತ್ತು ನಿಮಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ.

Leave a Comment