ಈ ಜ್ಯೂಸ್ ಸಿಕ್ಕರೆ ಸಕ್ಕರೆ ಕಾಯಿಲೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು.

ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು ಕಂಡು ಬಂದು, ಹೃದಯಘಾತ, ಪಾರ್ಶ್ವವಾಯುದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಏನಿದು ಕೊಲೆಸ್ಟ್ರಾಲ್?

ಕೊಲೆಸ್ಟ್ರಾಲ್ ಎನ್ನುವುದು ಒಂದು ರೀತಿಯ ಮೇದಸ್ಸು ಅಂದರೆ ಮೇಣದಂತಹ ಅಂಶ. ಇದನ್ನು ನಮ್ಮ ದೇಹವು ಬೇಕಿರುವಾಗ ಬಳಕೆ ಮಾಡಿಕೊಳ್ಳುವುದು.

ಇದರಲ್ಲಿಯೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಎನ್ನುವ ಎರಡು ವಿಧಗಳು ಇವೆ. ಇಲ್ಲಿ ನೆನಪಿ ನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂ ದರೆ, ರಕ್ತದಲ್ಲಿಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ, ಆರೋಗ್ಯಕ್ಕೆ ಇದರಿಂದ ಲಾಭಗಳು ಹೆಚ್ಚು.

ಅದೇ ರೀತಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾ ದರೆ, ರಕ್ತದ ಚಲನೆಯಲ್ಲಿ ಏರುಪೇರು ಉಂಟಾಗಿ, ರಕ್ತ ಹೆಪ್ಪುಗಟ್ಟು ವಿಕೆಗೆ ಕಾರಣವಾಗುತ್ತದೆ. ಕೊನೆಗೆ ಇದೇ ಕಾರಣದಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ.

ಪ್ರಮುಖವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂ ತ್ರಣದಲ್ಲಿ ಇಟ್ಟುಕೊಳ್ಳುವುದು ಬಹುಮುಖ್ಯವಾಗಿದೆ.

ಪ್ರಮುಖವಾಗಿ ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಂಡಾಗ, ಇದರ ಅಪಾಯವನ್ನು ನಿಯಂತ್ರಿಸಬಹುದು.​

ದೇಹದ ಕೊಲೆಸ್ಟ್ರಾಲ್ ಮಿತಿಯಲ್ಲಿಡಲು ಸಿಂಪಲ್ ಮನೆಮದ್ದು
ದೇಹದ ಕೊಲೆಸ್ಟ್ರಾಲ್ ಮಿತಿಯಲ್ಲಿಡಲು ಸಿಂಪಲ್ ಮನೆಮದ್ದು

ಸೋಯಾ ಹಾಲು
ಸೋಯಾ ಹಾಲು ಕುಡಿದರೆ, ಮೂಳೆಗಳು ಬಲಗೊಳ್ಳು ತ್ತವೆ ಎನ್ನುವ ವಿಷಯ ನಿಮಗೂ ಕೂಡ ಗೊತ್ತಿರ ಬಹುದು!

ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತ ಗೊಂಡಿಲ್ಲ, ಬದಲಿಗೆ ಸೋಯಾ ಹಾಲಿನಲ್ಲಿ ವಿಟಮಿನ್ ಬಿ 12, ಪೊಟ್ಯಾಶಿಯಮ್, ಕಬ್ಬಿಣಾಂಶ ಹಾಗೂ ನಾರಿ ನಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.

ಹೀಗಾಗಿ ಈ ಸೋಯಾ ಹಾಲನ್ನು ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಕೊಲೆಸ್ಟ್ರಾಲ್‌ ಮಟ್ಟವನ್ನು ಸಮತೋ ಲನದಲ್ಲಿ ಇರಿಸಿಕೊಳ್ಳಬಹುದು. ಮುಖ್ಯವಾಗಿ ಈ ಹಾಲಿ ನಲ್ಲಿ ಉತ್ತಮ ಪ್ರಮಾಣದಲ್ಲಿ ಕೊಬ್ಬಿನಾಂಶ ಕೂಡ ಕಂಡು ಬರುವುದರಿಂದ, ಹೃದಯದ ಆರೋಗ್ಯಕ್ಕೆ ಹೃದ ಯಕ್ಕೆ ಕೂಡ ಸಹಕಾರಿ ಎಂದು ಹೇಳಲಾಗುತ್ತದೆ.

ಟೊಮೆಟೊ ಜ್ಯೂಸ್

ಈಗಾಗಲೇ ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದು ಲೋಟ ಉಪ್ಪು ಹಾಗೂ ಸಕ್ಕರೆ ರಹಿತ ಟೊಮೆಟೊ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆ ಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಇದಕ್ಕೆ ಪ್ರಮುಖ ಕಾರಣ, ಟೊಮೆಟೊ ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಹಾಗೂ ನಿಯಾಸಿನ್‌ ಯಥೇಚ್ಛ ವಾಗಿ ಕಂಡು ಬರುತ್ತದೆ.​
ಗ್ರೀನ್ ಟೀ

ಆರೋಗ್ಯ ತಜ್ಞರು ಹೇಳುವ ಪ್ರಕಾರ ಹೃದಯಕ್ಕೆ ತೊಂ ದರೆ ಕೊಡುವ ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅಂದರೆ ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವ ನ್ನು ಕಡಿಮೆ ಮಾಡುವ ಶಕ್ತಿ ಗ್ರೀನ್ ಟೀಯಲ್ಲಿದೆ ಎಂದು ಸಲಹೆ ನೀಡುತ್ತಾರೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾದಷ್ಟು ಮನು ಷ್ಯನ ಹೃದಯದ ಆರೋಗ್ಯ ಹೆಚ್ಚುತ್ತದೆ. ಹೀಗಾಗಿ ದಿನಕ್ಕೆ ಎರಡು ಬಾರಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

ಅನಾನಸ್ ಹಣ್ಣಿನ ಜ್ಯೂಸ್

ಹುಳಿ ಸಿಹಿ ಮಿಶ್ರಿತ ಅನಾನಸ್ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಈ ಹಣ್ಣಿನಿಂದ ಮಾಡಿದ ಜ್ಯೂಸ್ ಅಂತೂ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ.

ಪ್ರಮುಖವಾಗಿ ಈ ಹಣ್ಣಿನಲ್ಲಿ ಕಂಡು ಬರುವ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು, ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮಿಂದ ದೂರವಾಗಲು ನೆರವಾಗುತ್ತದೆ.

ಹೀಗಾಗಿ ಈ ಹಣ್ಣನ್ನು ಮಿತವಾಗಿ ಸೇವನೆ ಮಾಡುವುದ ರಿಂದ ಅಥವಾ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವು ದರಿಂದ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗ ದಂತೆ ತಡೆಯುತ್ತದೆ.

Leave a Comment